April 25, 2024

Bhavana Tv

Its Your Channel

ಯಲ್ಲಾಪುರದ ತಹಶೀಲ್ದಾರ ಕಛೇರಿಯಲ್ಲಿ ಕಾರ್ಮಿಕ ಸಚಿವರಿಂದ ಮಾಜಿ ಪ್ರಧಾನಿಗಳ ಜಯಂತೋತ್ಸವ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಕಾರ್ಮಿಕ ಇಲಾಖೆಯ ಸಚಿವರು, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಯಲ್ಲಾಪುರದ ತಹಶೀಲ್ದಾರರ ಕಚೇರಿಯಲ್ಲಿ ನಡೆದ ಮಹಾತ್ಮಾ ಗಾಂಧಿಜಿ ಹಾಗೂ ಲಾಲಬಹದ್ದೂರ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಅಹಿಂಸೆಯ ಅಸ್ತೃ ಹಿಡಿದು ರಾಷ್ಟ್ರವನ್ನು ಸ್ವಾತಂತ್ರ‍್ಯ ಗೋಳಿಸುವ ಹೋರಾಟದಲ್ಲಿ ಭಾಗವಹಿಸಿ ಎಲ್ಲರಿಗೂ ಪ್ರೇರಣೆಯಾಗಿ ಭಾರತಕ್ಕೆ ಸ್ವಾತಂತ್ರ‍್ಯ ದೊರಕಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದ ಧೀಮಂತ ನಾಯಕನಾಗಿ ಮಹಾತ್ಮಾ ಗಾಂಧಿಯವರು ದೇಶದಲ್ಲಿ ಇಂದಿಗೂ ಎಲ್ಲರಿಂದಲೂ ಗೌರವಿಸಲ್ಪಡುತ್ತಾರೆ. ಅದರಂತೆ ಭಾರತ ದೇಶದ ಪ್ರಧಾನಿ ಯಾದರೂ ಸರಳತೆಯನ್ನು ಬಿಡದ ವ್ಯಕ್ತಿತ್ವ ರಾಷ್ಟ್ರಭಕ್ತಿ, ಹಾಗೂ ಪ್ರಾಮಾಣಿಕತೆಯನ್ನು ಜೀವಾಳವಾಗಿಸಿಕೊಂಡು ಬದುಕಿದ ಲಾಲ ಬಹದ್ದೂರ ಶಾಸ್ತ್ರಿಯವರ ಅನುಕರಣೆ ಜಗತ್ತಿಗೆ ಆದರ್ಶ ಪ್ರಾಯವಾಗಿದೆ ಹಾಗೂ ಅನುಕರಣಿಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ಹಾಗೂ ಚೆಕ್ಕನ್ನು ವಿತರಿಸಿದರು, ಕೆಲ ತಿಂಗಳ ಹಿಂದೆ ಇಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೆಲಸ ಮಾಡುವಾಗ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮೃತಪಟ್ಟ ಹೊಸಳ್ಳಿ ನಿವಾಸಿಗಳಾದ ಗಂಗು ದೊಂಡು ಧೋಯಿಪಡೆ, ಗಂಗು ಚೀಚ್ಚು ಎಡೆಗೆ, ಚಿವಂಣಿ ದಾಕ್ಲು ಧೋಯಿಪಡೆ, ಸೋನು ಜನ್ನು ಧೋಯಿಪಡೆಯವರ ಸಂಬAಧಿಕರಿಗೆ ತಲಾ ೨.೦ ಲಕ್ಷ ರೂಪಾಯಿಗಳ ಪರಿಹಾರಧನದ ಚೆಕ್ಕನ್ನು ವಿತರಿಸಿದರು. (ಈ ಮೊದಲು ಅವರಿಗೆ ಕಾರ್ಮಿಕ ಇಲಾಖೆಯಿಂದ ತಲಾ ಮೂರು ಲಕ್ಷ ರೂ ನೀಡಲಾಗಿತ್ತು.) ಮಳೆಯಿಂದಾಗಿ ಮನೆ ಕಳೆದುಕೊಂಡ ಸುಶಿಲಾ ದೇವಾಡಿಗ ೯೫೧೦೦/-, ಪಾಂಡುರAಗ ಮರಾಠಿ ೯೫೧೦೦/- ,ಶಾಂತಾ ಸಂಘಣ್ಣನವರ ೯೫೧೦೦/-ರೂಪಾಯಿಗಳನ್ನು ಸಂತ್ರಸ್ತರುಗಳಿಗೆ ಪರಿಹಾರಧನದ ಚೆಕ್ಕನ್ನು ವಿತರಿಸಿದರು. ಹಿರಿಯ ನಾಗರಿಕರ ಇಲಾಖೆ ಕಾರವಾರ ರವರಿಂದ ಮಂಜೂರಾದ ದೆಹಳ್ಳಿಯ ಅನಂತ ಭಟ್ಟ, ಮದನೂರಿನ ಜನ್ನಿಬಾಯಿ ವರಕ, ಹಾಸಣಗಿಯ ಭೈರವ ಗೌಳಿ, ವಿಠ್ಠಲ ದೊಯಿಪಡೆ,ಚಂದಗುಳಿಯ ಎಮ್.ಸಣ್ಣಸುಂಕಮ್ಮಾ,ನAದೊಳ್ಳಿಯ ಮಂಗಲಾ ಗಾನಿಗಾ, ಗಣಪತಿಗಲ್ಲಿಯ ಮನೋಜಕುಮಾರ ದೇಸಾಯಿ,ವಜ್ರಳ್ಳಿಯ ವಿರೇಂದ್ರ ಹೆಗಡೆ ,ಒಟ್ಟು ೮ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿದರು.ನಾಲ್ಕು ಜನರಿಗೆ ವಿಧವಾ ವೇತನ,ಮೂರು ಜನರಿಗೆ ವ್ರದ್ಯಾಪ್ಯ ವೇತನ, ಒಬ್ಬರಿಗೆ ಅಂಗವಿಕಲ ವೇತನ,ಒಬ್ಬರಿಗೆ ಸಂಧ್ಯಾ ಸುರಕ್ಷಾ ವೇತನದ ಚೆಕ್‌ನ್ನು ನೀಡಲಾಯಿತು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ, ಉಪಾಧ್ಯಕ್ಷರಾದ ಶ್ಯಾಮಿಲಿ ಪಾಟಣಕರ, ತಹಶೀಲ್ದಾರ ಶ್ರೀ ಕೃಷ್ಣ ಕಾಮ್ಕರ ವೇದಿಕೆ ಯಲ್ಲಿದ್ದರು. ಶ್ರೀಧರ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.

error: