March 29, 2024

Bhavana Tv

Its Your Channel

ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ

ಕೊಡಗು: ಎರಡು ತಿಂಗಳಿನಿAದ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಅನಾಥ ವ್ಯಕ್ತಿ ಪಾಶ್ವ ವಾಯು ಕಾಯಿಲೆಯಿಂದ ಸ್ವಾದಿನ ಕಳೆದುಕೊಂಡು ನರಳುತ್ತಾ ಹಾಸಿಗೆ ಹಿಡಿದಿದ್ದರು ಇವರನ್ನು ಅನಾಥಾಶ್ರಮಕ್ಕೆ ಸೇರಿಸಿ ಎಂದು ಮಡಿಕೇರಿಯ ಆಸ್ಪತ್ರೆ ಸಿಬ್ಬಂದಿ ಕಡೆಯಿಂದ ಕರವೇ ಫ್ರಾನ್ಸಿಸ್ ಡಿಸೋಜ ರವರಿಗೆ ಫೋನ್ ಮಾಡಲಾಗಿತ್ತು. ಹಾಗಾಗಿ ಅನಾಥ ವ್ಯಕ್ತಿಯನ್ನು ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷರು ಮಾನವೀಯತೆ ಮೆರೆದಿದ್ದಾರೆ .

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ಕರ್ಕ(65) ಇವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿದ್ದರು

ಇವರಿಗೆ ಯಾರು ಇರುವುದಿಲ್ಲ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವಾಗ ಪಾರ್ಶ್ವಾಯು ಪೀಡಿತರಾಗಿ ಅನಾಥರಾಗಿ ಬಿದ್ದಿದ್ದನ್ನು ಕಂಡು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ 2 ತಿಂಗಳ ಹಿಂದೆ ಸೇರಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಇವರ ಆರೋಗ್ಯ ಚೇತರಿಸಿಕೊಳ್ಳಲಿಲ್ಲ ಹಾಗಾಗಿ ಅಲ್ಲಿನ ಸಿಬ್ಬಂದಿಗಳು ಕರವೇ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರಿಗೆ ಫೋನ್ ಮುಖಾಂತರ ತಿಳಿಸಿದ ಮೇರೆಗೆ ಇವರನ್ನು ಬೆಂಗಳೂರಿನ ಆಟೋರಾಜ ಸಂಸ್ಥೆಗೆ ಸೇರಿಸಲಾಯಿತು.
ಮಡಿಕೇರಿ ಸರ್ಕಾರಿ ಆಸ್ಪತ್ರೆಯಿಂದ ಆಂಬುಲೆನ್ಸ್ ನಿಂದ ಇವರನ್ನು ಸಾಗಿಸಲಾಯಿತು ಹಾಗೂ ಮಡಿಕೇರಿ ಬೀದಿ ಬೀದಿಗಳಲ್ಲಿ ಅನಾಥರಾಗಿ ಸುತ್ತುತ್ತಿದ್ದ ಸಾಜಿ 65 ವರ್ಷ ಹಾಗೂ ಪೋಲೊಸ್ 35 ವರ್ಷ ಇವರನ್ನು ಸಹ ಬೆಂಗಳೂರು ಆಟೋ ರಾಜ ಸಂಸ್ಥೆಗೆ ಸೇರಿಸಲಾಯಿತು

ಇದೆ ಸಂದರ್ಭದಲ್ಲಿ ಮಡಿಕೇರಿ ಸರ್ಕಾರಿ ಆಸ್ಪತ್ರೆಯಿಂದ ಆಂಬುಲೆನ್ಸ್ ಅನ್ನು ವ್ಯವಸ್ಥೆ ಮಾಡಿಕೊಟ್ಟರು ಹಾಗೂ ಅನಾಥ ವ್ಯಕ್ತಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಬೆಂಗಳೂರು ಆಟೋ ರಾಜ ಫೌಂಡೇಶನ್ ರವರಿಗೆ ಧನ್ಯವಾದಗಳು ಅರ್ಪಿಸುತ್ತೇವೆ.
ಹಾಗೂ ಪಾಶ್ವಾಯು ಪೀಡಿತನಾದ ಅನಾಥ ವ್ಯಕ್ತಿಗೆ ಪೋಲಿಸ್ ಲೆಟರ್ ಕೊಟ್ಟಂತಹ ಅಮ್ಮತ್ತಿ ಪೊಲೀಸ್ ನವರಿಗೆ ಹಾಗೂ ಅಮ್ಮತಿ ಗ್ರಾಮ ಪಂಚಾಯಿತಿಯಿAದ ಲೆಟರ್ ಕೊಟ್ಟಂತಹ ಗ್ರಾಮ ಪಂಚಾಯತಿಯವರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಹಾಗೂ ಕರವೇಗೆ ಸಹಕಾರ ನೀಡಿದ ಮಡಿಕೇರಿ ಸಮಾಜಸೇವಕರಾದ ಸಂದೀಪ್ ರವರಿಗೆ ಕರವೇ ಕಾರ್ಯಕರ್ತರಿಂದ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ ಎಂದು ಕರವೇ ಫ್ರಾನ್ಸಿಸ್ ಡಿಸೋಜ ಹೇಳಿದರು

error: