April 26, 2024

Bhavana Tv

Its Your Channel

ಹದಗೆಟ್ಟ ರಸ್ತೆಯ ದುರಸ್ಥಿಗೆ ಯಾರೋಬ್ಬರು ಮುಂದಾಗುತ್ತಿಲ್ಲ, ಅಳಲು ತೋಡಿಕೊಂಡ ಗ್ರಾಮಸ್ಥರು

ಬಾಗೇಪಲ್ಲಿ: ಕೊಟ್ಯಾಂತರ ರೂ ಸರ್ಕಾರಿ ಅನುದಾನದಲ್ಲಿ ನಿರ್ಮಿಸಿರುವ ತಿಮ್ಮಂಪಲ್ಲಿ ಬಿಳೂರು ಮುಖ್ಯ ರಸ್ತೆಯ ಡಾಂಬರು ೨ ವರ್ಷದಲ್ಲೇ ಸಿಕ್ಕ ಸಿಕ್ಕ ಕಡೆ ಕಿತ್ತುಹೋಗಿ ರಸ್ತೆ ಸಂಪೂರ್ಣ ಗುಂಡಿಗಳ ಮಯವಾಗಿರುವ ಹದಗೆಟ್ಟ ರಸ್ತೆಯ ದುರಸ್ಥಿಗೆ ಯಾರೋಬ್ಬರು ಮುಂದಾಗುತ್ತಿಲ್ಲ ಎಂದು ತಿಮ್ಮಂಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಆಳಲು ತೋಡಿಕೊಂಡಿದ್ದಾರೆ.
ತಾಲೂಕಿನ ಗೂಳೂರು ತಿಮ್ಮಂಪಲ್ಲಿ ಮಾರ್ಗದ ಬಿಳೂರು ಮುಖ್ಯ ರಸ್ತೆಯನ್ನು ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮೇಲ್ದರ್ಜೆಗೇರಿಸಿ ಕೊಟ್ಯಾಂತರ ರೂಗಳ ಅನುದಾನದಲ್ಲಿ ೪, ಕಿ.ಮೀ ಉದ್ದದ ರಸ್ತೆಗೆ ಲೋಕೋಪಯೋಗಿ ಇಲಾಖೆ, ೧ ಕಿ.ಮೀ ಉದ್ದದ ರಸ್ತೆಗೆ ಜಿಲ್ಲಾ ಪಂಚಾಯತಿ ಸೇರಿದಂತೆ ಒಟ್ಟು ೫ ಕಿ.ಮೀ ಉದ್ದದ ಮುಖ್ಯರಸ್ತೆಗೆ ರಾಜ್ಯ ಹೆದ್ದಾರಿ ಗುಣಮಟ್ಟದ ಮಾನದಂಡನೆಗಳ ದರಪಟ್ಟಿಯಂತೆ ಟೆಂಡರ್ ಕರೆದು ಡಾಂಬರು ಹಾಕಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿದರು. ರಸ್ತೆ ನಿರ್ಮಿಸಿ ಎರಡು ವರ್ಷಗಳು ಸಂಪೂರ್ಣವಾಗಿ ಪೂರೈಸುವಷ್ಟರಲ್ಲಿ ರಸ್ತೆಗೆ ಹಾಕಿರುವ ಡಾಂಬರು ಕಿತ್ತು ಬರುತ್ತಿದ್ದು, ರಸ್ತೆ ಸಂಪೂರ್ಣ ಗುಂಡಿಗಳ ಮಯವಾಗಿ ಹದಗೆಟ್ಟಿದೆ. ನಡುರಸ್ತೆಯಲ್ಲೆ ಮೊನಕಾಲು ಆಳದಷ್ಟು ಗುಂಡಿಗಳು ಬಿದ್ದಿದ್ದರೂ ಸ್ಥಳೀಯ
ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸಿಕೊಂಡು ಮುಂದೆ ಸಾಗುತ್ತಿದ್ದರೇ, ಬಸ್, ಕಾರು, ಆಟೋ ಮತ್ತು ದ್ವಿಚಕ್ರ ವಾಹನ ಸವಾರರು ಎದ್ದು ಬಿದ್ದು ವಾಹನ ಚಾಲನೆ ಮಾಡಿಕೊಂಡು ಪ್ರಯಾಣಿಸುತ್ತಿದ್ದಾರೆ.
ಕಳಪೆ ಕಾಮಗಾರಿ: ವಿಪರ್ಯಾಸವೆಂದರೆ ರಾಜ್ಯ ಹೆದ್ದಾರಿ ಗುಣಟಮಟ್ಟದ ಟೆಂಡರ್ ಪ್ರಕ್ರಿಯೆಯ ಮಾನದಂಡನೆಗಳAತೆ ಗೂಳೂರು ತಿಮ್ಮಂಪಲ್ಲಿ ಮಾರ್ಗದ ಬಿಳೂರು ರಸ್ತೆಗೆ ಡಾಂಬರು ಹಾಕಿ ಕಾಮಗಾರಿ ಮಾಡಿದ್ದರೆ, ಕನಿಷ್ಠ ಒಂದು ವಿಧಾನಸಭಾ ಚುನಾವಣೆ ಅವಧಿಯವರೆಗಾದರೂ ರಸ್ತೆ ಗುಣಮಟ್ಟದಿಂದ ಕೂಡಿರಬೇಕು. ಆದರೇ ಕಾಮಗಾರಿ ಪೂರ್ಣಗೊಳಿಸಿದ ಎರಡೇ ವರ್ಷಕ್ಕೆ ರಸ್ತೆಗೆ ಹಾಕಿರುವ ಡಾಂಬರು ಕಿತ್ತುಕೊಂಡು ಬಂದಿರುವ ಪ್ರಸಂಗ ನೋಡಿದರೆ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಗಳಿಗೆ ಕೈಗನ್ನಡಿ ಹಿಡಿದಂತಿದೆ.
ಡಾAಬರು ಹಾಕಿರುವ ರಸ್ತೆಯ ಮೇಲೆ ಪುನಃ ಡಾಂಬರು ಹಾಕಿ ಕಾಮಗಾರಿ ಮಾಡಿರುವುದರಿಂದ ತಿಮ್ಮಂಪಲ್ಲಿ ಬಿಳೂರು ಮಾರ್ಗ ರಸ್ತೆಯ ಡಾಂಬರು ಕಿತ್ತುಹೋಗಿ ಗುಂಡಿಗಳು ಬಿದ್ದು ಹದಗೆಟ್ಟಿದೆ. ಬಯಲುಸೀಮೆ ಪ್ರದೇಶಾಭಿವೃದ್ಧಿಯ ವಿಶೇಷ ಅನುಧಾನದ
ಕ್ರಿಯಾ ಯೋಜನೆ ಪಟ್ಟಿಯಲ್ಲಿ ಬಿಳೂರು ರಸ್ತೆಯ ಕಾಮಗಾರಿಯನ್ನು ಸೇರಿಸಿ ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡುತ್ತೇವೆ. ರಾಮಲಿಂಗಾರೆಡ್ಡಿ, ಎಇಇ ಲೋಕೋಪಯೋಗಿ ಇಲಾಖೆ, ಬಾಗೇಪಲ್ಲಿ ತಾಲೂಕಿನ ಗೂಳೂರು ತಿಮ್ಮಂಪಲ್ಲಿ ಮಾರ್ಗದ ಬಿಳೂರು ರಸ್ತೆ ಸಂಪೂರ್ಣ ಗುಂಡಿಗಳ ಮಯವಾಗಿದ್ದು, ಹದಗೆಟ್ಟ ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಕಷ್ಟವಾಗುತ್ತಿದೆ. ವಾಹನ
ಚಾಲನೆ ವೇಳೆ ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಅಪಘಾತಗಳು ಸಂಭವಿಸಿವೆ. ಸಂಬAಧಪಟ್ಟ ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಹದಗೆಟ್ಟ ರಸ್ತೆಯ ದುರಸ್ಥಿಗೆ ಮುಂದಾಗಬೇಕಾಗಿದೆ.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: