March 28, 2024

Bhavana Tv

Its Your Channel

ಸಾಮಾಜಿಕ ಸುಧಾರಣೆಯಲ್ಲಿ ದಲಿತ ಸಂಘರ್ಷ ಸಮಿತಿಯ ಪಾತ್ರ ಮಹತ್ತರ-ಸಂಚಾಲಕ ಬಿ.ವಿ. ವೆಂಕಟರಮಣ

ವರದಿ : ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ.

ಬಾಗೇಪಲ್ಲಿ: ದಲಿತರು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಸುಧಾರಣೆಯಾಗುತ್ತಿದ್ದಾರೆ. ಎಂದರೆ, ಅದು ದಲಿತ ಸಂಘರ್ಷ ಸಮಿತಿಯ ನಿರಂತರ ಹೋರಾಟಗಳ ಫಲ, ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಹಾಗೂ ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ. ವೆಂಕಟರಮಣ ತಿಳಿಸಿದರು.

ಅವರು ಬಾಗೇಪಲ್ಲಿ ತಾಲ್ಲೂಕು ಊಗಲನಾಗೇಪಲ್ಲಿ ರಸ್ತೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಹೋಬಳಿ ಮಟ್ಟದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಡಾ. ಅಂಬೇಡ್ಕರ್ ರವರ ಸಂವಿಧಾನ ಪ್ರದೇಶಗಳಲ್ಲಿ ಎಲ್ಲಾ ಸಮುದಾಯಗಳಿಗೂ ಗ್ರಾಮ ಪಂಚಾಯಿತಿ ಸಾಮಾಜಿಕ ತಾ.ಪಂ. ನ್ಯಾಯ ಹಾಗೂ ಒದಗಿಸಿದೆ ಜಿ.ಪಂ.. ಅದರ ಗಳಲ್ಲಿ ಪ್ರಕಾರ ಸದಸ್ಯರುಗಳು ಅನೇಕ, ಅಧ್ಯಕ್ಷರುಗಳು ಜನ ರಾಜಕೀಯವಾಗಿ ಆಗಿರುವುದು ಗ್ರಾಮೀಣ ನಮಗೆ ಕಂಡುಬರುತ್ತದೆ. ಶೈಕ್ಷಣಿಕವಾಗಿ ಆ ಹಿಂದಿನ ದಿನಗಳಿಗೆ ಈ ದಿನಗಳನ್ನು ತುಲನೆ ಮಾಡುವುದಾದರೆ ಶೈಕ್ಷಣಿಕವಾಗಿ ಸುಧಾರಣೆಯಾಗುತ್ತಿದೆ, ಹಿಂದಿನ ದಿನಗಳಲ್ಲಿ ಉಪವಾಸವಿದ್ದು, ಶಾಲಾ ಕಾಲೇಜುಗಳಿಗೆ ಬರುವಂತಹ ಪರಿಸ್ಥಿತಿ ಇತ್ತು. ಈಗ ದಲಿತ ಸಂಘರ್ಷ ಸಮಿತಿ ಹೋರಾಟಗಳ ಫಲದಿಂದ ಇಂದು ವಿದ್ಯಾರ್ಥಿ ನಿಲಯಗಳ ಅನುಷ್ಠಾನವಾಗಿ ವ್ಯಾಸಂಗ ಮಾಡಲು ಅನುಕೂಲವಾಗಿದೆ, ಆರ್ಥಿಕವಾಗಿ ದಲಿತರಿಗೆ ಬ್ಯಾಂಕ್‌ಗಳಿAದ ಸಾಲ ಸೌಲಭ್ಯ, ಸರ್ಕಾರದ ಯೋಜನೆಗಳ ಮುಖಾಂತರ ಸೌಲಭ್ಯಗಳು ಎಟುಕುತ್ತಿವೆ, ಹಿಂದೆ ದೇವಾಲಯಗಳಿಗೆ, ಖಾನಾವಳಿಗಳಿಗೆ ದಲಿತರಿಗೆ ಪ್ರವೇಶವಿರುತ್ತಿರಲಿಲ್ಲ, ಅಸ್ಪೃಶ್ಯತೆ ಆಚರಿಸಲಾಗುತ್ತಿತ್ತು. ಈಗ ಅವೆಲ್ಲಾ ಹೋಗಿದ್ದು, ನಾವು ದೇವಾಲಯ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಿಗೆ ಮುಕ್ತವಾಗಿ ಹೋಗುತ್ತಿರುವ ಹಿನ್ನೆಲೆಯಲ್ಲಿ ದ.ಸಂ.ಸ. ಹೋರಾಟಗಳ ಮಹತ್ವವನ್ನು ತಿಳಿಸಿದರು.

ಅಂಬೇಡ್ಕರ್ ಹೇಳಿರುವುದು ಜಾತಿ ರಹಿತ ಸಾಮಾಜಿಕ ವ್ಯವಸ್ಥೆಯ ನಿರ್ಮಾಣ, ದಲಿತರೆಂದರೆ ಒಂದು ಜಾತಿಗೆ ಸೀಮಿತವಾದವರಲ್ಲ, ಎಲ್ಲಾ ಜಾತಿಯಲ್ಲಿನ ಶೋಷಣೆಗೆ ಒಳ್ಳಪಟ್ಟಿರುವ ಜನರೆ ದಲಿತರು, ಆದರೆ ಇತ್ತೀಚಿಗೆ ಜಾತಿಗಳ ಆಧಾರದಲ್ಲಿ ಸಂಘಗಳನ್ನು ಕಟ್ಟಲಾಗುತ್ತಿದ್ದು, ಅವುಗಳು ಭವಿಷ್ಯತ್ ಶೂನ್ಯ ಎಂದರು. ಇಂತಹ ಸಂಘಗಳು ಅಲ್ಪಾಯಿ ಎಂದ ಅವರು, ಜಾತ್ಯಾತೀತವಾಗಿ ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ನಿರ್ಮಾಣವಾದ ಸಂಘಗಳು ಚಿರಾಯು ಎಂದರು.
ಮುಖಂಡ ಹಾಗೂ ತಾಲ್ಲೂಕು ಸಂಚಾಲಕ ಪೈಪಾಳ್ಯ ರವಿ ಮಾತನಾಡುತ್ತಾ, ಈ ಹಿಂದೆ ದಲಿತ ಸಂಘರ್ಷ ಸಮಿತಿಯ ಮುಖಂಡರುಗಳು ತಮ್ಮ ತನು ಮನ ಧನ ಅರ್ಪಿಸಿ ಹೋರಾಟದ ಜೀವನಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ಧೀರೋದ್ದಾತ ಹೋರಾಟಗಳನ್ನು ಮಾಡಿರುವ ಚಿರಸ್ಮರಣಿಯರನ್ನು ಸ್ಮರಿಸಿ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು. ಇದೇ ಸಂದರ್ಭದಲ್ಲಿ ಮುಖಂಡರಾದ ಹಾಗೂ ತಾಲ್ಲೂಕು ಸಂಚಾಲಕರುಗಳಾದ ಎಲ್.ಎನ್. ನರಸಿಂಹಯ್ಯ, ಎಂ.ವಿ.ಲಕ್ಷ್ಮೀನರಸಿAಹಯ್ಯ, ಎಚ್.ಎನ್. ಗೋಪಿ, ಡಿ.ಕೆ. ರಮೇಶ್, ಜಯಂತ್ ಮಾತನಾಡಿದರು.
ಡಾ.ಅಂಬೇಡ್ಕರ್ ಚಿತ್ರಪಟಕ್ಕೆ ಪುಷ್ಪಗಳನ್ನು ಅರ್ಪಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೊದಲಿಗೆ ಸಭೆಯಲ್ಲಿ ಕ್ರಾಂತಿಗೀತೆಗಳನ್ನು ತಮಟೆಯ ಲಯಬದ್ಧ ನಾದಕ್ಕೆ ಅನುಗುಣವಾಗಿ ಹಾಡಿ, ಪ್ರೇಕ್ಷಕರನ್ನು ರಂಜಿಸಿದರು. ಮುಖಂಡ ಎನ್.ಕೋಟಪ್ಪ ರವರಿಂದ ಸ್ವಾಗತವನ್ನು ಕೋರಲಾಯಿತು.
ಸಭೆಯಲ್ಲಿ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಕಸಬಾ ಹೋಬಳಿ ಸಂಚಾಲಕರಾಗಿ ಗೌನಪಲ್ಲಿ ಶ್ರೀನಿವಾಸ್, ಸಂಘಟನಾ ಸಂಚಾಲಕರುಗಳಾಗಿ ಪರಗೋಡು ಗಂಗರಾಜು, ಮಲ್ಲಸಂದ್ರದ ಅಂಗಡಿ ನಾರಾಯಣಪ್ಪ, ಯಲ್ಲಂಪಲ್ಲಿ ವೆಂಕಟಾದ್ರಿ, ಲಗುಮದ್ದೇಪಲ್ಲಿ ನಂಜುAಡಪ್ಪ, ಶಂಖAವಾರಿಪಲ್ಲಿ ಜಿ.ನರಸಿಂಹಪ್ಪ, ಬಾಲರೆಡ್ಡಿಪಲ್ಲಿ ನರಸಿಂಹಮೂರ್ತಿ, ಸಾಂಸ್ಕೃತಿಕ ಸಂಚಾಲಕರಾಗಿ ಸಾಯಿನಗರ ನರಸಿಂಹಪ್ಪ, ಖಜಾಂಚಿಯಾಗಿ ಯಲ್ಲಪಲ್ಲಿ ಅಂಜಿನಪ್ಪ, ಸಲಹಾ ಸಮಿತಿ ಸದಸ್ಯರಾಗಿ ಗುಂಡ್ಲಪಲ್ಲಿ ಶಿವಾ, ಮಲ್ಲಸಂದ್ರದ ಕಮ್ಮ ನಾರಾಯಣಪ್ಪ, ಸಾಯಿನಗರ ನಾಗರಾಜ, ಮಲ್ಲಸಂದ್ರ ತಿಪ್ಪರಾಜು, ಲಗುಮದ್ದೇಪಲ್ಲಿ ನರಸಿಂಹಪ್ಪ, ಯಲ್ಲಪಲ್ಲಿ ಶ್ರೀನಿವಾಸ್ ಆಯ್ಕೆಯಾದರು.ಸಭೆಯಲ್ಲಿ ಮುಖಂಡರಾದ ಹಾಗೂ ತಾಲ್ಲೂಕು ಸಂಚಾಲಕರುಗಳಾದ ಎಲ್.ಎನ್. ನರಸಿಂಹಯ್ಯ, ಎಂ.ವಿ.ಲಕ್ಷ್ಮೀನರಸಿoಹಯ್ಯ, ಎಚ್.ಎನ್. ಗೋಪಿ, ಡಿ.ಕೆ. ರಮೇಶ್, ಜಯಂತ್ ಮಾತನಾಡಿದರು. ಸಾಂಸ್ಕೃತಿಕ ಸಂಚಾಲಕರಾದ ಕಲ್ಲಿಪಲ್ಲಿ ಗಂಗಾಧರ್, ಎ.ಪ್ರಕಾಶ್, ತಾಲ್ಲೂಕು ಖಜಾಂಚಿ ಎಂ.ವಿ.ನರಸಿAಹಪ್ಪ, ತಾಲ್ಲೂಕು ಸಲಹಾ ಸಮಿತಿ ಸದಸ್ಯರಾದ ಬೋಡಿಕದಿರೇಪಲ್ಲಿ ನಂಜುoಡಪ್ಪ, ಕೆ.ನರಸಿಂಹಯ್ಯ, ನರಸಿಂಹಮೂರ್ತಿ, ವಿ. ಗಂಗುಲಪ್ಪ ಮತ್ತಿತರೆ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.

error: