April 20, 2024

Bhavana Tv

Its Your Channel

ಕಾರ್ಕಳ ಉತ್ಸವ ಹೊಸ ಭಾಷೆ ಬರೆಯಲಿದೆ- ಜೈನ ಮಠದ ಮಹಾಸ್ವಾಮೀಜಿ

ಕಾರ್ಕಳ; ನಮ್ಮ ಸಂಸ್ಕೃತಿ ಕಲೆ ಶಿಲ್ಪಕಲೆ ವೈಭವವನ್ನು ಮತ್ತೆ ಸಾರುವ ನಿಟ್ಟಿನಲ್ಲಿ ಕಾರ್ಕಳ ಉತ್ಸವ ಹೊಸ ಭಾಷೆ ಬರೆಯಲಿದೆ ಎಂದು ಕಾರ್ಕಳ ಜೈನ ಮಠದ
ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.

ಅವರು ಇಂದು ಕಾರ್ಕಳ ಸ್ವರಾಜ್ ಮೈದಾನದಲ್ಲಿ ಚಪ್ಪರ ನೆರವೇರಿಸಿದ ಬಳಿಕ ಆಶೀರ್ವಚನ ನೀಡಿದರು. ಹೊಸ ಪರಿಕಲ್ಪನೆ ಸಹಕಾರದೊಂದಿಗೆ ಕಾರ್ಕಳ ಉತ್ಸವ ನಡೆಯುತ್ತಿದ್ದು ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು. ಬೈಲೂರು ರಾಮಕೃಷ್ಣ ಆಶ್ರಮದ ಸ್ವಾಮಿ ವಿನಾಯಕ ನಂದ ಮಹಾರಾಜ ಮಾತನಾಡಿ ಸಂಸ್ಕೃತಿ ಆದ್ಯತೆ ಕಲೆಯ ಮೂಲ ಆಧುನಿಕತೆ ಅನ್ವೇಷಣೆ ಹೆಸರಿನಲ್ಲಿ ನಮ್ಮ ಸಂಸ್ಕೃತಿ ಕಲೆ ಅವನತಿಯತ್ತ ಸಗಾ ಬಾರದು. ಇಂಥ ಸನ್ನಿವೇಶದಲ್ಲಿ ಕಾರ್ಕಳ ಉತ್ಸವ ನಡೆಯುತ್ತಿರುವುದುಅತ್ಯಂತ ಅರ್ಥಪೂರ್ಣ ಎಂದು ಹೇಳಿದರು. ಕಾರ್ಕಳದ ಕಲೆ ಸಂಸ್ಕೃತಿಯನ್ನು ಉಳಿದ ಜಿಲ್ಲೆಗಳಿಗೆ ತಿಳಿಸಿಕೊಡುವ ಪ್ರಯತ್ನ ದೊಂದಿಗೆ ಸಾಹಿತ್ಯ-ಸಂಸ್ಕೃತಿ ಮೂಡಿಬರಲಿ ಎಂದು ಸಚಿವ ಸುನಿಲ್ ಕುಮಾರ್ ಆಶಯ ವ್ಯಕ್ತಪಡಿಸಿದರು ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷರಾದ ಸುಮ ಕೇಶವ್ ಉಪಸ್ಥಿತರಿದ್ದರು. ಜ್ಯೋತಿ ರಮೇಶ್ ಪ್ರಾರ್ಥಿಸಿ ಯೋಗೀಶ್ ಕಿಣಿ ಕಾರ್ಕಳ ಗೀತೆ ಹಾಡಿದರು. ಸುಮಿತ ಶೆಟ್ಟಿ ಬೈಲೂರು ಸ್ವಾಗತಿಸಿದರು. ರವೀಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವರದಿ: ಅರುಣ ಭಟ್ ಕಾರ್ಕಳ.

error: