April 26, 2024

Bhavana Tv

Its Your Channel

ಭಾರತದ ಸಂವಿಧಾನ ಮನುಷ್ಯನಿಗೆ ಬದುಕುವ ಹಕ್ಕನ್ನು ಕೊಟ್ಟಿದೆ ಸಾಯುವ ಹಕ್ಕನ್ನು ಎಲ್ಲಿಯೂ ನೀಡಿಲ್ಲ : – ಹಿರಿಯ ನ್ಯಾಯಾದೀಶೆ ಅರುಣ ಕುಮಾರಿ

ಬಾಗೇಪಲ್ಲಿ:- ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಒತ್ತಡದ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ಆತ್ಮಹತ್ಯೆಗೆ ಶರಣಾಗುವುದು ಮಹಾಪಾಪ, ಏನೇ ಇದ್ದರೂ ಕೂಡ ಎದುರಿಸಿ ಹೋರಾಡಿ ಗೆಲ್ಲಬೇಕು. ಭಾರತದ ಸಂವಿಧಾನ ಮನುಷ್ಯನಿಗೆ ಬದುಕುವ ಹಕ್ಕನ್ನು ಕೊಟ್ಟಿದೆ ಸಾಯುವ ಹಕ್ಕನ್ನು ಎಲ್ಲಿಯೂ ನೀಡಿಲ್ಲ ಎಂದು ಅರುಣ ಕುಮಾರಿ ಗ್ವೌರವಾನ್ವಿತೆ ಹಿರಿಯ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯರು ಹೇಳಿದರು

ಅವರು ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು

ನಮ್ಮನ್ನು ನಂಬಿಕೊAಡು ಕುಟುಂಬಸ್ಥರು ಇರುತ್ತಾರೆ. ಅವರ ಬಗ್ಗೆಯಾದರು ಒಮ್ಮೆ ಯೋಚನೆ ಮಾಡಬೇಕು ಆಗಲಾದರೂ ಮನಸ್ಸು ಬದಲಾಗುತ್ತದೆ. ಒತ್ತಡದಿಂದ ಮುಕ್ತರಾಗಲು ಧ್ಯಾನ, ಯೋಗ ಪ್ರಾಣಯಾಮ ಮಾಡಿದರೆ ಸಹಾಯಕವಾಗುತ್ತದೆ ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಹಾಗೂ ವಕೀಲರಾದ ಜಿ.ಎನ್.ನಂಜಪ್ಪ ಮಾತನಾಡಿ ಅಮೂಲ್ಯವಾದ ಬದುಕನ್ನು ಕ್ಷುಲ್ಲಕ ಕಾರಣಕ್ಕಾಗಿ ಕಳೆದುಕೊಳ್ಳುವ ಪ್ರವೃತ್ತಿ ದಿನೇದಿನೇ ಹೆಚ್ಚುತ್ತಿದೆ. ಆತ್ಮಹತ್ಯೆ ಮಹಾಪಾಪ, ಮೂರ್ಖತನ. ಆತ್ಮಹತ್ಯೆ ತಡೆಗಟ್ಟಿ ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಚರಿಸಲಾಗುತ್ತಿದೆ.
ಇತ್ತಿಚಿಗೆ ಲೈವ್ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದು, ಇಡೀ ಸಮಾಜದ ಮನಸ್ಸು ಕೆಡಿಸುವುದಕ್ಕೆ ಕಾರಣವಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ “ಸರ್ವರಿಗೂ ನ್ಯಾಯ” ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಸಲುವಾಗಿ ವಿಶೇಷ ಜಾಗೃತಿ ಅಭಿಯಾನದ ವಾಹನಕ್ಕೆ ಹಸಿರು ಬಾವುಟ ಬೀಸುವ ಮೂಲಕ ಶ್ರೀಮತಿ ಅರುಣ ಕುಮಾರಿ ಹಾಗೂ ಎಸ್. ಎಂ.ಅರುಟಗಿ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ತಾಲ್ಲೂಕು ಮಾನ್ಯ ಸಿವಿಲ್ ಜೆ.ಎಂ.ಎಫ್.ಸಿ.ನ್ಯಾಯದೀಶರಾದ ಎಸ್.ಎಂ.ಅರುಟಗಿ, ವಕೀಲರ ಸಂಘದ ಅಧ್ಯಕ್ಷ ಮುಸ್ತಾಕ್ ಅಹಮ್ಮದ್, ಉಪಾಧ್ಯಕ್ಷೆ ಜಿ.ಕೆ.ಅರುಣ, ಡಾ.ಮುಬಾರಕ್, ವಕೀಲರಾದ ನಂಜುAಡಪ್ಪ, ನಾಗಭೂಷಣ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ, ಬಾಗೇಪಲ್ಲಿ

error: