March 29, 2024

Bhavana Tv

Its Your Channel

ಪೆಟ್ರೋಲ್ ಗಾಗಿ ಮುಗಿಬಿದ್ದ ಆಂಧ್ರದ ಜನ

ಬಾಗೇಪಲ್ಲಿ : ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೭ರಲ್ಲಿರುವ ಪೆಟ್ರೋಲ್ ಬಂಕ್‌ಗಳಿAದ ಆಂಧ್ರಪ್ರದೇಶದ ಜನರು ವಾಹನಗಳಿಗೆ ಇಂಧನ ತುಂಬಿಸಿಕೊAಡು ಹೋಗುವಲ್ಲಿ ಮುಗಿಬೀಳುತ್ತಿರುವ ಚಿತ್ರಣ ಕಂಡುಬರುತ್ತಿದೆ.

ಬಾಗೇಪಲ್ಲಿ ತಾಲ್ಲೂಕಿನ ಗಡಿ ಪ್ರದೇಶಕ್ಕೆ ಆಂಧ್ರಪ್ರದೇಶದ ಗಡಿ ಕೇವಲ ೩ ಕಿ. ಮೀ ದೂರ ಇದ್ದು,
ರಾಷ್ಟ್ರೀಯ ಹೆದ್ದಾರಿ-೭ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಂಪರ್ಕ ಹೊಂದಿದೆ.
ಆAಧ್ರಪ್ರದೇಶದಲ್ಲಿ ಪೆಟ್ರೋಲ್ ಲೀಟರ್ ಒಂದಕ್ಕೆ ರೂ ೧೧೦.೧೭ ಹಾಗೂ ಡೀಸೆಲ್ ರೂ೯೬. ೨೮ ಇದ್ದು, ಆದರೆ ಬಾಗೇಪಲ್ಲಿಯಲ್ಲಿ ಪೆಟ್ರೋಲ್-ರೂ ೧೦೦. ೬೨ ಹಾಗೂ ಡೀಸೆಲ್ ರೂ ೮೫. ೦೬ ಇದೆ.

ಲೀಟರ್ ಒಂದಕ್ಕೆ ಹೆಚ್ಚು ಕಡಿಮೆ ೧೦/- ರೂ. ಆಂಧ್ರಪ್ರದೇಶ ಮತ್ತು ಕರ್ನಾಟಕಕ್ಕೆ ವ್ಯತ್ಯಾಸವಿದ್ದು, ಗಡಿಯ ಅಂಚಿನಲ್ಲಿರುವ ಜನರು ಹಾಗೂ ಬಹು ದೂರ ಸಾಗುವ ಲಾರಿ ಬಸ್ ಗಳು ಹಾಗೂ ಚೆಕ್‌ಪೋಸ್ಟ್, ಕೊಡೂರು, ಚಿಲಮತ್ತೂರು, ಲೇಪಾಕ್ಷಿ, ಗೋರಂಟ್ಲ ಸೇರಿದಂತೆ ವಿವಿಧ ಕಡೆಯ ಗ್ರಾಮೀಣ ಪ್ರದೇಶಗಳ ಜನರು ದ್ವಿಚಕ್ರ, ಆಟೊ, ಕಾರು, ಟೆಂಪೋ, ಲಾರಿಗಳಲ್ಲಿ ಹಾಗೂ ಕ್ಯಾನುಗಳಲ್ಲಿ ಇಂಧನ ತುಂಬಿಸಿಕೊAಡು ಹೋಗುತ್ತಿದ್ದಾರೆ.

ಇದರಿಂದ ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಮಾರಾಟ ಹೆಚ್ಚಾಗಿದೆ. ಆದರೆ ಬೆಲೆ ಇಳಿಕೆಯಿಂದ ದಾಸ್ತಾನು ಇಟ್ಟಿದ್ದ ಹಲವು ಬಂಕ್ ಮಾಲೀಕರಿಗೆ ನಷ್ಠ ಅಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಾರೆ ಪೆಟ್ರೋಲ್ ಡೀಸಲ್ ಬೆಲೆ ಇಳಿಕೆಯಿಂದ ಆಂಧ್ರದ ಜನತೆಯಿಂದ ಗಡಿಯಂಚಿನಲ್ಲಿರುವ ಬಂಕ್ ಗಳಿಗೆ ದುಪ್ಪಟ್ಟು ಮಾರಾಟ.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: