April 26, 2024

Bhavana Tv

Its Your Channel

ಹಣದ ಕೊರತೆಯಿಂದ ಜನ ಕಾನೂನು ಸೌಲಭ್ಯದಿಂದ ವಂಚಿತರಾಗಬಾರದು ” :- ನ್ಯಾಯಾಧೀಶ ಎಸ್ ಎಂ ಅರುಟಗಿ

ಬಾಗೇಪಲ್ಲಿ :- ಬಡ ವರ್ಗದವರಿಗೆ ಉಚಿತ ಕಾನೂನು ಸೇವೆಯನ್ನು ನೀಡುವ ಉದ್ದೇಶದಿಂದ ಉಚಿತ ಕಾನೂನು ಸೇವಾ ಕಾಯಿದೆ ಜಾರಿಗೆ ತರಲಾಗಿದೆ, ಎಂದು ನ್ಯಾಯಾಧೀಶ ಎಸ್ ಎಂ ಅರುಟಗಿ ಹೇಳಿದರು.

ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ, ಅಬಕಾರಿ ಇಲಾಖೆ ಬಾಗೇಪಲ್ಲಿ , ಕಾರ್ಯನಿರತ ಪತ್ರಕರ್ತರ ಸಂಘ , ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇವರ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಭಾರತ ಸ್ವಾತಂತ್ರ‍್ಯೋತ್ಸವ ದಿನ ಅಮೃತ ಮಹೋತ್ಸವ ಅಂಗವಾಗಿ ಕಾನೂನು ಸೇವೆಗಳ ದಿನಾಚರಣೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶ ವೈ ವಿ ಚಂದ್ರಚೂಡ್ ಅವರ ದೂರದಷ್ಟಿಯ ಫಲವಾಗಿ ಇಂದು ಸಾಮಾನ್ಯ ನಾಗರಿಕರೂ ಕಾನೂನಿನ ನೆರವು ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೂ ಕಾನೂನು ಸೌಲಭ್ಯ ದೊರೆಯಬೇಕೆಂಬ ಉದ್ದೇಶದಿಂದ ಉಚಿತ ಕಾನೂನು ಸೇವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ನಂತರ ಕೋರ್ಟ್ ಸೂಚನೆ, ಮಾರ್ಗಸೂಚಿ ಮೇರೆಗೆ ಸರಕಾರ ಇದನ್ನು ಶಾಸನಬದ್ಧಗೊಳಿಸಿದೆ.ಇದರಿಂದ ಎಲ್ಲ ವರ್ಗದ ಜನರೂ ಕಾನೂನು ನೆರವು ಪಡೆಯುವಂತಾಗಿದೆ, ಎಂದು ಹೇಳಿದರು.

೧೯೮೭ರಲ್ಲಿ ಉಚಿತ ಕಾನೂನು ಸೇವೆ ಕಾಯಿದೆ ರೂಪುಗೊಂಡರೂ, ಜಾರಿಗೆ ಬಂದಿದ್ದು ೧೯೯೫ರಲ್ಲಿ. ಪ್ರಸ್ತುತ ತಾಲೂಕು, ಜಿಲ್ಲೆ , ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ದುರ್ಬಲರಿಗೆ ಕಾನೂನು ನೆರವು, ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ.
ಸಾಮಾಜಿಕ ಬದಲಾವಣೆಗಳಲ್ಲಿ ಕಾನೂನು ಸೇವಾ ಪ್ರಾಧಿಕಾರ ಮಹತ್ವದ ಪಾತ್ರ ವಹಿಸಿದೆ ಎಂದರು.

ಸಮಾಜದ ಬಡವರ್ಗದ ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ, ಮಹಿಳೆ ಮಕ್ಕಳು ಹಿಂದುಳಿದ ವರ್ಗ ಎಲ್ಲರೂ ಸಾರ್ವಜನಿಕರು ಸಹ ಉಚಿತ ಕಾನೂನು ಸೇವಾ ಪ್ರಾಧಿಕಾರದಿಂದ ತಮಗೆ ಬೇಕಾಗಿರುವಂತಹ ಕಾನೂನುಗಳನ್ನು ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿ ಸಹ ಕಾನೂನಿನ ಸಲಹೆ ಮತ್ತು ಸೂಚನೆಗಳನ್ನು ಪಡೆದು ಉತ್ತಮ ಪ್ರಜೆಯಾಗಬೇಕು ಎಂದರು .

ಹಿರಿಯ ವಕೀಲ ಕರುಣಾಸಾಗರ್ ರೆಡ್ಡಿ ಮಾತನಾಡಿ ತಾಲ್ಲೂಕು ಮಟ್ಟದಲ್ಲಿ ಉಚಿತ ಕಾನೂನು ಸೇವಾ ಪ್ರಾಧಿಕಾರ ನಿರ್ವಹಿಸುತ್ತಿದ್ದು ಎಲ್ಲ ಬಡ ವರ್ಗದವರು ಇದರ ಸೌಲಭ್ಯವನ್ನು ಪಡೆದುಕೊಂಡು ಮುಂದಾಗಬೇಕು ಎಂದರು .

ವಕೀಲ ಎಂ ಕೆ ಅಲ್ಲಬಕಾಷ್ ಮಾತನಾಡಿ ಭಾರತದ ಸಂವಿಧಾನ ಮಹಿಳೆಯರಿಗಾಗಿ ವಿಶೇಷವಾದಂಥ ಹಕ್ಕುಗಳನ್ನು ನೀಡಿದೆ ಅವಳು ಮತ್ತು ತಮಗೆ ನೀಡಿರುವಂತೆ ಎಲ್ಲ ಕಾನೂನುಗಳನ್ನು ಬಳಸಿಕೊಂಡು ಸಬಲರಾಗಿ ಈ ದೇಶದ ಚುಕ್ಕಾಣಿಯನ್ನು ಹಿಡಿಯಬೇಕು ಎಂದರು .

ಸಂದರ್ಭದಲ್ಲಿ ಗೌರವಾನ್ವಿತ ನ್ಯಾಯಾಧೀಶರಾದ ಎಸ್ ಎಂ ಅರುಟಗಿ ಅವರಿಂದ ಕಂದಾಯ ಇಲಾಖೆಯ ಕಂದಾಯ ಇಲಾಖೆ ವಿವಿಧ ಸೌಲಭ್ಯಗಳ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು .

ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಚಿನ್ನಸ್ವಾಮಿ , ಕಂದಾಯ ಇಲಾಖೆಯ ಸುಬ್ರಮಣ್ಯ , ವಕೀಲರ ಸಂಘದ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ , ಹಿರಿಯ ವಕೀಲ ಜೆ ಎನ್ ನಂಜಪ್ಪ , ಶ್ರೀ ನಾರಾಯಣ , ಸತ್ಯನಾರಾಯಣ ರಾವ್ , ಚಾಂದ್ ಬಾಷಾ , ಚಂದ್ರಶೇಖರ್ , ಮಮತಾ , ಬಿಂದು ಕುಮಾರಿ , ಶಿವ , ನಾಗಭೂಷಣ ಎನ್ , ಇತರ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: