April 20, 2024

Bhavana Tv

Its Your Channel

ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಬೃಹತ್ ಶಿಬಿರ

ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಯವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಾಗೂ ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ಶಾಂತಿನಿಕೇತನ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.
ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್, ಕ್ವಿದಾಯ ಸ್ಮಾರಕ್ ಗ್ರಂಥಿ ಆಸ್ಪತ್ರೆ, ಬೆಂಗಳೂರು, ಮುದ್ದೇನಹಳ್ಳಿ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ನಾರಾಯಣ ಹೃದಯಾಲಯ, ಸಪ್ತಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕ್ಷೇಂದ ಬೆಂಗಳೂರು, ಶಂಕರ್ ಕಣ್ಣಿನ ಆಸ್ಪತ್ರೆ, ಬೆಂಗಳೂರು, ಬಾರತಿಯ ರೆಡ್ ಕ್ರಾಸ್ ಸೊಸೈಟಿ ಚಿಕ್ಕಬಳ್ಳಾಪುರ ಹಾಗು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆ ಇವರ ಸಹಯೋಗದಲ್ಲಿ ಇಂದು ತಾಲ್ಲೂಕು ಮಟ್ಟದ ಬೃಹತ್ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದ್ದು.
ಈ ಶಿಬಿರದಲ್ಲಿ, ರಕ್ತಡೊತ್ತಡ, ಮಧುಮೇಹ, ಕಣ್ಣಿನ ತಪಾಸಣೆ, ಕ್ಯಾನ್ಸರ್ ತಪಾಸಣೆ, ಮೂಳೆ, ಗರ್ಭಕೋಶ, ದಂತ ಚಿಕಿತ್ಸೆ ಇತ್ಯಾದಿ ಅನೇಕ ಸಮಸ್ಯೆಗಳಿಗೆ ವಿವಿಧ ಆಸ್ಪತ್ರೆಗಳ ನುರಿತ ವೈದ್ಯರಿಂದ ತಪಾಸಣೆ ನಡೆಸಿ, ಔಷದಿಗಳನ್ನು ನೀಡಲಾಯಿತು, ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ದಿನಾಂಕವನ್ನು ನೀಡಿ, ಬೆಂಗಳೂರಿಗೆ ಬರುವಂತೆ ರೋಗಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡುತ್ತಾ, ಮನುಷ್ಯನಿಗೆ ಆರೋಗ್ಯವೇ ಮಹಾಭಾಗ್ಯ, ಉತ್ತಮ ಆರೋಗ್ಯ, ಎಲ್ಲಾ ಧನಕನಕಾಧಿ ವಸ್ತುಗಳಿಗಿಂತ ಮಿಗಿಲು, ಆದ್ದರಿಂದ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾದ ಆಹಾರ ಹಾಗೂ ನೀರನ್ನು ಸೇವಿಸಬೇಕು, ಆರೋಗ್ಯ ತೊಂದರೆಯಿದ್ದಲ್ಲಿ ಇಂತಹ ಆರೋಗ್ಯ ಶಿಬಿರಗಳ ಅನುಕೂಲವನ್ನು ಸದುಪಯೋಗಪಡಿಸಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ಹೋಬಲಿ ಮಟ್ಟದಲ್ಲಿ ಇಂತಹ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಸ್. ರಮೇಶ್‌ಬಾಬು, ಪುರಸಭೆ ಅಧ್ಯಕ್ಷ ರೇಷ್ಮಾಭಾನು ಉಪಾಧ್ಯಕ್ಷ ಶ್ರೀನಿವಾಸ್, ರೆಡ್ಡ ಕ್ರಾಸ್ ಸೋಸೈಟಿಯ ಜಯರಾಂ, ಕೋಡಿರಂಗಪ್ಪ, ಡಾ.ಸತ್ಯನಾರಾಯಣರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ನರೇಂದ್ರ, ಭೂಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಪ್ರಭಾಕರರೆಡ್ಡಿ, ಮುಖಂಡ ಅಮತನಾಥರೆಡ್ಡಿ, ಬಿಳ್ಳೂರು ನಾಗರಾಜ್ ಮತ್ತಿತರರು ಹಾಜರಿದ್ದರು.

ವರದಿ; ಗೋಪಾಲ ರೆಡ್ಡಿ ಬಾಗೇಪಲ್ಲಿ….

error: