March 22, 2024

Bhavana Tv

Its Your Channel

ಈಗಿನ ಮನುಕುಲಕ್ಕೆ ಆರೋಗ್ಯ ಮತ್ತು ವಿದ್ಯಾಭ್ಯಾಸಗಳು ಅಗತ್ಯ- ಸಿ.ಕೆ ರಮೇಶ್

ಬಾಗೇಪಲ್ಲಿ: ಈಗಿನ ಮನುಕುಲಕ್ಕೆ ಅಗತ್ಯವಾಗಿರುವುದು ಉತ್ತಮ ಆರೋಗ್ಯ ಮತ್ತು ಒಳ್ಳೆಯ ವಿದ್ಯೆ ಎಂದು ರೈಟ್ ಟು ಲೀವ್ ಫೌಂಡೇಶನ್‌ನ ಪ್ರೋಗ್ರಾಂ ಡೈರೆಕ್ಟರ್ ಸಿ.ಕೆ ರಮೇಶ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ರೈಟ್ ಟು ಲೀವ್ ,ನ್ಯಾಸ್ಡ್ಯಾಕ್ ಮತ್ತು ಯಂಗ್ ಲೈವ್ಸ್ ಫೌಂಡೇಶನ್ ಗಳ ಸಂಯುಕ್ತಾಶ್ರದಲ್ಲಿ ಇಂದು ತಾಲ್ಲೂಕಿನ ಮಾಡಪಲ್ಲಿ ಮತ್ತು ನಾರಾಯಣಸ್ವಾಮಿಕೋಟೆ ಗ್ರಾಮಗಳಲ್ಲಿ ನೀರಿನ ಶುದ್ದೀಕರಣ ಘಟಕಗಳನ್ನು ಉದ್ಘಾಟಿಸಲಾಯಿತು.

ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯೂ ಒಂದು . ಫ್ಲೋರೈಡ್ ,ನೈಟ್ರೇಟ್ ನಂತಹ ಅಂಶಗಳು ಅತಿಯಾಗಿ ನೀರಿನಲ್ಲಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ನೀರಿನ ಶುದ್ದೀಕರಣ ಘಟಕಗಳಿಂದ ಉಪಯುಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.

ನಂತರ ಮಾತನಾಡಿದ ಪ್ರಜಾವೈಧ್ಯ ಡಾ.ಅನಿಲ್ ಕುಮಾರ್ ರವರು, ಈಗಿನ ಜನರು ತಮ್ಮ ಆರೋಗ್ಯದ ಕಡೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಉತ್ತಮ ಆಹಾರ ಮತ್ತು ಶುದ್ದವಾದ ನೀರನ್ನು ಸೇವಿಸಬೇಕು ಎಂದರು. ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡಿ ನೀರು, ಗಾಳಿಯನ್ನು ಮಲಿನ ಮಾಡುತ್ತಿದ್ದಾನೆ, ಹಾಗಾಗಿ ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಗ್ರಾಮೀಣ ಜನರು ಬಲಿಪಶುಗಳಾಗುತ್ತಿದ್ದಾರೆ. ಆದ್ದರಿಂದ ಮನುಷ್ಯನು ವೈಯಕ್ತಿಕ ಜೀವನಕ್ಕೆ ಕೊಟ್ಟಷ್ಟೆ ಪ್ರಾಮುಖ್ಯತೆಯನ್ನು ಸಾಮಾಜಿಕ ಜೀವನಕ್ಕೂ ಕೊಡಬೇಕು ಎಂದ ತಿಳಿಸಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಮಾರಗಾನಕುಂಟೆ, ಗೂಳೂರು ಮತ್ತು ತಿಮ್ಮಂಪಲ್ಲಿ ಶಾಲೆಗಳ ಎಸ್ ಎಸ್ ಎಲ್ ಸಿ ಯ ಅತ್ಯುತ್ತಮ ತಲಾ ೫ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಯಿತು. ಜೊತೆಗೆ ಕೊಲಿಂಪಲ್ಲಿ ವೇಣುಗೋಪಾಲ್ ರವರಿಗೆ ಲ್ಯಾಪ್ ಟ್ಯಾಪ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೈಟ್ ಟು ಲೀವ್ ಫೌಂಡೇಶನ್ ನ ವ್ಯವಸ್ಥಾಪಕಿ ಶ್ರೀಮತಿ ಶಾಂಭವಿ, ಆಪ್ರೇಷನ್ ಮ್ಯಾನೇಜರ್ ವೀರೇಶ್, ಪ್ರೋಗ್ರಾಮ್ ಕೋ-ಆರ್ಡಿನೇಟರ್ ಐವಾರಪಲ್ಲಿ ವೈ.ಎನ್ ಹರೀಶ್, ಮಾರಗಾನಕುಂಟೆ ಸಿಆರ್‌ಪಿ ಶ್ರೀನಿವಾಸ, ಶಿಕ್ಷಕ ಶಂಕರಪ್ಪ, ಯಂಗ್ ಲೈವ್ಸ್ ಫೌಂಡೇಶನ್ ನ ನಿರ್ದೇಶಕ ಎಂ.ಎಲ್ ನರಸಿಂಹಮೂರ್ತಿ, ಪ್ರೋಗ್ರಾಂ ಡೈರೆಕ್ಟರ್ ಮಾರುತಿ, ಕೋ-ಆರ್ಡಿನೇಟರ್ ಪಿಚ್ಚಲವಾರಪಲ್ಲಿ ನಾಗಭೂಷಣ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಶ್ರೀಮತಿ ಬಿ.ಸಾವಿತ್ರಮ್ಮ ಮುನಿಸ್ವಾಮಿ, ಗ್ರಾಮಸ್ಥರಾದ ಲಕ್ಷ್ಮಿನರಸಪ್ಪ, ಪದ್ಮಾವತಿ, ಮಮತ, ಅನುಸೂಯಮ್ಮ, ಯುವ ನಾಯಕರಾದ ಎಂ.ಆರ್.ಅಜಯ್ ಕುಮಾರ್, ಮುರಳಿಕುಮಾರ್, ಎಂ.ಎಸ್ ಮಂಜುನಾಥರೆಡ್ಡಿ, ಕಲ್ಯಾಣ್ ಕುಮಾರ್,ಭರತ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ ; ಗೋಪಾಲ ರೆಡ್ಡು , ಬಾಗೇಪಲ್ಲಿ

error: