December 21, 2024

Bhavana Tv

Its Your Channel

ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲು ಅಡ್ಡಿಪಡಿಸುವಂತಿಲ್ಲ. -ಜಿಲ್ಲಾ ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ್

ಹೊನ್ನಾವರ ; ಅವರು ಗುರುವಾರ ಹೊನ್ನಾವರ ಪಟ್ಟಣದ ಹವ್ಯಕ ಸಭಾಭವನದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪಾಲ್ಗೊಂಡು ಮಾತನಾಡಿದರು. ಜಿಲ್ಲೆಯನ್ನು ಕಾಡುತ್ತಿರುವ ಕೋವಿಡ್೧೯ ಕಾಯಿಲೆ, ಮಂಗನ ಕಾಯಿಲೆ ಮತ್ತು ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದರು.
ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಆದರೆ ಈ ಭಾರಿ ಈ ಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಲಾಗಿದೆ. ಎಂದು ಜಿಲ್ಲಾಧಿಕಾರಿಗಳು, ಮತ್ತು ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳೂ ಸಭೆಗೆ ಮಾಹಿತಿ ನೀಡಿದರು. ಅಲ್ಲದೆ ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಅನುಷ್ಟಾನ ಗೊಳಿಸಿದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನಿಡಿದರು.
ನಂತರ ಸಚೀವರು ಮಾತನಾಡಿ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಬರಲು ಅಧಿಕಾರಿಗಳ ಜೊತೆ ಸಾರ್ವಜನಿಕರ ಸಹಕಾರವು ಇದೆ. ದೇಶದೆಲ್ಲಡೆ ಲಾಕಡೌನಂತೆ ಜಿಲ್ಲೆಯಲ್ಲಿಯೂ ನಿಯಂತ್ರಣಕ್ಕೆ ತರಲಾಗಿದೆ.
ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪೊಲೀಸರು, ಜಿಲ್ಲಾಡಳಿತದ ಅವಿರತ ಪ್ರಯತ್ನ ಹಾಗೂ ಸಾರ್ವಜನಿಕರ ಸಹಕಾರದಿಂದ ಉತ್ತರಕನ್ನಡ ಜಿಲ್ಲೆ ಕೋವಿಡ್ ಮುಕ್ತ ಜಿಲ್ಲೆಯಾಗುವತ್ತ ಸಾಗುತ್ತಿದೆ. ಮತ್ತೆ ನಮ್ಮ ಜಿಲ್ಲೆಯಲ್ಲಿ ಎಲ್ಲಿಯೂ ಕೋವಿಡ್ ೧೯ ಸೋಂಕು ಕಾಣಿಸಿಕೊಳ್ಳಬಾರದು. ಲಾಕ್‌ಡೌನ್ ಸಡಿಲಿಸಿರುವುದು ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಪಟ್ಟಣದಲ್ಲಿ ಇನ್ನಷ್ಟು ಕಠಿಣವಾಗಿ ಲಾಕ್‌ಡೌನ್ ಜಾರಿಯಾಗಲಿದೆ ಸಾರ್ವಜನಿಕರು ಅನಾವರ್ಶಯಕವಾಗಿ ಪಟ್ಟಣದತ್ತ ಬರಬಾರದು ಎಂದು ಮನವಿ ಮಾಡಿದರು.
ಸಭೆಗಿಂತಲೂ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಾತನಾಡಿ ವ್ಯಾಪಕವಾಗಿ ಹೆಚ್ಚುತ್ತಿರುವ ಮಂಗನ ಕಾಯಿಲೆ ಮತ್ತು ಮೀನುಗಾರರ ಸಮಸ್ಯೆಗಳ ಬಗ್ಗೆ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಸರ್ಕಾರ ಭಾಗಶ: ಲಾಕ್‌ಡೌನ್ ಸಡಿಲಿಸಿ ಮೀನುಗಾರಿಕೆಗೆ ಅವಕಾಶಮಾಡಿಕೊಟ್ಟಿದೆ ಆದರೆ ಹಿಡಿದ ಮೀನನ್ನು ಮಾರುವುದಕ್ಕೆ ಲಾಕ್‌ಡೌನ್ ತೊಡಕಾಗಿ ಪರಿಣಮಿಸಿದೆ ಎಂದರು.
ಮೀನುಗಾರರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸಲಾಗುವುದು. ಕೊರೊನಾ ಹರಡದಂತೆ ದೈಹಿಕ ಅಂತರ ಕಾಯ್ದುಕೊಂಡು ಮುನ್ನೆಚ್ಚರಿಕೆವಹಿಸಿ ಜಾಗೃತೆಯಿಂದ ಮೀನುಗಳ ಮಾರಾಟಕ್ಕೂ ಅವಕಾಶ ನೀಡುತ್ತೇವೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿರುವುದು ಕಳವಳಕಾರಿಯಾದರೂ ಅದನ್ನು ನಿಯಂತ್ರಿಸುವ ಸಾಮರ್ಥ್ಯ ಜಿಲ್ಲಾಡಳಿತಕ್ಕಿದೆ. ಮಂಗನ ಕಾಯಿಲೆ ಬರದಂತೆ ನೀಡುವ ಲಸಿಕೆ ೧ ಲಕ್ಷದಷ್ಟಿದೆ. ಕೇವಲ ೨೫ ಸಾವಿರ ಮಂದಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗಿದೆ. ಜನರು ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ.ಕೆ ಹೇಳಿದರು.
ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಮಾತನಾಡಿ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಯಾದರೂ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಕಟ್ಟಡ ನಿರ್ಮಾಣ ಕೆಲಸಗಳಿಗೆ ಅನುಮತಿ ನೀಡಿದ್ದರೂ ಮರಳು ಲಭ್ಯವಾಗದೇ ಇದಾವುದನ್ನೂ ಪ್ರಾರಂಭಿಸಲ ಸಾಧ್ಯವಿಲ್ಲ. ಮೇಲಾಗಿ ಮಳೆಗಾಲ ಇನ್ನೊಂದು ತಿಂಗಳಲ್ಲಿ ಶುರುವಾಗಲಿದೆ ಆದ್ಧರಿಂದ ಜಿಲ್ಲಾಧಿಕಾರಿಗಳು ತಕ್ಷಣ ಮರಳುಗಾರಿಕೆಗೆ ಅವಕಾಶಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಮೇ ತಿಂಗಳ ೪ ನೇ ತಾರೀಕಿನ ಒಳಗೆ ಮರಳುಗಾರಿಕೆ ಆರಂಭಿಸುವAತೆ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮದ್ ರೋಶನ್, ಸಹಾಯಕ ಆಯುಕ್ತರಾದ ಭರತ ಸಲ್ವಂ ಹರೀಶ ಡಿ.ವೈ.ಎಸ್ಪಿ ಗೌತಮ್, ತಹಶೀಲ್ದಾರ ವಿವೇಕ ಶೇಣ್ವಿ ಉಪಸ್ಥಿತರಿದ್ದರು.

error: