April 25, 2024

Bhavana Tv

Its Your Channel

8 ನೇ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಅಂಗವಾಗಿ “ಯೋಗ ನಡಿಗೆ ಜಾಥಾ”

ಬಾಗೇಪಲ್ಲಿ:- ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಿಡಿತದಲ್ಲಿಡುವ ಸಾಧನವಾಗಿದ್ದು ಪ್ರತಿಯೊಬ್ಬರು ತಮ್ಮ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ತಾಲ್ಲೂಕು ತಹಶಿಲ್ದಾರ್ ವೈ. ರವಿ ಕರೆ ನೀಡಿದರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಸ್ಥಳಿಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಸಂಜೆ 8ನೇ ಅಂತರರಾಷ್ಟ್ರೀಯ ವಿಶ್ವ ಯೋಗದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ “ಯೋಗ ನಡಿಗೆ ಜಾಥಾ” ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯೋಗಾಭ್ಯಾಸ ಮಾಡಲು ಲಿಂಗ, ಜಾತಿ, ವಯಸ್ಸಿನ ಭೇದವಿಲ್ಲ ಆಸಕ್ತಿಯಿಂದ ಪತ್ರಿಯೊಬ್ಬರೂ ಮುಕ್ತ ಮನಸ್ಸಿನಿಂದ ನಿರ್ಭೀತರಾಗಿ ಯೋಗಾಭ್ಯಾಸ ಮಾಡಬಹುದೆಂದರು.

ತಾಲ್ಲೂಕು ವೈದ್ಯ ಅಧಿಕಾರಿಗಳಾದ ಡಾ. ಸಿ.ಎನ್. ಸತ್ಯನಾರಾಯಣ ರೆಡ್ಡಿ ಮಾತನಾಡಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ವಿಶ್ವಕ್ಕೆ ಭಾರತದ ಕೊಡುಗೆಯಾಗಿದ್ದು, ಇಡೀ ವಿಶ್ವದ ವಾದ್ಯ ಬಹುಪಾಲು ರಾಷ್ಟ್ರಗಳು 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂಭ್ರಮದಲ್ಲಿವೆ ಎಂದರು

ಜಾಥಾದಲ್ಲಿ ಪತಂಜಲಿ ಯೋಗ ಸಮಿತಿಯ ಪ್ರಮುಖರಾದ ಎಸ್. ಮುನಿರಾಮಯ್ಯ,ನಾರಾಯಣ ಸ್ವಾಮಿ, ರಾಮಚಂದ್ರ, ಮುನಿರಾಜು , ಶಿವಪ್ಪ, ಗ್ರೇಡ್2 ತಹಶಿಲ್ದಾರ್ ಸುಬ್ರಹ್ಮಣ್ಯಂ, ವಿವಿಧ ಸಂಘ ಸಂಸ್ಥೆಗಳ ಯೋಗಸಾಧಕರು,ಇನ್ನೂ ಮುಂತಾದವರು ಪ್ರಮುಖರು ಯೋಗ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: