April 19, 2024

Bhavana Tv

Its Your Channel

ತುಂಬಿ ಹರಿಯುತ್ತಿರುವ ಚಿತ್ರಾವತಿ, ಮಾಜಿ ಶಾಸಕ ಜಿ.ವಿ.ಎಸ್. ರವರಿಂದ ಬಾಗಿನ ಅರ್ಪಣೆ

ಬಾಗೇಪಲ್ಲಿ : ಪಟ್ಟಣದ ಹೊರವಲಯದಲ್ಲಿ ಪರಗೋಡುವಿನ ಬಳಿ ನಿರ್ಮಿಸಲಾಗಿರುವ ಚಿತ್ರಾವತಿ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಪಟ್ಟಣದ ಜನತೆ ಸಂಭ್ರಮ ಸಡಗರದಿಂದ ಹರ್ಷ ವ್ಯಕ್ತಪಡಿಸುತ್ತಿದ್ದು ಮಾಜಿ ಶಾಸಕ ಹಾಗೂ ಪ್ರಜಾ ಸಂಘರ್ಷ ಸಮಿತಿ ಸಂಸ್ಥಾಪಕ ಸಂಚಾಲಕ ಜಿ.ವಿ.ಶ್ರೀರಾಮರೆಡ್ಡಿ ತುಂಬಿ ಹರಿಯುತ್ತಿರುವ ಚಿತ್ರಾವತಿಗೆ ಬಾಗಿನ ಅರ್ಪಿಸಿದರು.

ಇಂದು ಬೆಳಗ್ಗೆ ಸುಮಾರು ೧೦ ಗಂಟೆಗೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತುಂಬಿ ಹರಿಯುತ್ತಿರುವ ಚಿತ್ರಾವತಿಗೆ ಬಾಗೀನ ಅರ್ಪಿಸಿದರು, ಈ ಸಂದರ್ಭದಲ್ಲಿ, ಇದೇ ರೀತಿ ವರ್ಷ ವರ್ಷ ಮಳೆ ಬಿದ್ದು, ಈ ಚಿತ್ರಾವತಿ ಅಣೆಕಟ್ಟು ತುಂಬಿ ಹರಿಯಲಿ ಎಂದು, ಯಾವುದೇ ರೀತಿಯಲ್ಲೂ ಕುಡಿಯುವ ನೀರಿಗೆ ಕೊರತೆ ಬಾರದಂತೆ ಕಾಲಕಾಲಕ್ಕೆ ಮಳೆ ಬೆಳೆಯಾಗಲಿ ಎಂದು ಶುಭ ಹಾರೈಸಿದರು.

ಪುರೋಹಿತರು ಧಾರ್ಮಿಕ ವಿಧಿ ವಿಧಾನಗಳಂತೆ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದರು. ಪೂಜೆ ಮುಗಿದ ನಂತರ ಎಲ್ಲರಿಗೂ ಸಿಹಿ ವಿತರಣೆ ಮಾಡಿದರು, ಅಣೆಕಟ್ಟು ಸ್ಥಂಭಗಳಿಗೆ ಹೂವಿನಿಂದ ಅಲಂಕಾರ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಾಗೇಪಲ್ಲಿ ತಾಲ್ಲೂಕು ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ಬರ, ಸಿಕ್ಕ ಅಲ್ಪಸ್ವಲ್ಪ ನೀರಿನಲ್ಲೂ ಪ್ಲೋರೈಡ್ ಎಂಬ ವಿಷ ವಸ್ತು, ಇದರಿಂದ ಪ್ಲೋರೈಡ್ ಎಂಬ ಖಾಯಿಲೆಯಿಂದ ಮೂಳೆಗಳ ಸವೆತ, ಹಲ್ಲುಗಳು ಮಾಸಲು ಬಣ್ಣಕ್ಕೆ ತಿರುಗುವುದು, ನಡು ಬಾಗುವುದು ಇತ್ಯಾದಿಗಳಿಂದ ನರಳುತ್ತಿದ್ದ ಇಲ್ಲಿನ ಜನರಿಗೆ ಶುದ್ದ ಕುಡಿಯುವ ನೀರನ್ನು ಕೊಡಬೇಕು ಎಂಬ ಉದ್ದೇಶದಿಂದ ಈ ಚಿತ್ರಾವತಿ ಅಣೆಕಟ್ಟು ಯೋಜನೆ ರೂಪಗೊಂಡಿತು. ಮುಖ್ಯಮಂತ್ರಿ ಜೆ.ಎಚ್. ಪಾಟೇಲ್ ಸರ್ಕಾರದಲ್ಲಿ ನಾನು ಶಾಸಕನಾಗಿದ್ದಾಗ ಈ ಯೋಜನೆ ರೂಪಗೊಂಡಿತು. ಆದರೆ ನನ್ನ ಅಂದಾಜಿನAತೆ ಈ ಅಣೆಕಟ್ಟು ಕೆಲಸ ನಡೆಯಲಿಲ್ಲ. ಏಕೆಂದರೆ ಆನಂತರ ಬಂದ ಚುನಾವಣೆಗಳಲ್ಲಿ ನನಗೆ ಸೋಲಾದ ಹಿನ್ನೆಲೆಯಲ್ಲಿ, ತದನಂತರ ಬಂದವರ ಆಡಳಿತದಲ್ಲಿ ಅಣೆಕಟ್ಟು ಎತ್ತರ ಮೂರು ಮೀಟರ್ ಕಡಿಮೆ ಮಾಡಿ, ಈ ಅಣೆಕಟ್ಟನ್ನು ನಿರ್ಮಾಣ ಮಾಡಲಾಯಿತು. ಆನಂತರ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ನಾನು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ಮೇಲೆ ಲೋಕಾರ್ಪಣೆ ಮಾಡಲಾಯಿತು ಎಂದರು. ಅಂದಿನಿAದ ಈ ಚಿತ್ರಾವತಿ ಬ್ಯಾರೇಜ್‌ಗೆ ನೀರು ಸಂಗ್ರಹವಾಗಿ ಜನರಿಗೆ ಕುಡಿಯುವ ನೀರನ್ನು ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪಿ.ಎಸ್.ಎಸ್. ಮುಖಂಡರಾದ ಚನ್ನರಾಯಪ್ಪ, ಜಿ.ಎಂ. ರಾಮಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಗೋಪಾಲಕೃಷ್ಣ, ಮುಖಂಡರಾದ ಮದ್ದಿಲೇಟಿರೆಡ್ಡಿ, ಸುಧಾಕರರೆಡ್ಡಿ, ರಾಮರೆಡ್ಡಿ, ಮಂಜುನಾಥ್, ಮಂಜುನಾಥಸ್ವಾಮಿ, ಎ.ನರಸಿಂಹರೆಡ್ಡಿ, ರಾಮಾಂಜಿ, ಜುಬೇದ್‌ಅಹಮದ್, ಎಲ್.ವೆಂಕಟೇಶ್, ಅಶ್ವತ್ಥಪ್ಪ, ಜಯಪ್ಪ, ಮತ್ತಿತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: