April 22, 2024

Bhavana Tv

Its Your Channel

ಸಿರಿ ಧಾನ್ಯಗಳ ಮೇಳ ಉದ್ಘಾಟಿಸಿದ ಯೋಜನಾಧಿಕಾರಿ ಪಿ. ಜಿ.ಗಿರೀಶ್

ಬಾಗೇಪಲ್ಲಿ:- ಅಲ್ಲಿ ಅಕ್ಕಿಯ ಗಂಧಗಾಳಿಯಿಲ್ಲ. ಗೋಧಿಯ ಬಳಕೆ ಇಲ್ಲ. ಮೈದಾ ಹಿಟ್ಟು, ಕಡಲೆ ಹಿಟ್ಟುಗಳ ಅಬ್ಬರವೇ ಇಲ್ಲ. ಹೆಸರು, ಬಟಾಣಿ, ಹುರುಳಿ ಇತ್ಯಾದಿ ಬಳಕೆಯೇ ಇಲ್ಲ. ಆದರೂ ಅಲ್ಲಿ ದೋಸೆಯಿದೆ, ಇಡ್ಲಿ ಇದೆ, ಚಕ್ಕುಲಿ, ಕೋಡುಬೇಳೆ, ಒಬ್ಬಟ್ಟು ಇದೆ. ಹಲ್ವಾ, ಕಷಾಯ, ಉಂಡೆ ಎಲ್ಲವೂ ಇದೆ…! ಜನ ಸಾಲುಸಾಲು ಬಂದು ಖರೀದಿಸುತ್ತಿದ್ದಾರೆ. ಸವಿಯುಂಡು ಬಾಯಿ ಚಪ್ಪರಿಸುತ್ತಿದ್ದಾರೆ. ಮೂಲ ವಸ್ತುಗಳನ್ನು ಖರೀದಿಸಿ ಮನೆಗೂ ಒಯ್ಯತ್ತಿದ್ದಾರು ಇದೆಲ್ಲಾ ನಡೆದಿದ್ದು ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಹೋಬಳಿ ಗುಟ್ಟುಮೀದಪಲ್ಲಿಯಲ್ಲಿ.

ಹೌದು ಬಾಗೇಪಲ್ಲಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ.ಟ್ರಸ್ಟ್ ವತಿಯಿಂದ ಸಿರಿ ಧಾನ್ಯ ಮೇಳ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಜ್ಞಾನ ವಿಕಾಸ್ ಕಾರ್ಯಕ್ರಮದಡಿಯಲ್ಲಿ ಸಿರಿ ಧಾನ್ಯಗಳ ಮೇಳವನ್ನು ಯೋಜನಾಧಿಕಾರಿ ಪಿ. ಜಿ.ಗಿರೀಶ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ
ಇಂದಿನ ಆಧುನಿಕ ಆಹಾರ ಪದ್ಧತಿಗಳಿಗೆ ಒಗ್ಗಿಕೊಂಡಿರುವ ಜನರಿಗೆ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿ ಕಾಡುತ್ತಿವೆ. ಪ್ರತಿಯೊಬ್ಬರ ರೋಗ್ಯಕ್ಕೆ ರಾಮಬಾಣವಾಗಿರುವ ಸಿರಿಧಾನ್ಯಗಳಾದ ನವಣೆ, ಹಾರಕ, ಊದಲು, ಸಾಮೆ, ಕೊರಲೆ, ಬರಗು, ಜೋಳ, ರಾಗಿ, ಸಜ್ಜೆ ಇವುಗಳಲ್ಲಿ ಹೆಚ್ಚಾಗಿ ನಾರಿನಂಶಗಳು, ಖನಿಜಾಂಶಗಳು, ವಿಟಮಿನ್‌ಗಳಿರುವ ಕಾರಣ ಆರೋಗ್ಯಕ್ಕೆ ಉತ್ತಮ ಎಂದು ಹೇಳಿದರು.

ಒಟ್ಟಾರೆಯಾಗಿ ಅಪ್ಪಟ ದೇಸಿ ಶೈಲಿಯಲ್ಲಿ ನಡೆಯುತ್ತಿರುವ ಸಿರಿ ಧಾನ್ಯ ಮೇಳ ಗ್ರಾಹಕರಿಗೆ ಸಂತಸವನ್ನುoಟು ಮಾಡುತಿದ್ದು ಸ್ವದೇಶಿ ಉತ್ಪನ್ನಗಳ ಮಹತ್ವವನ್ನು ಸಾರಿ ಹೇಳುತ್ತಿವೆ.

ಈ ಸಂದರ್ಭದಲ್ಲಿ ಪಾತಪಾಳ್ಯ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಎಂ.ವೆAಕಟರಾಮರೆಡ್ಡಿ,ಆರೋಗ್ಯ ಸಹಾಯಕಿ ನಾಗಮಣಿ ಅಂಗನವಾಡಿ ರಮಾದೇವಿ ಆಶಾ ಕಾರ್ಯಕರ್ತೆ ಪಿ.ಆರ್.ಲಕ್ಷ್ಮೀ ವಲಯದ ಮೇಲ್ವಿಚಾರಕಿ ಸೀಮಾ ಜ್ಞಾನ ವಿಕಾಸ್ ಸಮನ್ವಯ ಅಧಿಕಾರಿ ಕೆ.ಆರ್.ಮಂಜುಳಾ,ಸೇವಾ ಪ್ರತಿನಿಧಿ ಮಂಜುಳಾ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: