October 4, 2022

Bhavana Tv

Its Your Channel

ಪೆನಮಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿ ಶಾಲಾ ಸಂಸತ್ತು ರಚನೆ

ಬಾಗೇಪಲ್ಲಿ:-ತಾಲ್ಲೂಕು ದೇವರಗುಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆನುಮಲೆ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ ಚುನಾವಣೆ ಮೂಲಕ ನಡೆಯಿತು.

ಚುನಾವಣೆ ಪ್ರಕ್ರಿಯೆ ಸಂಪೂರ್ಣ ಪ್ರಜಾಪ್ರಭುತ್ವದ ಮಾದರಿ ನಡೆಯಿತು. ಮತದಾರರ ಪಟ್ಟಿ, ಬ್ಯಾಲೇಟ್ ಪೇಪರ, ಮತ ಮುದ್ರೆ, ಶಾಹಿ, ಗುರುತಿನ ಚೀಟಿ, ಮತ ಪೆಟ್ಟಿಗೆ ಎಲ್ಲವೂ ಅಚ್ಚುಕಟ್ಟಾಗಿದ್ದವು.

ಪ್ರಜಾಪ್ರಭುತ್ವದ ತತ್ವ ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ ಮಾಡಲು ಚುನಾವಣೆ ಪ್ರಕ್ರಿಯೆ ಅಚ್ಚುಕಟ್ಟಾಗಿ ಪಾಲಿಸುವುದರ ಜತೆಗೆ ಮತದಾನದ ಪ್ರಾತ್ಯಕ್ಷಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ2022-23ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಗೆ ಶಿಕ್ಷಕ ವೈ.ಎಂ.ಮAಜುನಾಥ್ ಚಾಲನೆ ಮಾತನಾಡಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತದಾನ ಅತ್ಯಂತ ಅವಶ್ಯವಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತದಾನ ಮಾಡುವ ಪದ್ಧತಿಯನ್ನು ಅರಿತು ಭವಿಷ್ಯದ ನಾಯಕರನ್ನು ಆಯ್ಕೆ ಮಾಡುವ ಮೂಲಕ ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.

ಶಾಲಾ ಸಂಸತ್ತು ಪಟ್ಟಿ :-
ಅಕ್ಷರದಾಸೋಹ ಮಂತ್ರಿ- ಸುನೀತ, ಶಿಕ್ಷಣ ಮಂತ್ರಿ – ಲಕ್ಷ್ಮಿ, ಆರೋಗ್ಯ ಮಂತ್ರಿ – ಶಿಲ್ಪ, ಕ್ರೀಡಾ ಮಂತ್ರಿ – ವಿಷ್ಣುವರ್ಧನ , ಪ್ರವಾಸೋದ್ಯಮ ಮಂತ್ರಿ – ಅರುಣ್ ಕುಮಾರ್, ಸಾಂಸ್ಕೃತಿಕ ಮಂತ್ರಿ _ ಗಾಯಿತ್ರಿ, ಕೈತೋಟ ಮಂತ್ರಿ – ನರೇಂದ್ರ, ಹಣಕಾಸು ಮಂತ್ರಿ – ಕಾರ್ತಿಕ, ಮೇಲ್ಕಂಡ ವಿದ್ಯಾರ್ಥಿಗಳು ಮಂತ್ರಿಮAಡಲಕ್ಕೆ ಆಯ್ಕೆಯಾದರು
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಶಿಕ್ಷಕರಾದ ವಾಣಿ, ಸಾವಿತ್ರಮ್ಮ ಎಸ್.ಡಿ.ಎಂ.ಸಿ.ಅದ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಶಾಲಾ ಮಕ್ಕಳು ಹಾಜರಿದ್ದರು.

ವರದಿ: ಗೋಪಾಲ ರೆಡ್ಡಿ

About Post Author

error: