September 27, 2021

Bhavana Tv

Its Your Channel

ಆಸ್ಕರ್ ಫರ್ನಾಂಡೀಸ್ ನಿಧನ : ಬಾಗೇಪಲ್ಲಿ ತಾಲ್ಲೂಕಿಗೆ ಬಿಡದ ನಂಟು

ಬಾಗೇಪಲ್ಲಿ : ಅಸ್ಕರ್ ಫರ್ನಾಂಡೀಸ್ ಧೀಮಂತ ವ್ಯಕ್ತಿತ್ವವುಳ್ಳ ರಾಜಕೀಯ ಮುಸ್ಸದಿ, ಅವರ ಸಾವು ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಠ ಎಂದು ಪುರಸಭೆ ಮಾಜಿ ಅಧ್ಯಕ್ಷ ಜಿ.ವಿ.ಬಾಬುರೆಡ್ಡಿ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಾಗೇಪಲ್ಲಿ ತಾಲ್ಲೂಕಿಗೆ ಆಸ್ಕರ್ ಫರ್ನಾಂಡಿಸ್ ಬಿಡದ ನಂಟು. ಅವರು ಬಾಗೇಪಲ್ಲಿ ತಾಲ್ಲೂಕಿಗೆ ಭೇಟಿ ನೀಡಿ ಆಗಿನ ಬರಗಾಲದಲ್ಲಿ ತಾಲ್ಲೂಕಿನಾದ್ಯಂತ ೮ ಗಂಜಿ ಕೇಂದ್ರಗಳನ್ನು ಹಾಗೂ ತಾಲ್ಲೂಕಿನಾದ್ಯಂತ ೮ ಗೋ ಶಾಲೆಗಳನ್ನು ಪ್ರಾರಂಭಿಸಿ ಅಂತಹ ಕಷ್ಟ ಕಾಲದಿಂದಲೂ ಬರಗಾಲವನ್ನು ನಿಭಾಯಿಸಿರುವ ಘನತೆ
ಆಸ್ಕರ್ ಫರ್ನಾಂಡಿಸ್ ರವರಗೆ ಸಲ್ಲುತ್ತದೆ. ಎಂದ ಅವರು, ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅಕಾಲಿಕ ಮರಣಕ್ಕೆ ಬಾಗೇಪಲ್ಲಿ ತಾಲ್ಲೂಕು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಯವರು ಹಾಗೂ ಮಾಜಿ ಶಾಸಕ ಎನ್.ಸಂಪAಗಿ ತೀವ್ರ ಸಂತಾನವನ್ನು ವ್ಯಕ್ತಪಡಿಸಿದ್ದಾರೆ.

ವರದಿ : ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ

error: