April 25, 2024

Bhavana Tv

Its Your Channel

ಬಾಗೇಪಲ್ಲಿ ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೆಹಬೂಬ್ ಸಾಬಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಬಾಗೇಪಲ್ಲಿ:- ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯೋಪಾಧ್ಯಾಯ ಮೆಹಬೂಬ್ ಸಾಬಿ ೨೦೨೧-೨೨ನೇ ಸಾಲಿನ ರಾಜ್ಯ ಸರ್ಕಾರದ ಚಿಕ್ಕಬಳ್ಳಾಪುರ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಲತಃ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದವರು. ಇವರು ಶಿಕ್ಷಕನಾಗಿ ಹಾಗೂ ಮುಖ್ಯ ಶಿಕ್ಷಕನಾಗಿ ಸುಮಾರು ೩೦ ವರ್ಷಗಳ ಸೇವಾ ಅವಧಿಯಲ್ಲಿ ಸುಮಾರು ೨೦ ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ.
ನಿಷ್ಠೆ, ಪ್ರಾಮಾಣಿಕತೆ ಜೊತೆಗೆ ಸಮುದಾಯದ ಸಹಕಾರ ಪಡೆದು ಕರ್ತವ್ಯ ನಿರ್ವಹಿಸಿದರೆ ಸರ್ಕಾರಿ ಶಾಲೆಗಳನ್ನು ಸುಧಾರಣೆ ಮಾಡಲು ಸಾಧ್ಯ ಎಂಬುದನ್ನು ತೊರಿಸಿ ಕೊಟ್ಟ ಬಾಗೇಪಲ್ಲಿ ತಾಲ್ಲೂಕು ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆಹಬೂಬ್ ಸಾಬಿ ಮುಖ್ಯೋಪಾಧ್ಯಾಯರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮೆಹಬೂಬ್ ಸಾಬಿ ಮಾತನಾಡಿ ನನಗೆ ದೊರೆತ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಬಾಗೇಪಲ್ಲಿ ತಾಲ್ಲೂಕಿಗೆ ದೊರೆತ ಪ್ರಶಸ್ತಿಯಾಗಿದೆ ಬಾಗೇಪಲ್ಲಿ ತಾಲ್ಲೂಕಿನ ಎಲ್ಲಾ ಗುರು ಹಿರಿಯರ ಹಾಗೂ ಸ್ನೇಹಿತರ ಹಾರೈಕೆಯ ಪ್ರತಿಫಲವೇ ನನ್ನನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಎಂದು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎಂದು ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಸಂತಸ ವಿಷಯವನ್ನು ಪತ್ರಿಕೆಗೆ ಹಂಚಿಕೊAಡಿದ್ದಾರೆ.
ಜಿಲ್ಲಾ ಉತ್ತಮ ಪ್ರಶಸ್ತಿ ವಿಜೇತರಿಗೆ ಬಾಗೇಪಲ್ಲಿ ಬಿಇಓ ಸಿದ್ದಪ್ಪ. ಎಸ್,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ ವೆಂಕಟರವಣ, ಬಾಗೇಪಲ್ಲಿ ತಾಲ್ಲೂಕು ಬಿ.ಆರ್.ಸಿ ,ಸಿ.ಆರ್.ಸಿ, ಹಾಗೂ ಸರ್ಕಾರಿ ಬಾಲಕರ ಪ್ರೌಢಶಾಲೆಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಶುಭಾಶಯಗಳನ್ನು ಕೊರಿದ್ದಾರೆ.

ವರದಿ:ಗೋಪಾಲ ರೆಡ್ಡಿ ಬಾಗೇಪಲ್ಲಿ

error: