April 24, 2024

Bhavana Tv

Its Your Channel

ವೀರಾರೆಡ್ಡಿ ಫೌಂಡೇಶನ್‌ನ ವತಿಯಿಂದ ವಿವಿಧ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ

ಬಾಗೇಪಲ್ಲಿ:- ಪಟ್ಟಣದ ತಾಲ್ಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವೀರಾರೆಡ್ಡಿ ಫೌಂಡೇಶನ್‌ನ ತಾಲ್ಲೂಕು ಅಧ್ಯಕ್ಷರು ಆನಂದ್ .ಎನ್. ಮಾತನಾಡುತ್ತಾ, ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಿಸಿದ ಸಮಾಜ ಸೇವಕ ಜಿ.ವೀರಾರೆಡ್ಡಿ ರವರಿಗೆ ಧನ್ಯವಾದಗಳನ್ನು ಅರ್ಪಿಸಿ ಈ ಫೌಂಡೇಶನ್‌ನ ಮೂಲ ಉದ್ದೇಶಗಳ ಆಚರಣೆಗೆ ಸದಾ ಜನರಲ್ಲಿ ಬೆರೆತು ಸಾರ್ವಜನಿಕರ ಕಷ್ಟಗಳನ್ನು ಪರಿಹರಿಸುವಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ ಎಂದರು.

ಮಹಿಳಾ ಘಟಕದ ತಾಲ್ಲೂಕು ಅದ್ಯಕ್ಷೆ ಶಶಿಕಲ ಮಾತನಾಡಿ” ತಾಲ್ಲೂಕಿನಾದ್ಯಂತ ಮಹಿಳೆಯರಿಗೆ ನಾನಾ ವಿಧದಲ್ಲಿ ತೊಂದರೆ ಆಗುತ್ತಿದೆ. ಅಂಗನವಾಡಿ ಅಡುಗೆ ಸಹಾಯಕರು ಸುಮಾರು ತಿಂಗಳುಗಳಿAದ ವೇತನ ಸಿಗದೆ ಕಷ್ಟದಲ್ಲಿದ್ದಾರೆ, ಈ ವಿಷಯವಾಗಿ ವೀರಾ ರೆಡ್ಡಿ ಫೌಂಡೇಶನ್‌ನ ವತಿಯಿಂದ ಮುಂದಿನ ದಿನಗಳಲ್ಲಿ ಕಾನೂನು ಹೋರಾಟಕ್ಕೆ ಸಿದ್ದರಾಗುತ್ತೇವೆ. ಖಾಸಗಿ ಫೈನಾನ್ಸ್ಗಳ ದಬ್ಬಾಳಿಕೆಗೆ ಮಹಿಳೆಯರು ಬೇಸತ್ತುಹೋಗಿದ್ದಾರೆ, ಬಾಲ್ಯವಿವಾಹದ ಬಗ್ಗೆ ಜನರಲ್ಲಿ ಅರಿವು ಮುಡಿಸಬೇಕಿದೆ. ಮಹಿಳೆಯರು ಕೇವಲ ಗಾರ್ಮೆಂಟ್ಸ್ ಕೆಲಸಕ್ಕೆ ಮಾತ್ರ ಸೀಮಿತ ಆಗದೆ, ಕಾರ್ಖಾನೆಗಳ ಕೊರತೆಯಿಂದ ತಮ್ಮ ಕೌಶಲ್ಯವನ್ನು ಹಾಗೂ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗತ್ತಿಲ್ಲ. ಸರ್ಕಾರದ ಯೋಜನೆಗಳು ಸಕ್ರಮವಾಗಿ ಮಹಿಳೆಯರಿಗೆ ಸೇರುತ್ತಿಲ್ಲ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿ ಇದೆ. ಕೆಲವೊಂದು ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಆಗಿದ್ದು, ನಾಮ ಮಾತ್ರಕ್ಕೆ ಎನ್ನುವಂತೆ ಯಾವುದೇ ಶುದ್ಧ ನೀರಿನ ಬಳಕೆ ಆಗುತ್ತಿಲ್ಲ, ಹಲವು ಯಂತ್ರಗಳು ಕೆಟ್ಟು ನಿಂತಿವೆ. ನರೇಗಾ ಯೋಜನೆಯಲ್ಲಿ ಅಕ್ರಮಕ್ಕೆ ಕೊರತೆಯೇ ಇಲ್ಲ. ಕೆಲಸ ಕಾಮಗಾರಿ ನಡೆಯದೆ, ಹಣ ಪಾವತಿ ಆಗುತ್ತಿವೆ. ಇಂತಹ ಅಧಿಕಾರಿಗಳ- ಇಲಾಖೆಯ ವಿರುದ್ಧ ನಮ್ಮ ಹೋರಾಟ ನಿರಂತರ’ ಎಂದರು.

ತಾಲ್ಲೂಕು ಯುವ ಘಟಕದ ಅಧ್ಯಕ್ಷ ದಿನೇಶ್ ರೆಡ್ಡಿ ಮಾತನಾಡಿ ಇಂದಿನಿAದ ಯಾವುದೇ ಇಲಾಖೆಯಲ್ಲಿ ಯಾವುದೇ ಅಧಿಕಾರಿ ಬಡಜನರಿಗೆ ತೊಂದರೆ ಉಂಟುಮಾಡಿ ವಿನಾ ಕಾರಣ ಅಲೆದಾಡಿಸುವಲ್ಲಿ ನಿರತರಾದರೆ ನಮ್ಮ ವೀರಾ ರೆಡ್ಡಿ ಫೌಂಡೇಶನ್‌ನ ಯುವ ಘಟಕದ ತಂಡ ಅಲ್ಲಿ ಪ್ರತ್ಯಕ್ಷ ಆಗಿ ಕಾನೂನಿನ ಅಡಿಯಲ್ಲಿ ನೋಂದವರಿಗೆ ನ್ಯಾಯ ದೊರಕಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಿ ಬಿಡುಗಡೆ ಮಾಡಲಾಯಿತು
ತಾಲ್ಲೂಕು ಘಟಕ
ಅಧ್ಯಕ್ಷರಾಗಿ :-ಆನಂದ್.ಎನ್.,ಉಪಾಧ್ಯಕ್ಷ ರಾಗಿ:-ಆದಿನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ:-ಇನಾಯಿತ್ತುಲ್ಲಾ,ಕಾರ್ಯದರ್ಶಿಯಾಗಿ:-ವೆಂಕಟೇಶ್, ಖಜಾಂಚಿಯಾಗಿ:-ರಮೇಶ್ ಬಾಬು,
ಮಹಿಳಾ ಘಟಕ
ಅಧ್ಯಕ್ಷರಾಗಿ:-
ಶಶಿಕಲಾ, ಉಪಾಧ್ಯಕ್ಷೆ:-ಮಂಜುಳಾ,ಪ್ರಧಾನ ಕಾರ್ಯದರ್ಶಿಯಾಗಿ:- ರಾಧಮ್ಮ, ಕಾರ್ಯದರ್ಶಿಯಾಗಿ:-ನಯಾರಭಾನು,
ಯುವ ಘಟಕ
ಅಧ್ಯಕ್ಷರಾಗಿ:-ದಿನೇಶ್ ರೆಡ್ಡಿ. ಎನ್.ಎನ್.
ಉಪಾಧ್ಯಕ್ಷರಾಗಿ :-ಜಗದೀಶ್, ಕಾರ್ಯದರ್ಶಿಯಾಗಿ :- ಮಹೇಶ್, ಖಜಾಂಚಿಯಾಗಿ:-
ಶ್ರೀನಿವಾಸ್ .ಎ.

ಈ ಸಂಘಟನೆಗಳು ಮುಂದಿನ ಆದೇಶದವರಿಗೆ ಚಾಲ್ತಿಯಲ್ಲಿರುತ್ತವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ವೀರಾರೆಡ್ಡಿ ಫೌಂಡೇಶನ್ ನ ಹಲವು ಕಾರ್ಯಕರ್ತರು ಹಾಜರಿದ್ದರು.
ರದಿ ; ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ

error: