April 26, 2024

Bhavana Tv

Its Your Channel

ಅಗ್ನಿಪಥ ಯೋಜನೆ ವಿರೋಧಿಸಿ ಭಟ್ಕಳ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಧರಣಿ ಸತ್ಯಾಗ್ರಹ

ಭಟ್ಕಳ:-ಸೈನ್ಯದ ವಿಷಯದಲ್ಲಿ ಹಲವೊಂದಿಷ್ಟು ಗೌಪ್ಯತೆಯನ್ನು ಕಾಪಾಡುವ ಅವಶ್ಯಕತೆ ಇದ್ದು ಅಗ್ನಿಪಥ ಯೋಜನೆಯಿಂದ ಇದನ್ನೆಲ್ಲಾ ಬಿಜೆಪಿ ಸರ್ಕಾರ ಹಾಳುಗೆಡವಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಭದ್ರತೆಯ ವಿಷಯದಲ್ಲಿ ನಮ್ಮ ರಾಷ್ಟç ಬಾರಿ ಬೆಲೆ ತೆರಬೇಕಾದಿತು ಎಂದು ಕೆಪಿಸಿಸಿ ಮುಖಂಡ ಐವನ್ ಡಿಸೋಜಾ ಹೇಳಿದರು.
ಅವರು ಸೋಮವಾರ ಭಟ್ಕಳ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಅಗ್ನಿಪಥ ಯೋಜನೆ ವಿರೋಧಿಸಿ ಹಮ್ಮಿಕೊಂಡ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಸೈನ್ಯವನ್ನು ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ.ಬಿಜೆಪಿ ಸರ್ಕಾರ ಸೈನ್ಯವನ್ನು ರಾಜಕೀಯಕರಣ ಗೊಳಿಸುತ್ತಿದೆ. ದೇಶದಲ್ಲಿ 34ಲಕ್ಷ ಉದ್ಯೋಗಗಳು ಖಾಲಿಯಿದ್ದು ಅದನ್ನು ಭರ್ತಿ ಮಾಡುವದನ್ನು ರಾಷ್ಟçಕ್ಕೆ ಮಾರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರಾಷ್ಟçದಲ್ಲಿ ಅರಾಜಕತೆ ಸೃಷ್ಟಿಸುವ ಇಂತಹ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತಿದೆ.

ಮಾಜಿ ಸಚಿವ ಆರ್ ಎನ್ ನಾಯ್ಕ ಮಾತನಾಡಿ 5000ವರ್ಷದ ಹಿಂದೆ ಎನು ನಡೆಯುತ್ತಿತ್ತೊ ಅದನ್ನು ಪುನರಾವರ್ತಿಸಲು ಬಿಜೆಪಿ ಮುಂದಾಗುತ್ತಿದೆ. ಪ್ರಧಾನಿ ಮೋದಿ ಮನುವಿನಂತೆ ವರ್ತಿಸುತ್ತಿದ್ದಾರೆ. ಹಿಡನ್ ಅಜೆಂಡಾ ಮೂಲಕ ರಾಷ್ಟçವನ್ನು ಬಲಿಪಶು ಮಾಡಲು ಯೋಚಿಸುತ್ತಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಯುವಕರನ್ನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ ಲಕ್ಷಾಂತರ ಯುವಕರನ್ನು ಬೀದಿಗೆ ತಳ್ಳುವ ಈ ಯೋಜನೆಯನ್ನು ಯುವಕರೆ ವಿರೋಧಿಸುತ್ತಿದ್ದಾರೆ. ಭಾರತದ ಯುವಕರಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲವಿದ್ದು ಅವರ ಹೋರಾಟಕ್ಕೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ ಮಜೀದ, ಮಂಕಿ ಬ್ಲಾಕ ಅಧ್ಯಕ್ಷ ಗೋವಿಂದ ನಾಯ್ಕ, ಭಟ್ಕಳ ಬ್ಲಾಕ ಅಧ್ಯಕ್ಷ ಸಂತೋಷ ನಾಯ್ಕ, ಅಬ್ಬಾಸ್ ತೋನ್ಸೆ ಮಾತನಾಡಿದರು. ಮಾಜಿ ಶಾಸಕ ಮಂಕಾಳ ವೈದ್ಯ, ಜಿ.ಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾ.ಪಂ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ ಸೇರಿ ಇತರರು ಇದ್ದರು.

error: