April 24, 2024

Bhavana Tv

Its Your Channel

ಅವಕಾಶ ಕೊಟ್ಟರೆ, ಗೆದ್ದು ತೋರಿಸುವೆ : ಎಂ.ಎಲ್. ಸಿ ರಮೇಶ್ ಗೌಡ

ಬೆಂಗಳೂರು / ಬಾಗೇಪಲ್ಲಿ : ಜೆ ಡಿ ಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ವಿದ್ಯಾರ್ಥಿ ಯುವಜನ ನಾಯಕ, ಜೆ ಡಿ ಎಸ್ ಪಕ್ಷದ ಬೆಂಗಳೂರು ನಗರ ಯುವ ಅಧ್ಯಕ್ಷರೂ, ಹೆಚ್.ಎಂ.ಆರ್. ಗ್ರೂಪ್ಸ್ ನಿರ್ದೇಶಕರು, ಕೇಂದ್ರದ ಕೆಮಿಕಲ್ಸ್ & ಫರ್ಟಿಲೈಜರ್ಸ್ ನ ಸದಸ್ಯರೂ, ಹಾಲಿ ವಿಧಾನಸಭಾ ಸದಸ್ಯರಾದ ಹೆಚ್.ಎಂ ರಮೇಶ್ ಗೌಡರ ಹುಟ್ಟುಹಬ್ಬದ ಕಾರ್ಯಕ್ರಮ ದಲ್ಲಿ ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳ ಜೆ ಡಿ ಎಸ್ ಪಕ್ಷದ ಅಧ್ಯಕ್ಷ – ಕಾರ್ಯಾಧ್ಯಕ್ಷರು, ಕಾರ್ಯಕರ್ತ- ಮುಖಂಡರು, ಪಕ್ಷದ ಅಭಿಮಾನಿಗಳು ಭಾಗವಹಿಸಿ ಅವರಿಗೆ ೪೧ ನೇ ವರ್ಷದ ಹುಟ್ಟಿದ ಶುಭಾಶಯ ಕೋರಿದರು.
ರಾಜ್ಯದ ಹಾಗೂ ಬಾಗೇಪಲ್ಲಿ ಜೆ ಡಿ ಎಸ್ ಪಕ್ಷದ ಕಾರ್ಯಕರ್ತ- ಮುಖಂಡರೊAದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಎಂ.ಎಲ್. ಸಿ ರಮೇಶ್ ಗೌಡರು ಮಾತನಾಡುತ್ತ ‘ ನಾನೊಬ್ಬ ಜೆ.ಡಿ.ಎಸ್. ಪಕ್ಷದ ಆಜನ್ಮ ಅಭಿಮಾನಿ ಹಾಗೂ ಕುಮಾರ ಪಡೆಯ ಸೈನಿಕ, ಕಾರ್ಯಕರ್ತರ ಪಾಲಿಗೆ ಸೇವಕ, ಈ ಹುಟ್ಟುಹಬ್ಬದ ವಿಶೇಷವಾಗಿ ಕೋಲಾರ ಜಿಲ್ಲೆಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಕಷ್ಟು ಅಭಿಮಾನಿಗಳು ನನಗೆ ಶುಭ ಹಾರೈಸಿದ್ದಾರೆ, ಅವರೆಲ್ಲರ ಅಭಿಮಾನಕ್ಕೆ ನಾನು ಸದಾ ಚಿರ ಋಣಿಯಾಗಿದ್ದೇನೆ, ನಾನು ಅವರ ಋಣ ತೀರಿಸಲು ಈ ಜನ್ಮದಲ್ಲಿ ಅವಕಾಶ ಇದ್ದರೆ, ಖಂಡಿತ ಶ್ರಮಿಸುತ್ತೇನೆ. ಪಕ್ಷದ ಸೈನಿಕನಾಗಿ ಆ ಭಾಗಗಳಲ್ಲಿ ಜೆ ಡಿ ಎಸ್ ಪಕ್ಷವನ್ನು ಬಲಿಷ್ಠಗೊಳಿಸುವುದು ನನ್ನ ಆದ್ಯ ಕರ್ತವ್ಯ, ರೈತ ನಾಯಕ ಅಪ್ಪಾಜಿ, ದೊಡ್ಡ ಗೌಡರ ಕಾಣಿಕೆ ನಮ್ಮ ನಾಡಿಗೆ ಅಪಾರ ಮತ್ತು ಜೀವಂತ. ಹಾಗೆಯೇ ಕರ್ನಾಟಕ ರಾಜ್ಯಕ್ಕೆ ಕುಮಾರಣ್ಣನ ಸೇವೆ , ಜನ ಮೆಚ್ಚುವ ಕಾರ್ಯಕ್ರಮಗಳು, ರೈತರ ಪಾಲಿನ ಆಷಾಜ್ಯೋತಿಯಾಗಿ ಜನರ ಮನಸ್ಸಿನಲ್ಲಿ ಸದಾ ಇದ್ದಾರೆ.
ಹೀಗಿರುವಾಗ ಬಯಲುಸೀಮೆ ಜಿಲ್ಲೆಗಳಾದ ಕೋಲಾರ & ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಮಾರಣ್ಣನ ಸರ್ಕಾರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಘೋಷಣೆ, ನೂತನವಾಗಿ ಚೇಳೂರು ತಾಲ್ಲೂಕಿನ ಘೋಷಣೆ ಮಾಡಿರುವುದು ಅನುಕೂಲಕರ. ಬಾಗೇಪಲ್ಲಿ ತಾಲ್ಲೂಕಿನ ನನ್ನ ಮತ್ತು ಜೆ ಡಿ ಎಸ್ ಪಕ್ಷದ ಅಭಿಮಾನಿಗಳ ಆಶಯದಂತೆ ಪಕ್ಷ ಕಟ್ಟುವಲ್ಲಿ ಸದಾ ಸಿದ್ಧನಾಗಿದ್ದೇನೆ. ಹೊಸಕೋಟೆ ಭಾಗದಲ್ಲಿ ನಾನು ವಿದ್ಯಾರ್ಥಿ ದೆಸೆಯಿಂದಲೇ ನಾಯಕನಾಗಿ ಬೆಳೆದವನು, ರಾಜ್ಯ ಜೆ ಡಿ ಎಸ್ ವರಿಷ್ಠರ ಆದೇಶ ಸಿಕ್ಕರೆ, ಜಿಲ್ಲಾ – ತಾಲ್ಲೂಕಿನ ಮುಖಂಡರ ಕೋರಿಕೆಯನ್ನು ತೀರಿಸಲು ಮುಂದಾಗುತ್ತೇನೆ.

ಬಾಗೇಪಲ್ಲಿಯಲ್ಲಿ ಜೆ ಡಿ ಎಸ್ ಬಾವುಟಕ್ಕೆ ಗೆಲುವಿನ ನಗೆಯನ್ನು ತೋರಿಸುತ್ತೇನೆ. ಆ ಭಾಗದಲ್ಲಿ ಪಕ್ಷವನ್ನು ಬಲಿಷ್ಟವಾಗಿ ಕಟ್ಟಿ, ಮುಂಬರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಗಳ ಚುನಾವಣೆಗಳಲ್ಲಿ ನಮ್ಮ ಪಕ್ಷದ ತಾಕತ್ ಏನು ಎಂಬುದನ್ನು ತೋರಿಸಿ, ಗೆದ್ದು ಬರುತ್ತೇನೆ !, ಅದಕ್ಕೆ ಕಾಲ ಕೂಡಿ ಬರಬೇಕಿದೆ , ಎಲ್ಲರೂ ತಾಳ್ಮೆಯಿಂದ ಇರಿ. ” ಎಂದು ಗೆಲುವಿನ ನಗೆಯನ್ನು ಬೀರಿದರು.

ಜೆ ಡಿ ಎಸ್ ಅಭಿಮಾನಿಗಳನ್ನು ಹಾಗೂ ಕಾರ್ಯಕರ್ತರನ್ನು ಒಂದುಗೂಡಿಸುವ , ವಿಶಾಲ ಹೃದಯದ ವ್ಯಕ್ತಿ ಈ ಕ್ಷೇತ್ರಕ್ಕೆ ಬಂದರೆ ಮಾತ್ರ, ಜೆ ಡಿ ಎಸ್ ಪಕ್ಷಕ್ಕೆ ಉಳಿಗಾಲವಿದೆ. ಈಗಾಗಲೇ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಡಿ.ಜೆ. ನಾಗರಾಜರೆಡ್ಡಿ ರವರನ್ನು ಆಯ್ಕೆ ಮಾಡಿದ್ದರೂ, ಪಕ್ಷದ ಅಧಿಕೃತ ಅಧ್ಯಕ್ಷ- ಕಾರ್ಯಾಧ್ಯಕ್ಷ- ಉಪಾಧ್ಯಕ್ಷರನ್ನು ಗಣನೆಗೆ ತೆಗೆದುಕೊಳ್ಳದೆ, ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿಲ್ಲ ಎನ್ನುವುದು ಪಕ್ಷದ ಹಾಗೂ ಸಾರ್ವಜನಿಕರಲ್ಲಿ ಹರಿದಾಡುತ್ತಿರುವ ಅಭಿಪ್ರಾಯವಾಗಿದೆ.

ಏನೇ ಆದರೂ, ರಾಜ್ಯದ ಜೆ ಡಿ ಎಸ್ ಪಕ್ಷದ ವರಿಷ್ಠರ ಆದೇಶದಂತೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಆಗಲಿದ್ದು, ಅದರ ಜೊತೆಗೆ ಕಾರ್ಯಕರ್ತರ ಅಭಿಲಾಷೆ / ಒಪ್ಪಿಗೆ ಮೇರೆಗೆ ಎಂ.ಎಲ್
ಎ. ಅಭ್ಯರ್ಥಿಯ ಆಯ್ಕೆ ನಡೆಯುವುದು ಸೂಕ್ತ ಮತ್ತು ಸಮಂಜಸ ಎನ್ನುವುದು ಪಕ್ಷದ ಅಂತರAಗವಾಗಿದೆ

ಈ ಕಾರ್ಯಕ್ರಮದಲ್ಲಿ ಜೆ ಡಿ ಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾದ ರಾಜಶೇಖರ ರೆಡ್ಡಿ (ಬಾಗೇಪಲ್ಲಿ ತಾ), ವೆಂಕಟರೆಡ್ಡಿ, ಜಿಲ್ಲಾ ಉಪಾಧ್ಯಕ್ಷರು (ಗುಡಿಬಂಡೆ ತಾ.) ತಾಲ್ಲೂಕು ಅಧ್ಯಕ್ಷರಾದ ಸೂರ್ಯನಾರಾಯಣ ರೆಡ್ಡಿ, ಕಾರ್ಯಾಧ್ಯಕ್ಷರಾದ ಮಹಮ್ಮದ್ ನೂರುಲ್ಲಾ, ‘ಕುಮಾರ ಪಡೆ’ ಜಿಲ್ಲಾಧ್ಯಕ್ಷರಾದ ನಾಗರಾಜ, ಗುಡಿಬಂಡೆ ತಾ.ಪ್ರಧಾನ ಕಾರ್ಯದರ್ಶಿ ಅಪ್ಸರ್, ಪ್ರ. ಕಾರ್ಯದರ್ಶಿ ಶೇಖರ್, ಖಜಾಂಚಿ ವೆಂಕಟೇಶ್, ಪಟೇಲ್ ವೆಂಕಟ ರೆಡ್ಡಿ, ಯುವ ಮುಖಂಡರಾದ ಶಿವಾರೆಡ್ಡಿ, ನಾಗಣ್ಣ, ಲಕ್ಷ್ಮೀಪತಿ ಹಾಗೂ ಇತರರು ಹಾಜರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: