April 24, 2024

Bhavana Tv

Its Your Channel

ಪಟ್ಟಣದ ನ್ಯಾಷನಲ್ ಪದವಿಪೂರ್ವ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಪ್ರೊ.ಕೆ.ಟಿ. ವೀರಾಂಜನೇಯ ಆಯ್ಕೆ

ಬಾಗೇಪಲ್ಲಿ:-ಪಟ್ಟಣದ ನ್ಯಾಷನಲ್ ಕಾಲೇಜಿನ ಪದವಿ ಪೂರ್ವ ವಿಭಾಗಕ್ಕೆ ಕೆ.ಟಿ.ವಿ.ಎಂದೇ ಜನಪ್ರಿಯರಾಗಿರುವ ಭೌತಶಾಸ್ತ್ರ ಉಪನ್ಯಾಸಕ ಪ್ರೊ ಕೆ.ಟಿ.ವೀರಾಂಜನೇಯ ಇಂದು ಬೆಳಗ್ಗೆ ೧೧:೦೦ ಯಲ್ಲಿ ನ್ಯಾಷನಲ್ ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲರಾದ ಶಿವಕುಮಾರ್ ಅಧಿಕಾರವನ್ನು ಪ್ರೋ ಕೆ.ಟಿ.ವೀರಾಂಜನೇಯ. ರವರಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು.

ಶ್ರೀಯುತರು ಭೌತ ಶಾಸ್ತ್ರದ ಉಪನ್ಯಾಸಕರಾಗಿ ನ್ಯಾಷನಲ್ ಕಾಲೇಜಿಗೆ ೧೭/೦೮/೧೯೮೮ ರಲ್ಲಿ ಸೇವೆಗೆ ಸೇರಿದರು. ತಮ್ಮ ಭೌತಶಾಸ್ತ್ರದ ಪಾಠ ಪ್ರವಚನ ಗಳನ್ನು ವಿದ್ಯಾರ್ಥಿಗಳಿಗೆ ಸುಲಲಿತವಾಗಿ ಹಾಗೂ ಸರಳವಾಗಿ ಭೋದನೆ ಮಾಡಿ,ವಿಧ್ಯಾರ್ಥಿಗಳಿಗೆ ವಿಜ್ಞಾನಿಗಳ ಪರಿಚಯ ಮಾಡಿಕೊಡುವುದರ ಮೂಲಕ ವಿಧ್ಯಾರ್ಥಿಗಳು ನೀವು ಸಹ ಡಾ.ಎಚ್. ಎನ್.ಗುಣಗಳನ್ನು ಬೆಳೆಸಿಕೊಂಡು ನೀವೂ ಸಹ ವಿಜ್ಞಾನಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು.
ಯಾರಾದರೂ ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಲು ಅಸಹಾಯಕರಾಗಿದ್ದ ವಿದ್ಯಾರ್ಥಿಗಳನ್ನು ಗುರ್ತಿಸಿ ಆ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಅಕ್ಷರ ದಾಸೋಹ ಜೊತೆಗೆ ತನ್ನ ಸ್ವಂತ ಸಂಪಾದನೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಅಕ್ಷರ, ಹಣದ ಜೊತೆಗೆ ಅನ್ನ ದಾಸೋಹವನ್ನು ಮಾಡುತ್ತಿದ್ದರು. ಒಂದು ಕಾಲದಲ್ಲಿ ತನ್ನ ಮನೆಯನ್ನೇ ವಿದ್ಯಾರ್ಥಿ ನೀಲಯವನ್ನಾಗಿ ಮಾಡಿ ಬಡ ವಿದ್ಯಾರ್ಥಿಗಳು ಹಸಿವಿನಿಂದ ಇರುತ್ತಿದ್ದ ವಿದ್ಯಾರ್ಥಿಗಳಿಗೆ ಅನ್ನ ದಾಸೋಹವನ್ನು ಮಾಡುತ್ತಿದ್ದರು.
ಮಾನವೀಯ ಮೌಲ್ಯಗಳನ್ನು ಹಾಗೂ ಗುಣಗಳನ್ನು ಹೊಂದಿದ್ದ ಡಾ.ಎಚ್.ನರಸಿಂಹಯ್ಯ ರವರ ಬಗ್ಗೆ ಅಪಾರ ಗೌರವ ಭಕ್ತಿ ಭಾವನೆ ಹೊಂದಿದ್ದರು. ಆದರೆ ಕೇವಲ ತಮ್ಮ ಪಾಠ ಪ್ರವಚನ ಗಳಿಗೆ ಸೀಮಿತವಾಗದೆ ಕಾಲೇಜಿನಲ್ಲಿ ಮಾತ್ರ ಶಿಸ್ತಿನ ಸಿಪಾಯಿಯಾಗಿದ್ದರು. ಕಾಲೇಜಿನಲ್ಲಿ ಅಹಿತಕರ ಘಟನೆಗಳಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಹಾಗೂ ಕಾಲೇಜಿಗೆ ತಡವಾಗಿ ಬರುವ ವಿದ್ಯಾರ್ಥಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲುತಿದ್ದರು.ಶೈಕ್ಷಣಿಕವಾಗಿ ಹಿಂದುಳಿದರುವ ಬಗ್ಗೆ ವಿದ್ಯಾರ್ಥಿಗಳನ್ನು ವಿಚಾರಿಸಿ ಅವರ ಕುಂದು ಕೊರತೆಗಳನ್ನು ನೀಗಿಸುತ್ತಿದ್ದರು. ಈ ಎಲ್ಲಾ ಕಾರಣದಿಂದಾಗಿ ಅವರು ಜನಪ್ರಿಯ ಉಪನ್ಯಾಸಕರಾಗಿದ್ದರು,ಇಂದು ಅವರು ಬಹುದಿನಗಳ ಕನಸು ನನಸಾಗಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಬಡ್ತಿ ಪಡೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು, ಉಪನ್ಯಾಸಕರುಗಳು,ಹಿತೈಷಿಗಳು ಹಾಗೂ ಅಭಿಮಾನಿಗಳು ಹೂ ಗುಚ್ಛ ನೀಡಿ ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿ ಹೂಮಾಲೆಗಳನ್ನು ಹಾಕಿ ವಿಶೇಷವಾಗಿ ಅಭಿನಂದನೆ ಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಿ.ಶಿವಣ್ಣ,ಸಿದ್ದಲಿಂಗಯ್ಯ, ವೆಂಕಟರಾಮ್, ಶಿವಕುಮಾರ್, ಇನ್ನೂ ಮುಂತಾದವರು ಪ್ರಮುಖರು ಇದ್ದರು

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: