April 24, 2024

Bhavana Tv

Its Your Channel

ಎಚ್‌ಐವಿ ಸೋಂಕಿತರಿಗೆ ದಿನಸಿ ಕಿಟ್: ಕೀಳರಿಮೆ ತೊರೆಯಲು ಡಾ.ಸತ್ಯನಾರಾಯಣ ರೆಡ್ಡಿ ಸಲಹೆ

ಬಾಗೇಪಲ್ಲಿ:- ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಳ್ಳುವ ಮೂಲಕ ನಮ್ಮತನ ನಾವು ಕಾಪಾಡಿಕೊಳ್ಳಬೇಕು. ಯಾರ ಬಗ್ಗೆಯೂ ಕೀಳರಿಮೆ ತರವಲ್ಲ ಎಂದು ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸಿ.ಎನ್ ಸತ್ಯನಾರಾಯಣರೆಡ್ಡಿ ಹೇಳಿದರು.

ಬಾಗೇಪಲ್ಲಿ ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಿಂಭಾಗದ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ಕೂರ್ ಸಂಸ್ಥೆ (ಕ್ರಿಶ್ಚಿಯನ್ ಕೌನ್ಸಿಲ್ ರೂರಲ್ ಡೆವಲಪ್ಮೆಂಟ್) ಹಾಗೂ ಎಫ್. ಇ.ಎಸ್. ಸಂಸ್ಥೆಯ (  ಫೌಂಡೇಶನ್  ಫಾರ್ ಎಕಲಜಿಕಲ್ ಸೊಸೈಟಿ ಯ ಸಹಯೋಗದಲ್ಲಿ  ಸೋಮವಾರ ನಡೆದ ಕೊರೊನಾದಿಂದ ಸಂಕಷ್ಟದಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಹಾಗೂ ಎಚ್‌ಐವಿ ಸೋಂಕಿತರಿಗೆ ಹಾಗೂ ನಿರ್ಗತಿಕರಿಗೆ ದಿನಸಿ ಕಿಟ್‌ಗಳು, ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊರೊನಾದಿಂದ ಸಾಕಷ್ಟು ಜನರ ಬದುಕನ್ನು ಕಷ್ಟಕ್ಕೆ ದೂಡಿದೆ. ಉಳ್ಳವರು ಮಾನವೀಯ ಮೌಲ್ಯವುಳ್ಳ ಸಂಸ್ಥೆಯ ಮೂಲಕ ದಿನಸಿ ಪದಾರ್ಥಗಳನ್ನು ನೀಡುತ್ತಿದ್ದಾರೆ.

ಆಹಾರದಷ್ಟೆ ಆರೋಗ್ಯವೂ ಮುಖ್ಯವಾಗಿದೆ. ಆರೋಗ್ಯ ಕಾಪಾಡಿಕೊಳ್ಳುವ ದಿಸೆಯಲ್ಲಿ ಆಗಾಗ್ಗೆ ವೈದ್ಯಕೀಯ ಸೌಲಭ್ಯ ಪಡೆಯಬೇಕು ಎಂದರು. ಕೊರ್ ಸಂಸ್ಥೆ (ಕ್ರಿಶ್ಚಿಯನ್ ಕೌನ್ಸಿಲ್ ರೂರಲ್ ಡೆವಲಪ್ಮೆಂಟ್) ಸಂಸ್ಥೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎನ್.ಜಿ. ಶಿವಾರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದ  ,೨೩೦ ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು ಎಂದು ಹೇಳಿದರು.,ಈ ಸಂದರ್ಭದಲ್ಲಿ  ವೆಂಕಟೇಶ್ ಬಾಬು,ಶೋಭಾ, ಅರುಣ,ಜ್ಯೋತಿ, ನಾಗರತ್ನಮ್ಮ, ನಾಗರಾಜಪ್ಪ,ಸುಗುಣ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: