April 26, 2024

Bhavana Tv

Its Your Channel

ಉಪಚುನಾವಣೆ ನಂತರ ಜೆಡಿಎಸ್ ಅಧಿಕೃತ ಅಭ್ಯರ್ಥಿ ಘೋಷಣೆ- ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಜಶೇಖರರೆಡ್ಡಿ

ಬಾಗೇಪಲ್ಲಿ: ಜೆಡಿಎಸ್ ಪಕ್ಷದ ವರಿಷ್ಠರಾದ ಕುಮಾರಣ್ಣನವರು ಉಪ ಚುನಾವಣೆ ನಂತರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿ ಕಾರ್ಯಕರ್ತರ ಗೊಂದಲಕ್ಕೆ ತೆರೆ ಎಳೆಯಲಿದ್ದಾರೆಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಜಶೇಖರರೆಡ್ಡಿ ತಿಳಿಸಿದರು.
ತಾಲೂಕಿನ ಪರಗೋಡು ಬಳಿಯ ಚಿತ್ರಾವತಿ ಅಣೆಕಟ್ಟುಗೆ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕು ಜೆಡಿಎಸ್ ಘಟಕದವತಿಯಿಂದ ಭಾನುವಾರರಂದು ಬಾಗಿನ ಅರ್ಪಿಸಿ ಮಾತನಾಡಿ, ಪಕ್ಷದ ವರಿಷ್ಠರಾದ ಕುಮಾರಣ್ಣ ಸಂಭಾವನೀಯ ಅಭ್ಯರ್ಥಿಗಳಿಗೆ ಒಂದು ಟಾಸ್ಕ್ ನೀಡಿದ್ದಾರೆ, ರಾಜ್ಯಾಧ್ಯಾಂತ ಘೋಷಣೆ ಮಾಡಿರುವ ಸಂಭಾವನೀಯ ಅಭ್ಯರ್ಥಿಗಳ ವರದಿಯನ್ನು ಪರಿಗಣಿಸಿ ಅಂತಿಮ ಮಾಡಬೇಕಾಗುತ್ತದೆ. ಪಕ್ಷದ ಕಾರ್ಯಕರ್ತರಲ್ಲಿ ಬೆರೆಯುವ ಹಾಗೂ ಸಂಘಟನೆಗೆ ಒತ್ತು ನೀಡುವವರಿಗೆ ಮಾತ್ರ ಪಕ್ಷ ಟಿಕೆಟ್ ನೀಡುತ್ತದೆ. ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷವನ್ನು ನೆನಪಿಸಿಕೊಳ್ಳುವರಿಗೆ ಜೆಡಿಎಸ್ ಟಿಕೆಟ್ ನೀಡಲು ಸಾಧ್ಯವಿಲ್ಲ. ಜೆಡಿಎಸ್ ಶಕ್ತಿ ಕೇಂದ್ರ ಬಿಡದಿಯಲ್ಲಿ ಜನತಾ ಪರ್ವ ಕಾರ್ಯಕ್ರಮದಲ್ಲಿ ಪಕ್ಷ ೧೨೩ ಮಿಷನ್‌ನ ಟಾಸ್ಕ್ನೊಂದಿಗೆ ೧೦೦ ದಿನಗಳಲ್ಲಿ ಸಂಭಾವನೀಯ ಅಭ್ಯರ್ಥಿಗಳು ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾದರೆ ಮಾತ್ರ ಟಿಕೆಟ್ ನೀಡುತ್ತಾರೆ ಇಲ್ಲದಿದ್ದರೆ ಹೊಸಬರಿಗೆ ಮಣೆ ಹಾಕುತ್ತಾರೆ ಎಂದರು.
ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಮಹಮ್ಮದ್ ನೂರುಲ್ಲಾ ಮಾತನಾಡಿ, ಹಣ ಕೊಟ್ಟು ಕಾರ್ಯಕರ್ತರನ್ನು ಕರೆತರುವವರಿಗೆ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು ಮನ್ನಣೆ ನೀಡುವುದಿಲ್ಲ, ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವವರಿಗೆ ಚುನಾವಣೆ ಸಮಿಪಸುತ್ತಿರುವ ಬೆನ್ನಲೆ ಜೆಡಿಎಸ್ ಪಕ್ಷ ನೆನಪು ಬರುತ್ತೆ, ಇಷ್ಟ ಬಂದಾಗ ಜೆಡಿಎಸ್ ಪಕ್ಷಕ್ಕೆ ಬರುವವರಿಗೆ ಪಕ್ಷದ ವರಿಷ್ಠರು ಟಿಕೆಟ್ ನೀಡುವುದಿಲ್ಲ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಸೂರ್ಯನಾರಾಯಣರೆಡ್ಡಿಉಪಧ್ಯಕ್ಷ ಪಟೇಲ್ ವೆಂಕಟರೆಡ್ಡಿ, ಕಾರ್ಯದರ್ಶಿ ಜಯಪ್ರಕಾಶ್‌ರೆಡ್ಡಿ, ಗುಡಿಬಂಡೆ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ, ಉಪಾಧ್ಯಕ್ಷ ವರ್ಲಕೊಂಡ ರವೀಂದ್ರನಾಥ್, ಕುಮಾರಪಡೆ ಜಿಲ್ಲಾಧ್ಯಕ್ಷ ನಾಗರಾಜು, ಮಹಿಳಾ ಘಟಕದ ಉಪಾಧ್ಯಕ್ಷೆ ಶಿಲ್ಪ ಗಂಗುಲಪ್ಪ ಮತ್ತಿತರರು ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: