April 23, 2024

Bhavana Tv

Its Your Channel

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಎ.ಐ.ಎ.ಡಬ್ಲ್ಯು.ಯು ವತಿಯಿಂದ ಪ್ರತಿಭಟನೆ

ಬಾಗೇಪಲ್ಲಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ವತಿಯಿಂದ ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮುಖಂಡರು ಒಕ್ಕೊರಲ ಧ್ವನಿಯಾಗಿ ಮಾತನಾಡುತ್ತಾ, ತಾಲ್ಲೂಕು ನಿರಂತರ ಕ್ಷಾಮಕ್ಕೆ ಈಡಾಗುತ್ತಿದೆ, ಇಂತಹ ಪರಿಸ್ಥಿಯಲ್ಲಿ ನರೇಗಾ ಬಡವರಿಗೆ ಆಸರೆಯಾಗಿದೆ. ಕೋವಿಡ್ ನಿಂದ ಕೂಲಿಕಾರ್ಮಿಕ ಜೀವನಗಳು ಬರ್ಬರವಾಗಿವೆ. ಕನಿಷ್ಠ ಜೀವನಕ್ಕೂ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಇಂತಹ ಸಮಯದಲ್ಲಿ ಬಡವರಿಗೆ ಆಸರೆಯಾಗಿ ನಿಂತು ಬದುಕು ಕಟ್ಟಿಕೊಳ್ಳಲು ಸಹಾಯಹಸ್ತ ಚಾಚಾಬೇಕಿದ್ದ ಸರ್ಕಾರ ಹಾಗೂ ಆಡಳಿತ ಇದನ್ನು ಮರೆತು, ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ಅವಕಾಶ ನೀಡಿರುವುದು ಖಂಡನಿಯ ಎಂದರು.
ಕೆಲಸಕ್ಕಾಗಿ ಅರ್ಜಿ ಹಾಕಿದರೆ ಅವರಿಗೆ ಸ್ವೀಕೃತಿ ಪತ್ರ ಕೊಡುತ್ತಿಲ್ಲ, ಜೊತೆಗೆ ಕೆಲಸವನ್ನು ನೀಡದೆ ನಿರ್ಲ್ಲಕ್ಷತನ ಮಾಡುವುದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದ ಬಡವರಿಗೆ ಸೇರಬೇಕಿದ್ದ ನರೇಗಾ ಕೆಲಸವನ್ನು ಇಂದು ಯಂತ್ರಗಳ ಸಹಾಯದಿಂದ ಗುತ್ಯಿಗೆದಾರರು ಯಾವುದೆ ಅಡೆ ತಡೆಯಿಲ್ಲದೆ ಅವ್ಯಾಹಿತವಾಗಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕೃಷಿ ಕೂಲಿಕಾರರ ನರೇಗಾ ಕೂಲಿ ಬಾಕಿ ಹಣ ಕಾಯಕ ಬಂಧುಗಳ ಪ್ರೋತ್ಸಾಹ ಧನವನ್ನು ಕೂಡಲೆ ಬಿಡುಗಡೆ ಮಾಡಬೇಕು, ಇತ್ಯಾದಿ ಸುಮಾರು ಒಂಬತ್ತು ಬೇಡಿಕೆಗಳನ್ನು ಇಟ್ಟು ಪ್ರತಿಭಟಿಸಿದರು.

ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆAಕಟಪ್ಪ, ರಾಜ್ಯ ಸಹ ಕಾರ್ಯದರ್ಶಿ ಕೆ.ನಾಗರಾಜ್, ರಾಜ್ಯ ಸಮಿತಿ ಸದಸ್ಯೆ ಬಿ.ಸಾವಿತ್ರಮ್ಮ, ತಾಲ್ಲೂಕು ಮುಖಂಡರಾದ ಎಂ.ಎನ್. ರಘುರಾಮರೆಡ್ಡಿ, ಅಶ್ವತ್ಥಪ್ಪ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜ್ಯ ಸಮಿತಿ ಸದಸ್ಯ ಆರ್.ರಾಮಪ್ಪ, ಗೂಳೂರು ಮುನಿಚಂದ್ರಪ್ಪ,ಕೃಷ್ಣಪ್ಪ, ಜಿ.ಕೃಷ್ಣಪ್ಪ, ರಾಮಚಂದ್ರ, ಜಹೀರ್ ಬೇಗ್,ಗೊಲ್ಲಪಲ್ಲಿ ಮಂಜುನಾಥ,ಉತ್ತನ್ನ, ಮಹಬಾಷ, ಮಂಜುನಾಥ ಮತ್ತಿತರೆ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: