March 30, 2024

Bhavana Tv

Its Your Channel

ಶಿಕ್ಷಣ ದೇಶದ ಭವಿಷ್ಯಕ್ಕೆ ಭದ್ರ ಬುನಾದಿ-ನಾರಾಯಣರೆಡ್ಡಿ

ಬಾಗೇಪಲ್ಲಿ: ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ ದೇಶದ ಭವಿಷ್ಯಕ್ಕೆ ಭದ್ರ ಪುನಾಧಿ ಹಾಕಿಕೊಟ್ಟರೇ ಶಿಕ್ಷಣವಿಲ್ಲದ ದೇಶ ಶೈಕ್ಷಣಿಕವಾಗಿ ಹಿನ್ನಡೆಯಿಂದ ಅಂಧಕಾರದತ್ತ ಹೋಗುತ್ತದೆ ಎಂದು ಚಾಕವೇಲು ಪ್ರೌಢ ಶಾಲೆ ನಿವೃತ್ತ ಮಖ್ಯ ಶಿಕ್ಷಕ ಹಾಗೂ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ನಾರಾಯಣರೆಡ್ಡಿ ತಿಳಿಸಿದರು.
ತಾಲೂಕಿನ ಚಾಕವೇಲು ಸರ್ಕಾರಿ ಪ್ರೌಢ ಶಾಲಾವರಣದಲ್ಲಿ ೧೯೯೪-೯೫ ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಅಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ೧೯೭೬ ಇಸ್ವೀಯಲ್ಲಿ ಚಾಕವೇಲು ಪ್ರೌಢ ಶಾಲೆ ಪ್ರಾರಂಭವಾಗಿದ್ದು, ಶಾಲೆ ಪ್ರಾರಂಭದ ಸಮಯದಲ್ಲಿ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ಸಮಾಜದ ಪರಿಸ್ಥಿತಿ ತುಂಬ ದಯನೀಯವಾಗಿತ್ತು. ಅಂತಹ ಕಷ್ಟ ಸಮಯದಲ್ಲಿ ಹಳೇ ಕಟ್ಟಡವೊಂದರಲ್ಲಿ ಪ್ರೌಢ ಶಾಲೆಯನ್ನು ಸ್ಥಾಪಿಸಿ ವಿದ್ಯಾರ್ಥಿಗಳ ದಾಖಲಾತಿಗಾಗಿ ಮನೆ ಮನೆಗೂ ಅಲೆದಾಡಿದ್ದೇವೆ, ಶಾಲೆಗೆ ಮಕ್ಕಳನ್ನು ಸೇರಿಸಿ ಎಂದರೆ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇಲ್ಲ ಎಂದು ಹಿಂಜರಿಯುತ್ತಿದ್ದರು. ವಿದ್ಯಾರ್ಥಿಗಳ ದಾಖಲಾತಿ ಮಾಡಿಸಿ ಸುಮಾರು ೧೦ ವರ್ಷಗಳ ಕಾಲ ೫೦ ರೂಗಳ ಸಂಬಳಕ್ಕೆ ಶಿಕ್ಷಕರ ಕೆಲಸ ಮಾಡಿದ್ದೇವೆ. ಗ್ರಾಮಾಂತರ ಪ್ರದೇಶದ ಕುಟುಂಬ ವ್ಯವಸ್ಥೆಯಲ್ಲಿರುವ ವಿದ್ಯಾರ್ಥಿಗಳನ್ನು ಹತೋಟಿಗೆ ತರಲು ಹಾಗೂ ಶಿಕ್ಷಣದ ಅರಿವು ಇಲ್ಲದ ಮಕ್ಕಳಲ್ಲಿ ಶಿಕ್ಷಣದ ಜ್ಞಾನವನ್ನು ತುಂಬಿಸಲು ವಿದ್ಯಾರ್ಥಿಗಳಿಗೆ ಹಲವು ಕಠಿಣ ಶಿಕ್ಷೆಗಳನ್ನು ನೀಡಬೇಕಾಯಿತು. ಶೈಕ್ಷಣಿಕ, ಮೌಲ್ಯಾಧಾರಿತ ಹಾಗೂ ಸಾಂಸ್ಕೃತಿಕ ಅಭಿವೃದ್ದಿ ಮೂರು ಅಂಶಗಳ ಆಧ್ಯತೆ ಮೇರೆಗೆ ಹಲವು ಯೋಜನೆಗಳನ್ನು ರೂಪಿಸಿ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ವಾತಾವರಣ ತುಂಬಿಸಲು ಸಾಕಷ್ಟು ಶ್ರಮಪಡಬೇಕಾಯಿತು. ಅಂದಿನ ಶಿಕ್ಷಕರ ಸಮೂಹದ ಶ್ರಮದಿಂದ ನಮಗೆ ಭಾರತೀಯ ಸಂಸ್ಕೃತಿ ಹಾಗೂ ಸನಾತನ ಧರ್ಮದ ಆಧಾರಿತ ಗೌರವದ ಜತೆಗೆ ಉನ್ನತ ಮಟ್ಟದಲ್ಲಿರುವ ನಿಮ್ಮ ನೋಡುವ ಭಾಗ್ಯ ದೊರೆತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೆ.ಬಿ.ವೆಂಕಟರವಣಪ್ಪ, ಜಯರಾಮರೆಡ್ಡಿ, ಬಿ.ವೆಂಕಟೇಶ್‌ಮೂರ್ತಿ, ಬಿ.ನರಸಿಂಹಮೂರ್ತಿ, ಬಿ.ಎನ್.ಶಿವಾರೆಡ್ಡಿ, ಕೆ.ಮುತ್ತಾರೆಡ್ಡಿ, ಬಿ.ಲಕ್ಷö??ಣರೆಡ್ಡಿ, ಜಿ.ತಿಮ್ಮಪ್ಪ, ಬಾಷ, ಸಿಬ್ಬಂದಿ ಶ್ರೀನಿವಾಸ್, ಶಿವಣ್ಣ ಹಾಗೂ ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: