ಮಂಕಿಯಲ್ಲಿ ಹೋಳಿ ಹಬ್ಬವನ್ನು ಪರಂಪರಾಗತವಾಗಿ ಹಿರಿಯರು ನಡೆದು ಬಂದ ಹಿರಿಯರ ಮರ್ಗರ್ಶನದಲ್ಲಿ ಆಚರಿಸಲಾಗುತ್ತದೆ. ಹುಣ್ಣುಮೆ ಯ ಪರ್ವದಲ್ಲಿ ಸಮಾಜದ ಅಧ್ಯಕ್ಷ ಸುರೇಶ್ ಖರ್ವಿಯವರ ಅಧ್ಯಕ್ಷತೆಯಲ್ಲಿ ಹೋಳಿ ಆಚರಣೆ ಕುರಿತು ಸಭೆ ನಡೆಸಲಾಗಿತ್ತು. ಪರಂಪರಾಗತವಾಗಿ ನಡೆದು ಬಂದ ಹೋಳಿಯ ಆಚರಣೆ
ಹಿರಿಯರಾದ ಗಣಪತಿ ದಿಂಗಾ ಖರ್ವಿ ಯವರ ಕುಟುಂಬದ ಮನೆತನದವರಿಗೆ ಕಾಯಿ ಹಾಗೂ ವೀಳ್ಯ ನೀಡುವ ಮೂಲಕ ಹಬ್ಬದ ಆಚರಣೆಗಳು ನಡೆದವು. ಸೋಮವಾರ ಗ್ರಾಮ ಹೋಳಿ ನಡೆಯಿತು. ಸಮಾಜದ ಹಿರಿಯರ ಸಮ್ಮುಖದಲ್ಲಿ ದೇವರಗದ್ದೆಯ ಸಮುದ್ರ ದಂಡೆಯ ಮೇಲೆ ಹೋಳಿಯನ್ನು ಸುಡಲಾಯಿತು. ಆನಂತರ ಮನೆ ಮನೆಗಳಿಗೆ ತೆರಳಿ ಹೋಳಿ ಹಬ್ಬದ ಹಾಡುಗಳನ್ನು ಹಾಡಿ ಸಂಭ್ರಮದಿಂದ ಆಚರಣೆ ನಡೆಯಿತು.
ಮಂಗಳ ವಾರ ರ್ಕಾರ ಹೋಳಿ ನಡೆಯಿತು.
ಯುವಕರು ಗುಂಪು ಗುಂಪಾಗಿ ಹೋಳಿ ಹಬ್ಬದ ಆಚರಣೆಯನ್ನು ನಡೆಸಿದರು.
ಸಂಜೆ ಶ್ರೀ ಕೆಂಡಮಹಾಸತಿ ಅಮ್ಮನವರ ದೇವಸ್ಥಾನ ಕ್ಕೆ ತೆರಳಿ ಪೂಜೆ ಮಾಡಿ ಆನಂತರ ಭವ್ಯ ಮೆರವಣಿಗೆ ನಡೆಯಿತು.
ಯುವಕರು, ಯುವತಿಯರು, ಮಹಿಳೆಯರು ಹಾಗೂ ಹಿರಿಯರು ಮೆರವಣಿಗೆ ಯಲ್ಲಿ ಪಾಲ್ಗೊಂಡು ಹಬ್ಬದ ಆಚರಣೆ ಗೆ ಮೆರಗು ನೀಡಿದರು.
ದೇವರಗದ್ದೆಯ ಮೂಲಕ ಹಳೇಮಠ ಹಾಗೂ ಸುಪರ ಬಜಾರ ತನಕ ಮೆರವಣಿಗೆ ನಡೆಯಿತು. ಆನಂತರ ಹಳೆಮಠದಲ್ಲಿ ಹೋಲಿಕಾ ದಹನ ನಡೆಯಿತು. ಈ ಸಂರ್ಭದಲ್ಲಿ ಕೊಂಕಣಿ ಖರ್ವಿ ಸಮಾಜದ ಅಧ್ಯಕ್ಷ ಸುರೇಶ ಖರ್ವಿ, ಉಪಾಧ್ಯಕ್ಷ ರಾಜಕುಮಾರ ಖರ್ವಿ, ಮಹಿಳಾ ಸಮಾಜದ ಅಧ್ಯಕ್ಷೆ ಗಂಗೆ ಖರ್ವಿ, ಕೆಂಡಮಹಾಸತಿ ದೇವಸ್ಥಾನದ ಅಧ್ಯಕ್ಷ ಗೋವಿಂದ ಖರ್ವಿ, ಹಿರಿಯರಾದ ಗಣಪತಿ ದಿಂಗಾ ಖರ್ವಿ, ತಿಮ್ಮಪ್ಪ ಖರ್ವಿ, ರಾಘು ಖರ್ವಿ, ಸಂತೋಷ ಖರ್ವಿ ಮುಂತಾದವರು ಉಪಸ್ಥಿತರಿದ್ದರು.
ಭಾವನಾ ಟಿ.ವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.