September 27, 2021

Bhavana Tv

Its Your Channel

ದೆಹಲಿ ಅಧಿಕಾರಿ ಸಬೀಯಾ ಸೈಫೀ ಸಾಮೂಹಿಕ ಅತ್ಯಾಚಾರ, ಹತ್ಯೆ ಖಂಡಿಸಿ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

ಬಾಗೇಪಲ್ಲಿ:-ದೆಹಲಿ ಸಿವಿಲ್ ಡಿಫೆನ್ಸ್ ಪೋಲೀಸ್ ಅಧಿಕಾರಿಣಿ ರಾಬಿಯಾ ಸೈಫಿ ಯನ್ನು ಇತ್ತೀಚಿಗೆ ದುಷ್ಕರ್ಮಿಗಳು ಅಮಾನುಷವಾಗಿ ಸಾಮೂಹಿಕ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆಗೈದ ಕೃತ್ಯ, ದೇಶದಲ್ಲಿ ಕಾನೂನು ವ್ಯವಸ್ಥೆ ವಿಫಲತೆ, ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ, ಗುಂಪು ಹತ್ಯೆ ಇತ್ಯಾದಿ ಗಳನ್ನು ವಿರೋಧಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ (ಚಳುವಳಿ ಚಲಪತಿ ಗೌಡ) ಬಣ ತಾಲ್ಲೂಕು ಘಟಕ ವತಿಯಿಂದ ಪಟ್ಟಣದ ತಹಶಿಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅದ್ಯಕ್ಷ ಬಿ ಎ.ಬಾಬಾಜಾನ್ ಮಾತನಾಡಿ ಈ ಪ್ರತಿಭಟನೆಯ ಮೂಲಕ ಸತ್ಯ, ನಿಷ್ಟೆ, ಪ್ರಾಮಾಣಿಕ ಪೊಲೀಸು ಉದ್ಯೋಗಸ್ಥರ ಪರ ನಾವಿದ್ದೇವೆ, ಭಾರತದ ಕಾನೂನು ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಆಶಯದ ಅಡಿಯಲ್ಲಿ ಕಾರ್ಯಾಚರಿಸುವ ಪೊಲೀಸರಿಗೆ ನಮ್ಮ ಬೆಂಬಲವಿದೆ. ದೆಹಲಿ ಅತ್ಯಾಚಾರ ಕೃತ್ಯದಲ್ಲಿ ಹತ್ಯೆಯಾದ ಸಾಬೀಯ ಸೈಫ್ಫೀ ಕುಟುಂಬ ಈ ಘಟನೆಯಿಂದ ದೃತಿ ಗೆಡಬಾರದು ಅವರೊಂದಿಗೆ ನಾವಿದ್ದೇವೆ, ಹತ್ಯೆಯಾದ ಸಾಬಿಯಾ ಸೈಫಿ ಓರ್ವೆ ಮುಸ್ಲಿಮ್ ಅಧಿಕಾರಿಣಿ ಆದ ಕಾರಣದಿಂದ ಅವರ ಮೇಲೆ ಪೂರ್ವಗ್ರಹ ಪೀಡಿತರಾಗಿ ಈ ಕೃತ್ಯ ಎಸಗಲಾಗಿದೆ.
ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಮೌನ ವಹಿಸಿದೆ. ಇಂದು ಸಬಿಯ ಸೈಫ್ ಗೆ ಆದ ಅನ್ಯಾಯ ನಾಳೆ ಎಲ್ಲಿಯೂ ಸಂಭವಿಸಬಹುದು, ಈ ಬಗ್ಗೆ ಜನರು ಜಾಗೃತರಾಗಿ ಸಾಮೂಹಿಕವಾಗಿ ಹೋರಾಡಬೇಕಿದೆ ಎಂದು ಹೇಳಿದರು, ಸಬೀಯ ಸೈಫ್ ಗೆ ಆದ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ತದನಂತರ ಬಾಗೇಪಲ್ಲಿ ಉಪ ತಹಶಿಲ್ದಾರ್ ಸುಬ್ರಹ್ಮಣ್ಯಂ ಅವರ ಮುಖಾಂತರ ಸಿ.ಎಂ.ಶ್ರೀ ಬಸವರಾಜು ಬೊಮ್ಮಾಯಿ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್. ಜಿ,ತಾಲ್ಲೂಕು ಘಟಕ ಸದಸ್ಯರಾದ ಜಿ.ವಿ.ವೆಂಕಟ ಶಿವಪ್ಪ, ಕರಾಟೆ ರಿಯಾಜ್,ಹಿದಾಯಿ ತುಲ್ಲಾ,ಸುಧಾಕರ್,ಸಲೀಂ ನೌಷದ್,ಡೇವಿಡ್, ಜಾಬೀರ್,ಮೂರ್ತಿ, ಇದ್ರೀಸ್ ವುಲ್ಲಾ ,ಮಹಮ್ಮದ್ ಆಲಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು

ವರದಿ : ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ

error: