April 25, 2024

Bhavana Tv

Its Your Channel

ಅಘನಾಶನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ. ಸಂಬoಧ ಪಟ್ಟ ಅಧಿಕಾರಿಗಳೇ ಸಾಮೀಲಾಗಿರುವ ಶಂಕೆ.

ಕುಮಟಾ ತಾಲ್ಲೂಕಿನ ಬಡಾಳ ಸಂತೆಗುಳಿ ಗ್ರಾಮದಲ್ಲಿ ಹರಿಯುತ್ತಿರುವ ಅಘನಾಶನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ. ಸಂಬoಧ ಪಟ್ಟ ಅಧಿಕಾರಿಗಳೇ ಸಾಮೀಲಾಗಿರುವ ಶಂಕೆ.

ಅಘನಾಶಿನಿ ನದಿಗೆ ಹೊಂದಿಕೊoಡಿರುವ ಗ್ರಾಮವಾದ ಬಡಾಳ ಸಂತೆಗುಳಿ ದಿವಳ್ಳಿ ,ಮೊರ್ಸೆ,ಪಾದ್ರಿಬೇಣಾ ಮುಂತಾದ ಅನೇಕ ಸ್ಥಳ ಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗತ್ತಿದ್ದು, ಪ್ರತಿ ನಿತ್ಯ ನೂರಾರು ಟಿಪ್ಪರ್‌ಗಳು ಮೂಲಕ ಕುಮಟಾ ಹೊನ್ನಾವರ ಸಿದ್ದಾಪುರ ತಾಲೂಕು ಗಳಿಗೆ ಅಕ್ರಮ ಮರಳು ಸಾಗಣೆ ಮಾಡಲಾಗುತ್ತಿದೆ. ನದಿ ದಂಡೆಗೆ ಹೊಂದಿಕೊoಡoತೆ ಅರಣ್ಯ ಪ್ರದೇಶದ ಜಾಗದಲ್ಲಿ ಜೆಸಿಬಿ ಬಳಸಿ ರಸ್ತೆಯನ್ನು ನಿರ್ಮಿಸಿಕೊಂಡು ಮರಳು ಸಾಗಿಸಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಸ್ಥಳೀಯ ಪಂಚಾಯಿತಿಯಿoದ ಮರಳು ಸಾಗಾಟಕ್ಕೆಯಾವುದೇ ಪರವಾನಿಗೆ ಇಲ್ಲದೇ ಇದ್ದರೂ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿತ್ಯ ಮರಳು ಗಣಿಗಾರಿಕೆ ಪರಿಣಾಮ ಅಘನಾಶನಿ ನದಿಯಲ್ಲಿ ಅಲ್ಲಲ್ಲಿ ಅಪಾಯಕಾರಿ ಹೊಂಡ ನಿರ್ಮಾಣ ಆಗಿವೆ. ಈಗಾಗಲೇ ನದಿಯ ಹೊಂಡದಲ್ಲಿ ಮುಳುಗಿ ಹಲವರು ಮೃತಪಟ್ಟಿದ್ದೂ ಇದೆ.ಈ ಅರಣ್ಯದಲ್ಲಿ ಬೆಲೆಬಾಳುವ ಸಾಗವಾನಿ ಮತ್ತಿ,ಬೀಟೆ, ಬರಣಿಗೆ ,ಮುಂತಾದ ಬೆಲೆಬಾಳುವಮರಗಳು ರಾತ್ರೋರಾತ್ರಿ ನಾಪತ್ತೆ ಯಾಗುತ್ತಿದೆ ಕೆಲವು ದಿನಗಳ ಹಿಂದೇಯಸ್ಟೆ ಸಾಗವಾನಿ ಮರಗಳ ಮಾರಣಹೋಮಗಳ ಘಟನೆ ಮರುಕಳಿಸುವ ಮುನ್ನ ವೇ ಮರಳು ಗಣಿಗಾರಿಕೆ ರಾತ್ರಿ ವೇಳೆ ಗೆ ನಡೆಯುತ್ತಿರುವುದನ್ನ ಗಮನಿಸಿದರೆ ಅನುಮಾನಕ್ಕೆ ಕಾರಣವಾಗಿದೆ ಅದರೆ ಗ್ರಾಮೀಣ ಭಾಗದ ಜನರಿಗೆಮನೆ ಹಾಗೂ ಶೌಚಾಲಯ ನಿರ್ಮಾಕ್ಕೆ ಅತಿ ದುಬಾರಿ ಹಣವನ್ನು ನೀಡಿ ಮರಳು ಪಡೆಯುವಂತಾಗಿದೆ ಸರಿ ಸುಮಾರು ಒಂದು ಮಿನಿ ಗೂಡ್ಸ ವಾಹನಕ್ಕೆ ಐದು ಸಾವಿರ ದಿಂದ ಹತ್ತು ಸಾವಿರ ರೂಪಾಯಿಗಳನ್ನು ವಸೂಲಿ ಮಾಡಿ ಜನರಿಂದ ಬಾರಿ ಹಣವನ್ನೂ ದೋಚಲಾಗುತ್ತಿದೆ,

ಇಲ್ಲಿ ನಿತ್ಯ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ,ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ತಕ್ಷಣ ಅಕ್ರಮ ನಡೆಸುತ್ತಿದ್ದವರಿಗೆ ಕರೆಮಾಡಿ ನಾವು ದಾಳಿಮಾಡುತ್ತೆವೆ ಎನ್ನುವ ವಿಚಾರ ತಿಳಿಸಿ ಕಾಟಚಾರಕ್ಕೆ ಕಾರ್ಯಚರಣೆ ನಡೆಸಲಾಗುತ್ತಿದೆ ಸಂಬAದ ಪಟ್ಟ ಯಾವುದೇ ಇಲಾಖೆಯ ಅದಿಕಾರಿಗಳು ತಡೆಯುವ ಪ್ರಯತ್ನ ಮಾಡುತ್ತಿಲ್ಲ. ನದಿಯಲ್ಲಿ ಹೊಂಡಗಳು ನಿರ್ಮಾಣಗೊಂಡಿದ್ದು, ನದಿಯ ದಂಡೆಗೆ ಹೊಂದಿರುವ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂದರ್ಭದಲ್ಲಿ ಬೆಂಕಿ ಹಚ್ಚಿ ಮೊಜು ಮಸ್ತಿ ಪಾರ್ಟಿ ಗಳು ನಡೆಯುತ್ತದೆ ಸಂತೆಗುಳಿ ಹಾಗೂ ಕಲವೆ ಸಂಪರ್ಕ ಸೇತುವೆಯ( ದೋಣಿ ಹೊಳೆ ಸೇತುವೆ) ಕೆಳಭಾಗದಲ್ಲಿಯೂ ಕೂಡ ಅಕ್ರಮಮರಳು ಗಾರಿಕೆ ನಡೆಸುತ್ತಿರುವುದು ಆಂತಕಕ್ಕೆ ತುಂಬಾ ಎಡೆಮಾಡಿಕೊಟ್ಟಿದೆ ಎಂದು ಸ್ಥಳೀಯರ ಆರೋಪವಾಗಿದೇ.

ನಿತ್ಯ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಇಲಾಖೆ ಆಗಲಿ ಅಥವಾ ಸ್ಥಳೀಯ ಆಡಳಿತವಾಗಲಿ ಅಕ್ರಮ ಮರಳು ಗಣಿಗಾರಿಕೆ ತಡೆಯದೆ ಇರುವುದರಿಂದ ಅಧಿಕಾರಿಗಳು ಈ ಮರಳು ದಂದೆಗೆ ಸಾಮೀಲು ಈರಬಹುದು ಎಂದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ ಇನ್ನೂ ಮೂಂದಾದರು ತಾಲ್ಲೂಕು ಆಡಳಿತ ಹಾಗೂ ಸಂಬAಧ ಪಟ್ಟ ಇಲಾಖೆ ಯಾವರೀತಿ ಕಾನೂನು ಕ್ರಮ ಜರಗಿಸುತ್ತಾರೊ ಎಂದು ಕಾದುನೋಡಬೇಕಾಗಿದೆ

ವರದಿ ವಿಶ್ವನಾಥ ಜಿ ನಾಯ್ಕ ಕುಮಟಾ

error: