April 19, 2024

Bhavana Tv

Its Your Channel

ಶ್ರೀ ಅಮರನಾರಾಯಣಸ್ವಾಮಿ ಬಲಿಜ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಬಾಗೇಪಲ್ಲಿ:-ಕರ್ನಾಟಕ ರಾಜ್ಯಾದ್ಯಂತ ೪೫ಲಕ್ಷ ಜನಸಂಖ್ಯೆ ಇರುವ ಬಲಿಜ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಲಿ, ಕೈವಾರ ಅಮರನಾರೇಯಣ ಜಯಂತಿಯ, ಕೃಷ್ಣದೇವರಾಯ ಜಯಂತಿ ಹಾಗೂ ೩ಎಯಿಂದ ೨ಎಗೆ ಸೇರಿಸುವ ಮೂಲಕ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಬಾಗೇಪಲ್ಲಿ ತಾಲ್ಲೂಕು ಶ್ರೀ ಅಮರನಾರಾಯಣ ಸ್ವಾಮಿ ಬಲಿಜ ಸಂಘದ ನೂತನ ಗೌರಾಧ್ಯಕ್ಷರಾದ ಎ.ಜಿ.ಸುಧಾಕರ್ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದಲ್ಲಿ ಬಾಗೇಪಲ್ಲಿ ತಾಲ್ಲೂಕು ಅಮರನಾರಾಯಣ ಬಲಿಜ ಸಂಘದ ವತಿಯಿಂದ ಸೋಮವಾರ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಶ್ರೀ ಅಮರನಾರಾಯಣ ಸ್ವಾಮಿ ಬಲಿಜ ಸಂಘ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿ ಕರ್ನಾಟಕದಲ್ಲಿ ೪೫ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಲಿಜ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನಮ್ಮ ಸಮುದಾಯಕ್ಕೆ ಮಾಡಿದ ಅನ್ಯಾಯವನ್ನು ಹಾಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸರಿಪಡಿಸಿ ಬಲಿಜ ಸಮುದಾಯಕ್ಕೆ ನ್ಯಾಯ ನೀಡುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲವಾದರೆ ಹೋರಾಟ ಮೂಲಕವೇ ನಮ್ಮ ಹಕ್ಕನ್ನು ಮತ್ತೆ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಲಿಜ ಸಮದಾಯದ ಹಿರಿಯ ಮುಖಂಡ ಬಿ.ಆರ್.ನರಸಿಂಹ ನಾಯ್ಡು ಮಾತನಾಡಿ ಈ ಹಿಂದೆ ನಡೆದ ಸಭೆಯಲ್ಲಿ ಬಾಗೇಪಲ್ಲಿ ತಾಲ್ಲೂಕು ಸಮಸ್ತ ಬಲಿಜ ಸಮದಾಯ ಸಭೆಯನ್ನು ಸೇರಿ ಬಾಗೇಪಲ್ಲಿ ತಾಲ್ಲೂಕು ಶ್ರೀ ಅಮರನಾರಾಯಣ ಸ್ವಾಮಿ ಬಲಿಜ ಸಂಘ ಅಸ್ತಿತ್ವಕ್ಕೆ ಬಂದಿದ್ದು ಇಂದು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪಟ್ಟಿಯನ್ನು ಈ ಮೂಲಕ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಬಲಿಜ ಸಂಘದ ಹಿರಿಯ ಮುಖಂಡರಾದ ಬಿ.ಆರ್.ನರಸಿಂಹ ನಾಯ್ಡು ಮಾತನಾಡಿ ಬಲಿಜ ಸಮುದಾಯವು ಶಾಂತಿ ಮತ್ತು ಸರಳತೆಯ ಪ್ರತಿರೂಪವಾಗಿದೆ. ದೇಶದಲ್ಲಿ ನಮ್ಮ ಸಮುದಾಯ ಬಹಳ ಬಲಿಷ್ಟವಾಗಿದೆ. ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯು ಬಲಿಜ ಸಮುದಾಯವೇ ರಾಜಕೀಯದ ನಿರ್ಣಾಯಕ ಪಾತ್ರ ವಹಿಸಲಿದೆ. ರಾಜ್ಯ ಸರಕಾರ ತಕ್ಷಣ ನಮ್ಮ ಸಮುದಾಯದ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಿ ಬಿಡುಗಡೆ ಮಾಡಿದರು.
ಈ ಸಂಘದ ಪದಾಧಿಕಾರಿಗಳು ಹೀಗೆ ಇದೆ :-ಗೌರಾವಾಧ್ಯಕ್ಷ:- ಎ.ಜಿ.ಸುಧಾಕರ್, ಅಧ್ಯಕ್ಷರಾಗಿ :- ಬಿ.ಎನ್.ನರಸಿಂಹ ಮೂರ್ತಿ, ಕಾರ್ಯಾದಕ್ಷರಾಗಿ:- ವಿ.ನಾರಾಯಣ, ಬಿ.ಎ.ನರಸಿಂಹ ಮೂರ್ತಿ, ಟಿ.ಪ್ರಕಾಶ್, ಉಪಾಧ್ಯಕ್ಷರಾಗಿ :- ನರಸಿಂಹಪ್ಪ ಮುನಿ ಸ್ವಾಮಿ, ಮಂಜುನಾಥ ಚಲ್ಲಾ, ಪ್ರಧಾನ ಕಾರ್ಯದರ್ಶಿಯಾಗಿ:- ವೆಂಕಟರವಣ,
ಕಾರ್ಯದರ್ಶಿಯಾಗಿ:-:ಶ್ರೀನಿವಾಸ್ .ಕೆ.ಎಸ್, ಜಂಟಿ ಕಾರ್ಯದರ್ಶಿಯಾಗಿ ರಘುನಾಥ್, ಖಜಾಂಚಿ:- ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ, ರಘು, ಸಂಘಟನಾ ಕಾರ್ಯದರ್ಶಿ ಯಾಗಿ ಆರ್.ಎಲ್. ಚಂದ್ರಶೇಖರ, ಜಿ.ಬಾಲಾಜಿ ರಾಯಲ್, ಬುಜೇಂದ್ರ ರಾಯಲ್, ಬಿ.ಎನ್.ಗೋಪಾಲ್ ಈ ಸಮಿತಿಯನ್ನು ಪಟ್ಟಿ ಬಿಡುಗಡೆ ಮಾಡಲಾಯಿತು. ಈ ಸಮಿತಿ ಮುಂದಿನ ಆದೇಶದವರಿಗೆ ಸಂಘ ಅಸ್ತಿತ್ವದಲ್ಲಿ ಇರುತ್ತದೆ ಎಂದು ಹೇಳಿದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: