April 14, 2024

Bhavana Tv

Its Your Channel

ಸಾಗುವಳಿ ಚೀಟಿ ವಿಳಂಬಕ್ಕೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಪ್ರಚಾರಾಂದೋಲನ ವಾಹನಕ್ಕೆ ಚಾಲನೆ

ಬಾಗೇಪಲ್ಲಿ:- ತಾಲ್ಲೂಕು ಗೋಮಾಳ, ಹುಲ್ಲುಗಾವಲು ಜಮೀನುಗಳಲ್ಲಿ ಹಂಗಾಮಿಯಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಮಂಜೂರಿಗೆ ಬಗರ್‌ಹುಕುಂ ಮೂಲಕ ಸಕ್ರಮಗೊಳಿಸಲು ಸಮಿತಿ ಇನ್ನೂ ಕಾರ್ಯಾರಂಭಗೊAಡಿಲ್ಲ. ಹೀಗಾಗಿ ರೈತರು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.

ತಾಲೂಕು ಮಟ್ಟದಲ್ಲಿ ದರಕಾಸ್ತ್ ಸಮಿತಿ ಮೂಲಕ ಮಂಜೂರಾದ ರೈತರಿಗೆ ಸಾಗುವಳಿ ಪತ್ರ ನೀಡುವುದು ನಿಯಮ. ಆದರೆ ಕರ್ನಾಟಕ ಭೂ ಕಂದಾಯ ೧೯೬೬ನಿಯಮ ೧೦೮(ಇ)ಅನ್ವಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ದರಕಾಸ್ತ್ ಸಮಿತಿ ರಚನೆಯಾಗ ಬೇಕೆಂಬುದು ಸರಕಾರದ ಉದ್ದೇಶ. ದರಖಾಸ್ತ್ ಸಮಿತಿ ಮಾಡಿಲ್ಲಾ, ಹಾಗೂ ಬಾಗೇಪಲ್ಲಿ ತಾಲ್ಲೂಕು ಆಡಳಿತ ಯಂತ್ರಾAಗ ಸಂಪೂರ್ಣ ಭ್ರಷ್ಟಾಚಾರ ನಡೆಯುತ್ತದೆ ಆದ್ದರಿಂದ ಅರ್ಜಿಗಳು ವಿಲೇವಾರಿ ಆಗುತ್ತದೆ ಇದಕ್ಕೆ ತಾಲ್ಲೂಕು ಆಡಳಿತ ಅಧಿಕಾರಿ ವರ್ಗದವರು ಹಾಗೂ ಜನ ಪ್ರತಿನಿಧಿಗಳೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಬಾಗೇಪಲ್ಲಿ ತಾಲ್ಲೂಕು ಮಾಜಿ ಶಾಸಕ ಹಾಗೂ ಪಿ.ಎಸ್.ಎಸ್.ಸಂಸ್ಥಾಪಕರಾದ ಜಿ.ವಿ.ಶ್ರೀರಾಮರೆಡ್ಡಿ ಗಂಭೀರವಾಗಿ ಆರೋಪಿಸಿದರು. ಅವರು ಬಾಗೇಪಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವಿಗ್ರಹ ಮುಂದೆ ಮುಂದಿನ ತಿಂಗಳು ಆಗಸ್ಟ್ ೨ ರಂದು ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಕಛೇರಿಯ ಆವರಣದಲ್ಲಿ ನಡೆಯುವ ಪ್ರಜಾ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ವಿಲೇವಾರಿಗೆ ಸಂಬAಧಿಸಿದAತೆ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಪ್ರಚಾರಾಂದೋಲನ ಬೃಹತ್ ಪ್ರತಿಭಟನೆ ಧರಣಿ ಗೆ ವಾಹನ ಮುಂದೆ ಪಿ.ಎಸ್. ಎಸ್.ಪಕ್ಷದ ಬಾವುಟ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಬೀಸುವ ಮೂಲಕ ಚಾಲನೆ ನೀಡಿದರು.

ತದನಂತರ ಮಾತನಾಡಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ನನ್ನ ಜೀವನದ ಮಹೋನ್ನತ ಗುರಿಯಾಗಿತ್ತು. ಅದು ಅಭಿಜಿತ ಕೋಲಾರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಅರಣ್ಯ ಭೂಮಿ ಸಾಗುವಳಿ ಮಾಡಿದವರಿಗೆ ಹಕ್ಕುಪತ್ರ ನೀಡಲು ನನ್ನ ಜೀವಮಾನದ ಉದ್ದಕ್ಕೂ ಹೋರಾಟ ನಡೆಸಿ ಜೈಲು ಸೇರಿದ್ದೇನೆ ನಾನು ಎರಡು ಬಾರಿ ಶಾಸಕನಾಗಿದ್ದಾಗ ಮಾತ್ರ ಸಾಗುವಳಿ ಚೀಟಿ ವಿತರಣೆ ಮಾಡಿದ್ದೇನೆ ಆದರೆ ಅಂದಿನಿoದ ಇಂದಿನವರೆಗೂ ನೂರಾರು ಬಡವರು ದಲಿತರು ಬಗುರ್ ಹುಕುಂ ಸಾಗುವಳಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದರೂ ನೂರಾರು ಅರ್ಜಿಗಳು ಮಂಜೂರಾತಿ ಮಾಡದೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸುಮಾರು ೯೭೬೦ ಅರ್ಜಿಗಳನ್ನು ಇತ್ಯರ್ಥ ಮಾಡದೆ ತಾಲ್ಲೂಕು ಯಂತ್ರಾAಗ ಹಾಗೂ ಜನ ಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು. ಇದೇ ಅಲ್ಲದೇ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಎಲ್ಲಾ ಕಛೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಕೆಲಸ ಮಾಡಬೇಕು, ನಿವೇಶನ ರಹಿತರಿಗೆ ನಿವೇಶನ ನೀಡಬೇಕು, ಹಾಗೂ ಇನ್ನೂ ಅನೇಕ ಬೇಡಿಕೆಯನ್ನು ಈಡೇರಿಸಬೇಕು ಇಲ್ಲದ್ದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸುತ್ತೆವೆ ಎಂದು ಹೇಳಿದರು.
ಅವಕಾಶ ಇದ್ದರೂ ಅಧಿಕಾರಿಗಳು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಅವರಿಗೆಲ್ಲಾ ಅ, ಆ, ಇ, ಈ ಹೇಳಿಕೊಟ್ಟಂತಾಗಿದೆ ಎಂದರು.

ತಹಸೀಲ್ದಾರ್‌ಗಳಿಗೆ ಆರ್‌ಟಿಸಿ ಜವಾಬ್ದಾರಿ ಇದೆ. ಅದನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ. ಯಾರ ಕೈಯಲ್ಲಿ ಅಸ್ತ್ರ ಇದೆಯೋ ಅವರೇ ಅದನ್ನು ಬಳಸುತ್ತಿಲ್ಲ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಪಿ.ಎಸ್. ಎಸ್.ಪಕ್ಷದ ಜಿಲ್ಲಾ ಸಂಚಾಲಕ ಚನ್ನರಾಯಪ್ಪ, ಪ್ರಗತಿಪರ ರೈತ ಜಿ.ಎಂ ರಾಮಕೃಷ್ಣಪ್ಪ , ಎಚ್.ಎನ್ ಚಂದ್ರಶೇಖರೆಡ್ಡಿ, ಆರ್ ಚಂದ್ರಶೇಖರೆಡ್ಡಿ, ಎಲ್ ವೆಂಕಟೇಶ್, ಟಿ.ಎಲ್. ವೆಂಕಟೇಶ್, ನಾರಾಯಣಸ್ವಾಮಿ, ಸಿ.ಕೆ. ನರಸಿಂಹಪ್ಪ, ರಾಮಾಂಜಿನಪ್ಪ ಬಾಷಾಸಾಬ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು ಗೋಪಾಲಕೃಷ್ಣ, ಬೈರಾರೆಡ್ಡಿ, ಪೆದ್ದಮುನಿಯಪ್ಪ, ಪ್ರೆಮೀಳಮ್ಮ.ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು

ವರದಿ: ಗೋಪಾಲ ರೆಡ್ಡಿ ಬಾಗೆಪಲ್ಲಿ

error: