April 20, 2024

Bhavana Tv

Its Your Channel

ಭಟ್ಕಳದ ಪುರಸಭೆಯ ಉರ್ದು ನಾಮಫಲಕವು ಜಿಲ್ಲಾಧಿಕಾರಿ ಆದೇಶದಂತೆ ತೆರವು.

ಭಟ್ಕಳ: ಕಳೆದ ಸೋಮವಾರ ಪುರಸಭಾ ನಾಮ ಫಲಕವನ್ನು ಕನ್ನಡ, ಇಂಗ್ಲೀಷ್ ಜೊತೆಗೆ ಉರ್ದು ಭಾಷೆಯಲ್ಲಿ ಬರೆದಿರುವುದನ್ನು ಕನ್ನಡ ಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದರಿಂದ ಗುರುವಾರ ಸ್ವತಃ ಜಿಲ್ಲಾಧಿಕಾರಿಗಳು ಭಟ್ಕಳಕ್ಕೆ ಬಂದು ಭಾರೀ ಪೊಲೀಸ್‌ಬಂದೋಬಸ್ತೊನೊAದಿಗೆ ಉರ್ದು ಭಾಷೆಯ ಅಕ್ಷರಗಳನ್ನು ತೆಗೆಯಿಸಿ ಹಾಕಿದ ಘಟನೆ ನಡೆಯಿತು.

ಇದರಿಂದ ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ಗುರುವಾರ ಬೆಳಿಗ್ಗೆ ಭಟ್ಕಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಪುರಸಭೆಯ ಅಧ್ಯಕ್ಷರು, ಸದಸ್ಯರು ಹಾಗೂ ತಂಝೀA ಮುಖಂಡರೊAದಿಗೆ ಪ್ರತ್ಯೇಕ ಸಭೆ ನಡೆಸಿದ್ದರು.

ಸಭೆಯಲ್ಲಿ ಮುಖಂಡರಿಗೆ ಸರಕಾರದ ನಿಯಮದಂತೆ ಸರಕಾರಿ ಕಚೇರಿಗಳಲ್ಲಿ ಕನ್ನಡ, ಇಂಗ್ಲೀಷ್ ಭಾಷೆಯ ಅಕ್ಷರಗಳನ್ನು ಬಿಟ್ಟು ಬೇರೆ ಯಾವುದೇ ಭಾಷೆಯ ಅಕ್ಷರಗಳನ್ನು ಬರೆಯಿಸಲು ಅವಕಾಶವಿಲ್ಲ ಎಂದು ಮನದಟ್ಟು ಮಾಡಿದ್ದಲ್ಲದೇ ಪುರಸಭೆಯ ನಾಮಫಲಕದಲ್ಲಿ ಬರೆಯಿಸಲಾದ ಉರ್ದು ಅಕ್ಷರವನ್ನು ತೆರವುಗೊಳಿಸಲೇಬೇಕೆಂದು ಕಟ್ಟಪ್ಪಣೆ ಮಾಡಿದ್ದರು. ಅಲ್ಲದೇ ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಎಂ.ಕೆ. ಸುರೇಶ ಅವರಿಗೆ ಪುರಸಭಾ ಕಟ್ಟದಲ್ಲಿ ಅಳವಡಿಸಲಾದ ಉರ್ದು ಅಕ್ಷರಗಳನ್ನು ತೆಗೆಯಿಸುವಂತೆ ಆದೇಶ ನೀಡಿದ್ದರು. ಜಿಲ್ಲಾಧಿಕಾರಿಯವರ ಆದೇಶದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಸುರೇಶ ಅವರು ಅಗ್ನಿಶಾಮಕ ಸಿಬ್ಬಂದಿಗಳ ಸಹಾಯ ಪಡೆದು ನಾಮಫಲಕದಲ್ಲಿದ್ದ ಉರ್ದು ಅಕ್ಷರ ತೆರವುಗೊಳಿಸಿದರು.

ಕಾನೂನಿಗೆ ಗೌರವ ಕೊಡುವದು ನಮ್ಮೆಲ್ಲರ ಕರ್ತವ್ಯ. ಸದ್ಯ ಕನ್ನಡ ಮತ್ತು ಇಂಗ್ಲೀಷ ಭಾಷೆ ಬಿಟ್ಟರೆ ಬೇರೆ ಭಾಷೆ ಅಳವಡಿಕೆಗೆ ಅವಕಾಶ ಇಲ್ಲ. ಕಾನೂನಿನ ಪ್ರಕಾರ ಸರ್ಕಾರದ ಅನುಮತಿ ಪಡೆದು ಉರ್ದು ಅಳವಡಿಕೆ ಮಾಡಿಕೋಳ್ಳಿ ಎಂದು ಜಿಲ್ಲಾಧಿಕಾರಿಗಳು ಸಊಚಿಸಿದ್ದಾರೆ. ನಮ್ಮ ಸಾಮಾನ್ಯ ಸಭೆಯಲ್ಲಿ ಇತರ ಸದಸ್ಯರೊಂದಿಗೆ ಈ ಕುರಿತು ಚರ್ಚೆ ನಡೆಸಲಾಗುವದು ಜಿಲ್ಲಾಧಿಕಾರಿಯವರ ಆದೇಶಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಫರ್ವೇಜ್ ಕಾಶಿಂಜಿ, ಪುರಸಭೆ ಅಧ್ಯಕ್ಷ ಹೇಳಿದರು.
ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದ್ದು, ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ, ನಗರ ಠಾಣೆಯ ಸಿಪಿಐ ದಿವಾಕರ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪುರಸಭೆಯ ಸುತ್ತಲೂ ಪಹರೆ ನಿರ್ಮಿಸಿದ್ದರು. ಆದರೂ ಮತ್ತೊಂದು ಕಡೆ ಈ ವಿವಾದ ಇಲ್ಲಿ ಬೂದಿಮುಚ್ಚಿದ ಕೆಂಡದತೆ ಕಾಣಿಸುತ್ತಿದೆ. ಹೀಗಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.

error: