April 20, 2024

Bhavana Tv

Its Your Channel

ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಹೊರಗುತ್ತಿಗೆ ನೌಕರರ ವತಿಯಿಂದ ಪ್ರತಿಭಟನೆ

ಬಾಗೇಪಲ್ಲಿ:- ತಾಲ್ಲೂಕು ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಬಾಕಿ ವೇತನ ಹಾಗೂ ಪಿ.ಎಫ್ ಪಾವತಿಸುವಂತೆ ಒತ್ತಾಯಿಸಿ ತಾಲ್ಲೂಕು ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಗುತ್ತಿಗೆ ನೌಕರರ ಸಂಘಟನೆ ಹಾಗೂ ಸಿ.ಐ.ಟಿ.ಯು ವತಿಯಿಂದ ಅನಿರ್ದಿಷ್ಟ ಧರಣಿ ನಡೆಸಲಾಯಿತು.

ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮುಂಭಾಗದಲ್ಲಿ ನಡೆಸಿದ ನೌಕರರು, ಸರ್ಕಾರ ವಸತಿ ನಿಲಯಗಳಲ್ಲಿ ಕಡಿಮೆ ಸಂಬಳದಲ್ಲಿ ಸುಮಾರು 15 – 20 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಸಕಾಲಕ್ಕೆ ವೇತನ ಪಾವತಿಸಿಲ್ಲ. ಹಲವು ತಿಂಗಳಿAದ ವೇತನ ಬಾಕಿ ಉಳಸಿಕೊಂಡ ಪರಿಣಾಮ ಹೊರಗುತ್ತಿಗೆ ಕಾರ್ಮಿಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಿಐಟಿಯು ಗೌರವಾಧ್ಯಕ್ಷ ಬಿ.ಆಂಜನೇಯ ರೆಡ್ಡಿ ಕಿಡಿಕಾರಿದರು.

ಇನ್ನು, ಇಎಸ್ ಐ ಹಾಗೂ ಪಿಎಫ್ ಅನ್ನು ಎಲ್ಲ ನೌಕರರಿಗೂ ವಿಸ್ತರಣೆ ಮಾಡಬೇಕು. ಹೊರಗುತ್ತಿಗೆ ಆಧಾರಿತವಾಗಿ ಸಮಾಜ ಕಲ್ಯಾಣ, ಬಿಸಿಎಂ, ಹಾಗೂ ವಸತಿ ಶಾಲೆಗಳ ವಿದ್ಯಾರ್ಥಿ ನಿಲಯಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಏಜನ್ಸಿಗಳಿಂದ ವೇತನ ಕೊಡಿಸಬೇಕು,ಗುರುತಿನ ಚೀಟಿ ನೀಡಬೇಕು, ದಿನದಲ್ಲಿ ಎಂಟು ಗಂಟೆ ಮಾತ್ರ ದುಡಿಸಕೊಳ್ಳಬೇಕು,ಪ್ರತಿ ತಿಂಗಳು 5 ನೇ ತಾರೀಖು ಸಂಬಳ ನೀಡಬೇಕು, ಗುತ್ತಿಗೆ ನೌಕರರನ್ನು ವಿನಾಕಾರಣ ಕೆಲಸದಿಂದ ತೆಗೆಯಬಾರದು.ಇನ್ನೂ ಮುಂತಾದ ಬೇಡಿಕೆಗಳನ್ನು ಪೂರೈಸಲು ಅನಿರ್ದಿಷ್ಟ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಸಿಐಟಿಯು ಅದ್ಯಕ್ಷ. ಬಿ.ಎನ್.ವೆಂಕಟರವಣ ಉಪಾಧ್ಯಕ್ಷ ಚಿಕ್ಕ ನರಸಿಂಹಮೂರ್ತಿ,ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಸುನಿತಮ್ಮ ನಂಜುAಡಪ್ಪ, ನಾಗಮ್ಮ,ಲಕ್ಷ್ಮಮ್ಮ ಅಮರಾವತಿ, ಮಮತ,ಈಶ್ವರಮ್ಮ,ನಾಗಮಣಿ,ಅಶ್ವಥಪ್ಪ, ,ನಾರಾಯಣಪ್ಪ ,
ಅಲುವೇಲಮ್ಮ,ಈಶ್ವರಮ್ಮ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ:ಗೋಪಾಲ ರೆಡ್ಡಿ

error: