April 19, 2024

Bhavana Tv

Its Your Channel

ಬಾಗೇಪಲ್ಲಿಯಲ್ಲಿ ಸರಳವಾಗಿ ವಿಶ್ವ ಕರ್ಮ ಜಯಂತಿ ಆಚರಣೆ

ಬಾಗೇಪಲ್ಲಿ:- ಪಟ್ಟಣದ ಶ್ರೀ ಸತ್ಯ ಸಾಯಿ ಧರ್ಮಶಾಲೆ ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಸಮಾಜದಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿಶ್ವಕರ್ಮ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ವಿಶ್ವ ಕರ್ಮ ಬಾಗೇಪಲ್ಲಿ ತಾಲ್ಲೂಕು ಅದ್ಯಕ್ಷ ಪಿ.ಜಿ.ಶಿವಶಂಕರಾಚಾರಿ ಉದ್ಘಾಟನೆ ಮಾಡಿ ಮಾತನಾಡಿ, ವಿಶ್ವಕರ್ಮ ಸಮಾಜದವರು ತಮ್ಮ ಮೂಲ ಕಸುಬಿನಲ್ಲಿ ನವೀನ ತಂತ್ರಾಜ್ಞಾನದ ಕೌಶಲ್ಯಗಳನ್ನು ಅಳವಡಿಸಿಕೊಳ್ಳದೇ ಇರುವುದು ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗಿದ್ದು, ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನದ ಕೌಶಲ್ಯಗಳನ್ನು ಅಳವಡಿಸಿ ಕೊಳ್ಳುವಂತೆ ಸಲಹೆ ನೀಡಿದರು.

ವಿಶ್ವ ಸೃಷ್ಟಿಗೆ ವಿಶ್ವಕರ್ಮನ ಕೊಡುಗೆ ಅತ್ಯಂತ ದೊಡ್ಡದಿದೆ. ಹಿಂದು ಧರ್ಮದ ಎಲ್ಲಾ ವೇದ, ಪುರಾಣಗಳಲ್ಲಿ ವಿಶ್ವಕರ್ಮನ ಕೊಡುಗೆಗಳನ್ನು ವಿವರಿಸಲಾಗಿದೆ.ಆದರೆ ಕಾಲಘಟ್ಟದಲ್ಲಿ ಸಮುದಾಯದವರಿಗೆ ವಂಶಪಾರAಪರ್ಯವಾಗಿ ಬಂದಿದ್ದ ಕುಲಕಸುಬುಗಳು ಅನ್ಯರಪಾಲಾಗಿವೆ. ಈ ಹಿನ್ನೆಲೆ ಸರ್ಕಾರ ಈ ಸಮುದಾಯಕ್ಕೆ ಪ್ರೋತ್ಸಾಹ ನೀಡಿ ಮತ್ತೆ ಮುಖ್ಯವಾಹಿನಿಗೆ ತರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ಬೆಸ್ಕಾಂ ನೌಕರರಾದ ವಿಜಯ್ ಕುಮಾರ್, ಪತ್ರಕರ್ತರಾದ ಮಣಿಕಂಠ ,ಈಶ್ವರಾಚಾರಿ,ಮಹಾಬಳೇಶ್ ,ಶ್ರೀನಿವಾಸ್ ಚಾರಿ,ಅಶೋಕ, ಶ್ರೀನಿವಾಸಾಚಾರಿ ಗೋವರ್ಧನ ಚಾರಿ,ವೀರಾಚಾರಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: