March 22, 2024

Bhavana Tv

Its Your Channel

ಹನಿ ನೀರಾವರಿ ಯೋಜನೆಯ ಲಕ್ಷಾಂತರ ಮೌಲ್ಯದ ಪೈಪ್ ಮೋಟಾರ್ ಕಳ್ಳತನ ಪ್ರಕರಣ ಭೇದಿಸಿದ ಪೋಲಿಸರು. ನಾಲ್ವರು ಆರೋಪಿಗಳ ಬಂಧನ

ಮಳವಳ್ಳಿ : ಹನಿ ನೀರಾವರಿ ಯೋಜನೆ ಕಾಮಗಾರಿಗೆ ಬಳಸಲೆಂದು ಇರಿಸಲಾಗಿದ್ದ ಲಕ್ಷಾಂತರ ರೂ ಮೌಲ್ಯದ ಪೈಪ್ ಗಳು, ಮೋಟಾರ್ ಗಳು ಹಾಗೂ ಇನ್ನಿತರ ಸಲಕರಣೆಗಳನ್ನು ಕಳುವು ಮಾಡಿಕೊಂಡು ಪರಾರಿ ಯಾಗಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಬೆಳಕವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಬಿ ಜಿ ಪುರ ಹೋಬಳಿಗೆ ಸೇರಿದ ೩೦ ಸಾವಿರ ಎಕರೆಗೆ ನೀರುಣಿಸುವ ಪೂರಿಗಾಲಿ ಏತ ಹನಿ ನೀರಾವರಿ ಯೋಜನೆಯ ಕಾಮಗಾರಿಯನ್ನು ಜೈನ ಇರಿಗೇಷನ್ ಸಿಸ್ಟಮ್ ಲಿಮಿಟೆಡ್ ಕಂಪನಿ ಕೈಗೆತ್ತಿಕೊಂಡಿದ್ದು ರೈತರ ಜಮೀನಿಗೆ ಅಳವಡಿಸಲೆಂದು ಐನೋರಹುಂಡಿ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಹನಿ ನೀರಾವರಿಗೆ ಅಳವಡಿಸುವ ಅಪಾರ ಪ್ರಮಾಣದ ಪೈಪ್ ಗಳು, ಹೆಚ್ ಡಿ ಪಿ ಇ ಮೋಟಾರ್, ವಿದ್ಯುತ್ ಉಪಕರಣಗಳು ಸೇರಿದಂತೆ ಇನ್ನಿತರ ಸಲಕರಣೆಗಳು ಕಳುವಾಗಿದ್ದು ಇವುಗಳ ಮೌಲ್ಯ ಸುಮಾರು ೮.೯೮.೮೯೦ ರೂಗಳೆಂದು ಕಂಪನಿಯ ಮ್ಯಾನೇಜರ್ ಗುರುದತ್ ಅವರು ಕಳೆದ ೩೦ ರಂದು ಬೆಳಕವಾಡಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ಪ್ರಕರಣದ ಪತ್ತೆಗಾಗಿ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಧನರಾಜ್, ಬೆಳಕವಾಡಿ ಪಿಎಸ್ ಐ ಮಹೇಶ್ ,ಎ ಎಸ್ ಐ ರಾಜು, ಹೆಚ್ ಸಿ ನಾಗೇಂದ್ರ, ನಿಂಗರಾಜು, ಆಜಂಪಾಷಾ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು,
ಈ ಬಗ್ಗೆ ತನಿಖೆ ಕೈಗೊಂಡ ಸಿಪಿಐ ಧನರಾಜ್ ನೇತೃತ್ವದ ಪೊಲೀಸ್ ತಂಡ ಕೋಲಾರ ಮೂಲದ ರಘುರಾಮ್, ಆನಂದ್, ಮಳವಳ್ಳಿ ತಾಲ್ಲೂಕು ಬಳ್ಳಗೆರೆ ಗ್ರಾಮದ ಕೀರ್ತಿರಾಜ್, ಹಾಲುಗಟ್ಟಿಕೊಪ್ಪಲು ಗ್ರಾಮದ ಚೇತನ್ ಕುಮಾರ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ಇವರು ಕಳುವು ಮಾಡಿದ್ದ ಪೈಪ್ ಗಳು, ವಿದ್ಯುತ್ ಉಪಕರಣಗಳು ಸೇರಿದಂತೆ ಇನ್ನಿತರ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: