March 28, 2024

Bhavana Tv

Its Your Channel

ದಶಕ ಕಳೆದರೂ ಜನಬಳಕೆಗೆ ಬಾರದ ಆರೋಗ್ಯ ಉಪಕೇಂದ್ರ.

ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿಯ ಪೆಸಲಪರ್ತಿ ಗ್ರಾಮದಲ್ಲಿ ಗಡಿಗ್ರಾಮಗಳ ಜನರಿಗೆ ಅನುಕೂಲವಾಗಲೆಂದು ಸುಮಾರು ದಶಕದ ಹಿಂದೆ ಆರೋಗ್ಯ ಉಪಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗಿದೆ. ಇದಕ್ಕೆ ಸ್ಥಳೀಯ ದಾನಿಗಳು ಜಾಗವನ್ನೂ ಕೊಡುಗೆಯಾಗಿ ನೀಡಿ ಊರಿನ ಜನರಿಗೆ ಅನುಕೂಲವಾಗಲಿ ಎಂದಿದ್ದರು. ಆದರೆ ಇಂದಿಗೂ ಅಲ್ಲಿ ಆರೋಗ್ಯ ಸೇವೆಗೆ ಅದನ್ನು ಬಳಕೆ ಮಾಡಲಾಗುತ್ತಿಲ್ಲ. ಕಟ್ಟಡವು ಹಳೆಯದಾಗಿ ಶಿಥಿಲಾವಸ್ಥೆಯ ಹಂತಕ್ಕೆ ತಲುಪಿದೆ.
ನಿವಾ
ಈ ಕುರಿತು ಜಿಲ್ಲಾಪಂಚಾಯತಿಯ ಮುಖ್ಯ ಕಾರ್ಯ  ನಿರ್ವಹಣಾಧಿಕಾರಿ ಗೆ ಹಾಗೂ ತಾಲ್ಲೂಕು ವೈದ್ಯಧಿಕಾರಿಗೆ ಮನವಿಯನ್ನು ಮಾಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕರ ತೆರಿಗೆ ಹಣ ಈ ರೀತಿ ಪೋಲಾಗುತ್ತಿದೆ ಎಂದು ಗ್ರಾಮದ ಪ್ರಗತಿಪರ ಯುವಚಿಂತಕ ಹಾಗೂ ಎಸಿಎಫ್ ನ ಮುಖಂಡ ಅಂಜಿನಪ್ಪರವರು ತಿಳಿಸಿದರು.

ಆದ್ದರಿಂದ ಕೂಡಲೇ ಸಂಬAಧ ಪಟ್ಟ ಅರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕ್ರಮವಹಿಸಿ ತಕ್ಷಣ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಆರೋಗ್ಯ ಉಪಕೇಂದ್ರಕ್ಕೆ ಸೂಕ್ತ ಸಿಬ್ಬಂದಿಯನ್ನು ನೇಮಿಸಬೇಕು. ಆರೋಗ್ಯ ಉಪಕೇಂದ್ರವನ್ನು ಜನಾನುಕೂಲಕ್ಕೆ ಸಿಗುವಂತೆ ಮಾಡಬೇಕೆಂದು ಎಸಿಎಫ್ (ಎಂಟಿ ಕರೆಪ್ಷನ್ ಫೋರ್ಸ್) ವತಿಯಿಂದ ಅಂಜಿನಪ್ಪರವರು ಒತ್ತಾಯಿಸಿದರು.

ನಾವು ಕುಗ್ರಾಮಗಳಲ್ಲಿ ಬದುಕುತ್ತಿದ್ದೇವೆ. ಆಕಸ್ಮಿಕವಾಗಿ ಸಮಯವಲ್ಲದ ಸಮಯದಲ್ಲಿ ಏನಾದರು ಆರೋಗ್ಯ ಸಮಸ್ಯೆ ಎದುರಾದರೆ ದೂರದ ಬಾಗೇಪಲ್ಲಿ ಪಟ್ಟಣ ಅಥವಾ ಆಂಧ್ರಪ್ರದೇಶದ ಗೊರಂಟ್ಲಗೆ ಹೋಗಬೇಕಾಗಿರುತ್ತದೆ. ಕಟ್ಟಡ ಕಟ್ಟಿ ಸುಮ್ಮನೆ ಹಾಗೇ ಬಿಟ್ಟಿರುವುದು ಆಡಳಿತದಲ್ಲಿ ಗ್ರಾಮೀಣ ಪ್ರದೇಶಗಳ ಬಗೆಗಿನ ದಿವ್ಯ ನಿರ್ಲಕ್ಷ್ಯ ಎನ್ನಬಹುದು. ಆದುದರಿಂದ ಆರೋಗ್ಯ ಉಪಕೇಂದ್ರವನ್ನು ಜನಬಳಕೆಗೆ ಅನುಕೂಲ ಮಾಡಿಕೊಡಬೇಕು. ಆರೋಗ್ಯ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ಸಿಪಿಐಎಂ ಮುಖಂಡ ವೆಂಕಟರಾಮಪ್ಪರವರು ಒತ್ತಾಯಿಸಿದರು.

ವರದಿ: ಗೋಪಾಲ ರೆಡ್ಡಿ,ಬಾಗೇಪಲ್ಲಿ

error: