April 19, 2024

Bhavana Tv

Its Your Channel

ಗಡಿನಾಡಿನ ಗಣಿತ ಶಾಸ್ತ್ರದ ಕಲಿಕೆಗೆ ಒತ್ತು ನೀಡಿದ ಪಿ.ಎನ್.ನಾರಾಯಣ ಸ್ವಾಮಿಗೆ ನೇಷನ್ ಬಿಲ್ಡರ್ ಅವಾರ್ಡ್

ಬಾಗೇಪಲ್ಲಿ:-ತಾಲ್ಲೂಕಿನ ಕಸಬಾ ಹೋಬಳಿ ಸರ್ಕಾರಿ ಪ್ರೌಢಶಾಲೆ ಘಂಟoವಾರಿಪಲ್ಲಿಯಲ್ಲಿ ಗಣಿತ ಶಾಸ್ತ್ರದ ಶಿಕ್ಷಕ ಪಿ.ನಾರಾಯಣ ಸ್ವಾಮಿ ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷ ನೀಡುವ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ೨೦೨೧-೨೨ ನೇ ಸಾಲಿನ ನೇಷನ್ ಬಿಲ್ಡರ್ ಪ್ರಶಸ್ತಿ ಗೆ ಪಿ.ಎನ್.ನಾರಾಯಣ ಸ್ವಾಮಿ ಆಯ್ಕೆಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗಣಿತ ಶಾಸ್ತ್ರ ಕಬ್ಬಿಣ ಕಡಲೆ ಎಂದು ಪರಿಗಣಿಮಿಸಿರುವ ಹಿನ್ನೆಲೆಯಲ್ಲಿ ಪಿ.ಎನ್.ನಾರಾಯಣ ಸ್ವಾಮಿ ಗಣಿತ ಶಾಸ್ತ್ರವನ್ನು ಮಕ್ಕಳಿಗೆ ಬಹಳ ಪರಿಣಾಮಕಾರಿ, ಸುಲಭ , ಸುಲಲಿತವಾಗಿ ಹಾಗೂ ಹಾಡಿನ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಭೋದನೆ ಮಾಡುವ ರೀತಿಯನ್ನು ಗುರ್ತಿಸಿ ರೋಟರಿ ಕ್ಲಬ್ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿ ಗೆ ಪಿ.ಎನ್.ನಾರಾಯಣ ಸ್ವಾಮಿ ಆಯ್ಕೆಯಾಗಿರುವುದ್ದಕ್ಕೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾದ ಜಿ.ರಾಮಸುಬ್ಬಮ್ಮ ಹಾಗೂ ಸಹ ಶಿಕ್ಷಕರಾದ ಬಿರಾದಾರ ವಿಠ್ಠಲ್ ಚಂದ್ರ ಶಾ,ಎನ್.ಎನ್.ಸಂಧ್ಯಾ,ಎನ್.ಶ್ರೀನಿವಾಸ್, ಸಿ.ಎನ್. ನಾರಾಯಣ ಸ್ವಾಮಿ ಎಲ್. ರವಿ, ವರಲಕ್ಷ್ಮೀ ಹಾಗೂ ರಾಮಚಂದ್ರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ : ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ

error: