July 26, 2021

Bhavana Tv

Its Your Channel

ಹೊನ್ನಾವರ ತಾಲೂಕಿನಲ್ಲಿ ರಾಣಿ ಚೆನ್ನಭೈರಾದೇವಿಯ ಸಾಹಸ ಸಾರುವ ಶಾಶ್ವತ ಚಿತ್ರಣ ನಿರ್ಮಾಣ ಮಾಡಲು ಸಹಕಾರ ನೀಡುದಾಗಿ ಡಾ. ವೀರೇಂದ್ರ ಹೆಗ್ಗಡೆ ಭರವಸೆ


ಹೊನ್ನಾವರ: ೫೪ ವರ್ಷ ಆಳಿದ್ದ ಚೆನ್ನಭೈರಾದೇವಿಯು ಆಡಳಿತದಲ್ಲಿ ಕಾಳುಮೆಣಸು ರಾಣಿ ಎಂದೆ ಚಿರಪರಿಚಿತರಾಗಿದ್ದಾರೆ. ನಾಡನ್ನು ಆಳಿ ಹೋದ ಹಲವು ರಾಣಿಯರ ಸಾಹಸ, ಶೌರ್ಯವನ್ನು, ಆಡಳಿತವನ್ನು ನೆನಪಿಸುವ ಉತ್ಸವಗಳು ನಡೆಯುತ್ತಿದೆ. ಹಲವರ ಮೂರ್ತಿಗಳ ಸ್ಥಾಪನೆಯಾಗಿದೆ. ಇವರ ಆಳ್ವಿಕೆಯ ಕಥಾಸಾರವನ್ನು ಪಠ್ಯಪುಸ್ತಕದಲ್ಲಿ ಪ್ರಕಟವಾಗಿ ವಿದ್ಯಾರ್ಥಿಗಳಿಗೆ ಒಂದು ತರಗತಿಯ ವಿಷಯವಾಗಿದೆ. ಇವರ ಸಾಧನೆಯ ಕವಿತೆಗಳು ಬಂದಿವೆ. ಆದರೆ ೫೨ ವರ್ಷಕಾಲ ಕರಾವಳಿಯ ಬಹುಭಾಗ ಮತ್ತು ಮಲೆನಾಡನ್ನು ಆಳಿದ ಚೆನ್ನಭೈರಾದೇವಿಯ ಕುರಿತು ನೆನಪಿಸುವಂತಹ ಯಾವುದೇ ಘಟನೆ ಇಲ್ಲದೇ ಇರುವುದು ನಿಜಕ್ಕೂ ಆಶಚರ್ಯ ಮೂಡಿಸಿದೆ. ಇದನ್ನು ಮನಗಂಡು ಹೊನ್ನಾವರದ ರಾಷ್ಟಿçÃಯ ಹೆದ್ದಾರಿಗೆ ಹೊಂದಿಕೊAಡು ರಾಣಿ ಚೆನ್ನಭೈರಾದೇವಿಯ ಹೆಸರಿನಲ್ಲಿ ಒಂದು ಥೀಮ್ ಪಾರ್ಕ್ ರಚಿಸಲು ಧರ್ಮಸ್ಥಳದಿಂದ ಸಕಲ ಪ್ರೋತ್ಸಾಹ ನೀಡುವುದಾಗಿ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.


ಕಾರ್ಯನಿಮಿತ್ತ ಧರ್ಮಸ್ಥಳದಿಂದ ಧಾರವಾಡ ಹೋಗುವಾಗ ಪಟ್ಟಣದ ಪ್ರವಾಸಿಮಂದಿರದಲ್ಲಿ ಶಾಸಕರುಗಳಾದ ಸುನೀಲ ನಾಯ್ಕ ಮತ್ತು ದಿನಕರ ಶೆಟ್ಟಿ ಇವರೊಂದಿಗೆ ಮಾತುಕತೆ ನಡೆಸಿದ ಹೆಗ್ಗಡೆಯವರು ಸರ್ಕಾರದಿಂದ ಸ್ಥಳಕೊಡಿಸಿ, ನಾಡಿನ ಪ್ರಸಿದ್ಧ ಕಲಾವಿದರಿಂದ ರಾಣಿಚೆನ್ನಭೈರಾದೇವಿಯ ತಾಮ್ರದ ಮೂರ್ತಿ ಮಾಡಿಸಿಕೊಡುತ್ತೇನೆ. ಮೂರ್ತಿಯ ಸುತ್ತಲೂ ರಾಣಿಯ ಸಾಹಸದ ಕಥೆಗಳನ್ನು ವರ್ಣಿಸುವಂತಹ ಮೂರ್ತಿಗಳಿರಲಿ ಎಂದರು. ಹೊನ್ನಾವರಕ್ಕೆ ಪ್ರವಾಸೊದ್ಯಮದ ಜೊತೆಗೆ ಪುರಾತನ ಸ್ಥಳದ ಮಾಹಿತಿ ಮುಂದಿನ ತಲೆಮಾರಿಗೆ ಪರಿಚಯಿಸಲು ಈ ಕಾರ್ಯಕ್ಕೆ ಮುಂದಾಗಿರುದಾಗಿ ಕಾರ್ಯನಿರ್ವಹಿಸಿದರು. ಸಂಪೂರ್ಣ ಮನಸ್ಸಿನಿಂದ ಈ ಯೋಜನೆಯನ್ನು ಸ್ವಾಗತಿಸುತ್ತೇವೆ, ಸಹಕಾರ ನೀಡುತ್ತೇವೆ ಎಂದು ಇಬ್ಬರೂ ಶಾಸಕರು ಭರವಸೆ ನೀಡಿದರು. ಹಿರಿಯ ಉದ್ಯಮಿ ಮುರಳೀಧರ ಪ್ರಭುಕುಮಟಾ, ಹಾಗೂ ಪತ್ರಕರ್ತ ಜಿ.ಯು. ಭಟ್, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಗೌಡ, ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ನನ್ನನ್ನು ಈ ಕೃತಿ ತುಂಬ ಸೆಳೆದ ಕಾರಣ ಕಾದಂಬರಿಕಾರ ಗಜಾನನ ಶರ್ಮ ಮತ್ತು ಪ್ರಸಿದ್ಧ ಲೇಖಕ, ಇತಿಹಾಸಜ್ಞ, ಹಂಪ ನಾಗರಾಜಯ್ಯ ಇವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಹೆಗ್ಗಡೆಯವರು ರಾಣಿ ಚೆನ್ನಭೈರಾದೇವಿ ಗೇರುಸೊಪ್ಪವನ್ನು ರಾಜಧಾನಿಯನ್ನಾಗಿಟ್ಟುಕೊಂಡು ಕಾಳುಮೆಣಸಿನ ಮತ್ತು ವಾಣಿಜ್ಯೋತ್ಪನ್ನವನ್ನು ವ್ಯವಹಾರ ನಡೆಸುತ್ತ ಬ್ರಿಟೀಷ್ ಮತ್ತು ಪೋರ್ಚುಗಲ್ ಸೈನ್ಯದೊಂದಿಗೆ ಯುದ್ಧ ಮಾಡಿದ ಖ್ಯಾತಿವಂತಳಾದ್ದರಿAದ ಅವಳ ಅರ್ಹತೆಗೆ ತಕ್ಕುದಾದ ಸ್ಮಾರಕ ನಿರ್ಮಾಣವಾಗಬೇಕು ಎಂದು ಹೇಳಿದ ಹೆಗ್ಗಡೆಯವರು ಮುಂದುವರಿಯಿರಿ, ನಾವಿದ್ದೇವೆ ಅಂದರು. ಮುರುಳೀಧರ ಪ್ರಭು ಅವರು ಜೊತೆಯಲ್ಲಿ ರಾಣಿಯ ಹೆಸರಿನಲ್ಲಿ ಮಹಿಳೆಯರಿಗಾಗಿ ಒಂದು ಶಿಕ್ಷಣ ಸಂಸ್ಥೆಯನ್ನು ಮಾಡಿಕೊಡಿ, ನವೆಂಬರ್ ಒಳಗಾಗಿ ಅರಣ್ಯ ಇಲಾಖೆ ಸ್ಥಳಾವಕಾಶ ನೀಡಿದರೆ ಅದೇ ಸಮಯದಲ್ಲಿ ಒಂದು ವಿಚಾರಸಂಕಿರಣ ನಡೆಸಿ, ಇತಿಹಾಸಜ್ಞರನ್ನು ಕರೆಸಿ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದರು. ಆಗ ಹೆಗ್ಗಡೆಯವರು ಥೀಮ್ ಪಾರ್ಕ್, ಮೂರ್ತಿ ಹೇಗಿರಬೇಕು ಎಂಬ ಕುರಿತು ಚಿತ್ರ ಸ್ಪರ್ಧೆ ನಡೆಸೋಣ, ಈಗಾಗಲೇ ಕೆಲವು ಶಿಲ್ಪಿಗಳೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ವಿಚಾರಸಂಕಿರಣವನ್ನು ಉದ್ಘಾಟಿಸಲು ಬರುವುದಾಗಿ ಹೆಗ್ಗಡೆಯವರು ಒಪ್ಪಿಗೆ ಸೂಚಿಸಿದರು.

error: