April 19, 2024

Bhavana Tv

Its Your Channel

ಸೇನಾ ನೇಮಕಾತಿ ನೀತಿಗೆ ಆಕ್ರೋಶ: ಅಗ್ನಿಪಥ್ ಯೋಜನೆ ವಿರೋಧಿಸಿ ಸಿಪಿಐಎಂ ಪಕ್ಷದ ವತಿಯಿಂದ ಪ್ರತಿಭಟನೆ

ಬಾಗೇಪಲ್ಲಿ:-ಸೈನಿಕರ ಅಲ್ಪಾವಧಿ ನೇಮಕಾತಿಗೆ ಜಾರಿಗೆ ತರಲು ಉದ್ದೇಶಿಸಿರುವ ಅಗ್ನಿಪಥ ಯೋಜನೆಯನ್ನು ಕೇಂದ್ರ ಸರಕಾರ ಕೂಡಲೇ ಕೈಬಿಡಬೇಕು ಎಂದು ಸಿಪಿಐಎಂ ಪಕ್ಷ ಹಾಗೂ ಎಸ್. ಎಫ್.ಐ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣ ಬಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ಉದ್ದೇಶಿಸಿ ಪ್ರಜಾವೈದ್ಯ ಹಾಗೂ ಎಡಪಂಥೀಯ ಚಿಂತಕ ಡಾ.ಅನಿಲ್ ಕುಮಾರ್ ಅವುಲಪ್ಪ ಮಾತನಾಡಿ ಯುವಕರಿಗೆ ಉದ್ಯೋಗ ನೀಡುವ ಬದಲು ನಿರುದ್ಯೋಗ ಹೆಚ್ಚಿಸುವ ಕೆಲಸವು ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರಕಾರ ಮಾಡುತ್ತಿದೆ. ಅಗ್ನಿಪಥ ಪ್ರಕ್ರಿಯೆಯಲ್ಲಿ ಮೀಸಲಾತಿ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಅಗ್ನಿಪಥ ಯೋಜನೆ ಅನುಷ್ಠಾನದಿಂದ ಯುವಕರಿಗೆ ಅನ್ಯಾಯವಾಗುತ್ತದೆ. ರಕ್ಷಣಾ ಇಲಾಖೆಯನ್ನು ಖಾಸಗೀಕರಣದ ಹೆಸರಲ್ಲಿ ಕೇಸರೀಕರಣ ಮಾಡುವ ಕೆಲಸಕ್ಕೆ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೈ ಹಾಕಿದೆ ಹಾಗೂ ಕೋಟ್ಯಂತರ ಯುವಕರ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ತಾಲ್ಲೂಕು ಸಿಪಿಐಎಂ ಕಾರ್ಯದರ್ಶಿ ಮಹಮ್ಮದ್ ಅಕ್ರಂ ಮಾತನಾಡಿ ರಾಷ್ಟ್ರದ್ಯಂತ ಪ್ರತಿಭಟನೆ ಮತ್ತು ಹಿಂಚಾರ ನಡೆಯುತ್ತಿದ್ದರೂ ಸರಕಾರ ಹಠ ಬಿಡದೆ ಯೋಜನೆ ಜಾರಿ ಮಾಡಲು ಮುಂದಾಗಿರುವುದು ಖಂಡನಿಯ.
ಅಗ್ನಿಪಥ ಹೆಸರಲ್ಲಿ ಕೇಸರೀಕರಣ ಮಾಡುವ ಹುನ್ನಾರ ಮಾಡುತ್ತಿದ್ದೀರಿ. ಇದರಿಂದ ದೇಶದ ಭದ್ರತೆಗೆ ಧಕ್ಕೆ ಬರಲಿದೆ. ರಕ್ಷಣಾ ಇಲಾಖೆಯಲ್ಲಿ ಖಾಸಗೀಕರಣ ಮಾಡುವ ಕೆಲಸವನ್ನು ಕೂಡಲೇ ಕೈಬಿಡಿ. ದೇಶದ ಜನರ ದಿಕ್ಕು ತಪ್ಪಿಸುವ ಯೋಜನೆ ಜಾರಿಗೆ ಸರಕಾರ ಮುಂದಾಗಬಾರದು ಎಂದು ಒತ್ತಾಯಿಸಿದ್ದಾರೆ

ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ರಘುರಾಮ ರೆಡ್ಡಿ, ಬಿಳ್ಳೂರು ನಾಗರಾಜು, ಅಶ್ವಥಪ್ಪ, ಸಾವಿತ್ರಮ್ಮ, ಮಾಡಪ್ಪಲ್ಲಿ ನರಸಿಂಹಮೂರ್ತಿ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು..
ವರದಿ: ರಾ.ನ.ಗೋಪಾಲ ರೆಡ್ಡಿ

error: