April 19, 2024

Bhavana Tv

Its Your Channel

ವೀರಾರೆಡ್ಡಿ ಫೌಂಡೇಷನ್ ವತಿಯಿಂದ ಗೌರಿ ಗಣೇಶ ಮೂರ್ತಿ ಪ್ರತಿಷ್ಟಾಪನೆ

ಬಾಗೇಪಲ್ಲಿ:- ಕೊರೊನಾ ಆತಂಕದ ನಡುವೆಯೂ ರಾಜ್ಯ ಸರ್ಕಾರ ಗಣೇಶ ಹಬ್ಬಕ್ಕೆ ಅನುಮತಿ ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಾರ್ಡ್ಗೆ ಒಂದೇ ಗಣೇಶ ಮೂರ್ತಿ, ಐದು ದಿನದ ಒಳಗೆ ಗಣೇಶ ಮೂರ್ತಿ ವಿಸರ್ಜನೆ ಸೇರಿದಂತೆ ಸರ್ಕಾರ ನಿಯಮ ಜಾರಿಗೆ ತಂದಿದೆ.
ಇದರ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದ ನಮ್ಮ ಹೊಂಡಾ ಶೋ ರೂಮ್ ಹಿಂಭಾಗದಲ್ಲಿ ಇರುವ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಸಮಾಜ ಸೇವಕ ಶ್ರೀ ವೀರಾರೆಡ್ಡಿ ಫೌಂಡೇಷನ್ ವತಿಯಿಂದ ಅವರ ಮನೆಯ ಆವರಣದಲ್ಲಿ ಇಂದು ಬೆಳಗ್ಗೆ ಹಿಂದೂ ಧರ್ಮದ ಪೂಜೆ ಆಚಾರ ವಿಚಾರಗಳನ್ನು ಒಳಗೊಂಡAತೆ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲಾಯಿತು.

ವೀರಾರೆಡ್ಡಿ ಫೌಂಡೇಷನ್ ಅಧ್ಯಕ್ಷ ವೀರಾರೆಡ್ಡಿ ತದನಂತರ ಮಾತನಾಡಿ
ದೇಶಾದ್ಯಂತ ಇಂದು ಗಣೇಶ ಚತುರ್ಥಿ ಆಚರಣೆ ಸಂಭ್ರಮದಿAದ ನಡೆಯುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಮಾನವನ ದಿನನಿತ್ಯದ ಬದುಕಿನಲ್ಲಿ ಜಂಜಾಟಗಳನ್ನು ಕೈಬಿಟ್ಟು ಜೀವನವನ್ನು ಹೊಸ ಆಯಾಮದಿಂದ ನೋಡಲು ಮಾನವೀಯ ಮೌಲ್ಯಗಳು, ಸಂಬoಧಗಳು ಗಟ್ಟಿತನಗೊಳ್ಳಲು ಇಂತಹ ಹಬ್ಬಗಳು ಪ್ರೇರಣೆ ಆಗಿರುತ್ತವೆ ಎಂದು ಹೇಳಿದರು.
ಮಹಾಮಾರಿ ತಡೆಗಟ್ಟುವ ಹಿನ್ನೆಲೆಯಲ್ಲಿ ಸರಕಾರದ ಆದೇಶ ಪ್ರಕಾರ ಎಲ್ಲ ರೀತಿಯಲ್ಲಿ ನಿಯಮ ಪಾಲಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದoತೆ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ಬಾಗೇಪಲ್ಲಿ ತಾಲ್ಲೂಕಿ ಸಮಸ್ತ ನಾಗರಿಕರಿಗೆ ಶುಭಾಶಯಗಳನ್ನು ಕೋರಿ ಈ ವರ್ಷ ಚೆನ್ನಾಗಿ ಮಳೆ ಬಂದು ಸಮೃದ್ಧವಾದ ಬೆಳೆ ಬೆಳೆದು ರೈತರಿಗೆ ಸಂಕಷ್ಟವನ್ನು ತೊರೆದು ವಿನಾಯಕ ನಮಗೆ ಒಳಿತು ಮಾಡಲಿ ಎಂದು ಹೇಳಿದರು.

ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಸಾರ್ವಜನಿಕರು ಮನೆಗಳಲ್ಲಿ ಸಹ ವಿನಾಯಕನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಭಕ್ತಿ ಭಾವದಿಂದ ಪೂಜೆ ನೆರವೇರಿಸಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವೀರಾರೆಡ್ಡಿ ಫೌಂಡೇಷನ್ ವ್ಯವಸ್ಥಾಪಕ ರವಿಕುಮಾರ್ ತಾಲ್ಲೂಕು ಘಟಕ ಅಧ್ಯಕ್ಷ ಆನಂದ್.ಎನ್, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ, ಯುವ ಘಟಕ ಅಧ್ಯಕ್ಷ ದಿನೇಶ್ ರೆಡ್ಡಿ,ನಾರಾಯಣಪ್ಪ,
ಇನಾಯಿತ್ತುಲ್ಲಾ,ವೆಂಕಟೇಶ್, ಜಗದೀಶ್ ಮಹೇಶ್, ಶ್ರೀನಿವಾಸ್. ಎ.ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: