March 29, 2024

Bhavana Tv

Its Your Channel

ರಕ್ತದ ಕೊರತೆಯನ್ನು ನೀಗಿಸಲು ಸ್ವಯಂಪ್ರೇರಿತ ರಕ್ತದಾನಕ್ಕೆ ಮುಂದಾಗಿ: ಬಿಜೆಪಿ ಪಕ್ಷದ ಮಂಡಲಾದ್ಯಕ್ಷ ಆರ್.ಪ್ರತಾಪ್ ಸಲಹೆ

ಬಾಗೇಪಲ್ಲಿ:– ಸಕಾಲಕ್ಕೆ ರಕ್ತ ಸಿಗದೆ ಪ್ರತಿನಿತ್ಯ ನೂರಾರು ಮಂದಿ ಸಾವನ್ನಪ್ಪುತ್ತಿದ್ದು, ಯುವಸಮೂಹ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು’ ಎಂದು ಬಾಗೇಪಲ್ಲಿ ತಾಲ್ಲೂಕು ಬಿಜೆಪಿ ಪಕ್ಷದ ಮಂಡಲಾದ್ಯಕ್ಷ ಆರ್ ಪ್ರತಾಪ್ ಸಲಹೆ ನೀಡಿದರು.

ಅವರು ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದ ಆವರಣದಲ್ಲಿ ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ಹುತಾತ್ಮ ಯೋಧರ ಸವಿನೆನಪು, ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ್ ಆಜಾದ್ ಸವಿನೆನಪಿನ ಅಂಗವಾಗಿ ಬಿಜೆಪಿ ಗ್ರಾಮಾಂತರ ಯುವ ಮೋರ್ಚಾ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದೊಂದಿಗೆ ಮಂಗಳವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಎಲ್ಲೆಡೆ ಕೊರೊನಾ ಸೋಂಕು ಹರಡಿರುವುದರಿಂದ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ನಿಂತು ಹೋಗಿವೆ. ಅದ್ದರಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೆವೆ ಎಂದು ಹೇಳಿದರು.

ಸ್ವಾತಂತ್ರ‍್ಯ ಹೋರಾಟಗಾರರ ಸವಿನೆನಪಿನ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ. ಇಂತಹ ಮಹತ್ಕಾರ್ಯಗಳು ಮತ್ತಷ್ಟು ನಡೆಯಬೇಕು. ಇದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಶಿಬಿರದಲ್ಲಿ ೫೦ ಕ್ಕೂ ಹೆಚ್ಚಿನ ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ಬಾಗೇಪಲ್ಲಿ ಪಟ್ಟಣದ ಪೋಲಿಸ್ ಆರಕ್ಷಕ ವೃತ ನಿರೀಕ್ಷಕರಾದ ನಾಗರಾಜು, ಉಪ ನಿರೀಕ್ಷಕ ಗೋಪಾಲ ರೆಡ್ಡಿ, ಪೋಲಿಸ್ ಶ್ರೀಪತಿ, ಕೆ.ಡಿ.ಪಿ.ಸದಸ್ಯರಾದ ವೆಂಕಟೇಶ್, ನಿಕಟ ಪೂರ್ವ ಮಂಡಲಾದ್ಯಕ್ಷ ಎಸ್. ಟಿ.ಬಾಬು, ಧೀರಜ್,ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ರವಿಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಿರ್ಮಲಮ್ಮ, ಮಂಜುಳಾ, ವೆಂಕಟಲಕ್ಷಮ್ಮ, ರೂಪಾದೇವಿ ವನಜಾ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ ; ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ

error: