March 29, 2024

Bhavana Tv

Its Your Channel

ಶಾಸಕರು 60 ರಷ್ಟು ಭಾಗದ ಕಾಮಗಾರಿಯು ಪೂರ್ಣಗೊಳಿಸದೆ ಜನರಿಗೆ ಕಷ್ಟ ಕೊಡುತ್ತಾ ಬಂದಿದ್ದಾರೆ – ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ

ಕುಮಟಾ :ಶಾಸಕ ದಿನಕರ ಶೆಟ್ಟಿ ಹೇಳಿದಂತೆ ಚುನಾವಣೆ ಬರುವ ವರೆಗೆ ರಸ್ತೆ ಪೂರ್ಣಗೊ ಳಿಸುವುದಿಲ್ಲ ಎಂಬ ಮಾತು ಸತ್ಯ. ಬೋಗ್ರಿಬೈಲ್ ರಸ್ತೆಯು ಸುಮಾರು 4 ವರ್ಷಗಳೂ ಕಳೆಯುತ್ತಾ ಬಂದರೂ ಸಹ ಇನ್ನು ತನಕ ರಸ್ತೆಯ 60 ರಷ್ಟು ಭಾಗದ ಕಾಮಗಾರಿಯು ಪೂರ್ಣಗೊಳಿಸದೆ ಜನರಿಗೆ ಕಷ್ಟ ಕೊಡುತ್ತಾ ಬಂದಿದ್ದಾರೆ ಎಂದು ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಹೇಳಿದರು

ಈ ಬಗ್ಗೆ ಮಾತನಾಡಿದ ಅವರು ಶಾಸಕ ದಿನಕರ ಶೆಟ್ಟಿಯವರು ಹೇಳಿದಂತೆ ಚುನಾವಣೆ ಬರುವ ವರೆಗೆ ಅವರು ಕಾಮಗಾರಿಯನ್ನು ಪೂರ್ಣಗೋಳಿಸುವುದಿಲ್ಲ. ಈ ಕಾಮಗಾರಿಯು ಕೂಡಾ ಮುಗಿಸುವ ಲಕ್ಷಣ ಕಾಣುತ್ತಿಲ್ಲ. ಶೇಕಡಾ 60ರಷ್ಟು ಕಾಮಗಾರಿಯು ಭಾಕಿ ಉಳಿದ ಹಾಗೆ ಕಾಣುತ್ತಿದೆ. ಅಷ್ಟೆ ಅಲ್ಲದೆ ಕಾಮಗಾರಿಯು ಸಮರ್ಪಕವಾಗಿಲ್ಲ. ಕಳೆದ ವರ್ಷ ಈ ರಸ್ತೆಯ ಬಗ್ಗೆ ಸಹಾಯಕ ಆಯುಕ್ತರ ಹಾಗೂ ಎ.ಡಬ್ಯೂ ಡಿಯ ಅವರ ಗಮನಕ್ಕೂ ಅಸಮರ್ಪಕ ಕಾಮಗಾರಿಯ ಬಗ್ಗೆ ತರಲಾಗಿದೆ. ಈ ಅಸಮರ್ಪಕ ಕಾಮಗಾರಿಗೆ ಕಾರಣವೇನು ಎಂದು ತನಿಖೆಗೆ ನಡೆಸುವಂತೆ ಹಾಗೂ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸಬೇಕು ಎಂದು ಎ.ಸಿ.ಬಿಗೆ ನಾವು ಮನವಿಯನ್ನು ಕೊಡುತ್ತಿದ್ದೇವೆ. ಹಾಗೂ ಎಕ್ಸಿಕ್ಯೂಟಿವ್ ಇಂಜಿನೀಯರ್ ಹಾಗೂ ಸ್ಥಳೀಯ ಇಂಜೀನಿಯರ್ ಅವರಿಗೂ ಮನವಿ ನೀಡುತ್ತಿದ್ದೇವೆ. ಮತ್ತೆ ಈ ರಸ್ತೆಗೆ ಕಡಿಮೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಕಾಮಗಾರಿಗೆ ಬಳಸಲು ತಂದರೆ ನಾವು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಬೋಗ್ರಿಬೈಲ್ ರಸ್ತೆಯು 7.1 ಕಿ.ಮೀ ರಸ್ತೆಯ ಅಭಿವೃದ್ದಿ ಎಸ್.ಎಚ್.ಡಿ.ಪಿ ಅಡಿಯಲ್ಲಿ ಸ್ಟೇಟ್ ಹೈವೆ ಡೆವಲೆಪ್ ಮೆಂಟ್ ಪ್ರಾಜೇಕ್ಟ್ ಅಡಿಯಲ್ಲಿ 7ಕೋಟಿಗೂ ಹೆಚ್ಚು ಕಾಮಗಾರಿಗೆ ಟೆಂಡರ್ ಕರೆದು 2018 -19 ನೇ ಸಾಲಿನಲ್ಲಿ ಆರಂಭಗೊAಡಿದೆ.
ಕಾಮಗಾರಿಯು ಪ್ರಾರಂಭವಾಗಿ ಇರುವುದರಿಂದ ಸಾರ್ವಜನಿಕರಿಗೆ ದಿನನಿತ್ಯ ಸಂಚರಿಸಲು ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು ರಸ್ತೆಯ ಕಾಮಗಾರಿಯು ಅಸಮರ್ಪಕ ಕಾಮಗಾರಿಯಾಗಿದ್ದು ಕಾಮಗಾರಿಗೆ ಬಳಸುವ ಕಚ್ಚಾ ವಸ್ತುಗಳು ಸಹ ಕಡಿಮೆ ಗುಣಮಟ್ಟದಿಂದ ಕೂಡಿದೆ ಎಂದು ಆಗ್ರಹಿಸಿ ಮೂರುರೂ ಕಲ್ಲಬ್ಬೆ ಭಾಗದ ಗ್ರಾಮಸ್ಥರು ಎಕ್ಸಿಕ್ಯೂಟಿವ್ ಇಂಜಿನೀಯರ್ ಹಾಗೂ ಸ್ಥಳೀಯ ಇಂಜೀನಿಯರ್ ಮೂಲಕ ಹಾಗೂ ಕಳಪೆ ಕಾಮಗಾರಿಗೆ ಬಗ್ಗೆ ತನಿಖೆಗೆ ನಡೆಸುವಂತೆ ಹಾಗೂ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸಬೇಕು ಎಂದು ಎ.ಸಿ.ಬಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭಧಲ್ಲಿ ಮೂರೂರು ಗ್ರಾ.ಪಂ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ, ಶಿವರಾಂ ಮಡಿವಾಳ, ಜೆಡಿಎಸ್ ತಾಲೂಕಾಧ್ಯಕ್ಷರಾದ ಸಿ.ಜಿ.ಹೆಗಡೆ, ಗ್ರಾಮಸ್ಥರಾದ ಟಿ.ಟಿ.ಹೆಗಡೆ ಹಾಗೂ ಕಲ್ಲಬ್ಬೆ ಹಾಗೂ ಮೂರುರು ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.

error: