April 20, 2024

Bhavana Tv

Its Your Channel

ಭಟ್ಕಳ ಬಂದರಿನಲ್ಲಿ ಕೊರೋನಾ ಮಾರ್ಗಸೂಚಿ ಗಾಳಿ ತೂರಿದ ಮೀನುಗಾರರು, ವ್ಯಾಪಾರಸ್ಥರು: ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಭಟ್ಕಳ: ತಾಲೂಕಿನಲ್ಲಿ ಲಾಕ್ ಡೌನನಿಂದಾಗಿ ಇಲ್ಲಿನ ಮೀನುಗಾರಿಕೆ ಬಂದರಿನಲ್ಲಿ ಎರಡು ತಿಂಗಳಿoದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಪುನರಾರಂಭಗೊoಡಿದ್ದು ಬಂದರು ಪ್ರದೇಶ ಚಟುವಟಿಕೆಯಿಂದ ಕೂಡಿದೆ. ಆದರೆ, ಕೊರೋನಾ ವೈರಸ್ (ಕೋವಿಡ್-೧೯) ಹರಡದಂತೆ ವಹಿಸಬೇಕಾಗಿರುವ ಎಚ್ಚರಿಕೆಯನ್ನು ಮೀನುಗಾರರು, ವ್ಯಾಪಾರಸ್ಥರು, ಸ್ಥಳೀಯರು ಮರೆತಿದ್ದಾರೆ
ಲಾಕ್ ಡೌನನಿಂದಾಗಿ ಸ್ಥಗಿತಗೊಂಡಿದ್ದ ಮೀನುಗಾರಿಕೆಯನ್ನು ಆರಂಭಿಸಲು ಮೀನುಗಾರರು, ವ್ಯಾಪಾರಸ್ಥರು ಮನವಿ ಮಾಡಿಕೊಂಡ ಬಳಿಕ ಜಿಲ್ಲಾಡಳಿತ ಮೀನುಗಾರಿಕೆಗೆ ಅವಕಾಶ ನೀಡಿತ್ತು. ಟ್ರಾಲರ್ ಬೋಟನೊಂದಿಗೆ ಪರ್ಶಿನ್ ಬೋಟ್ ಮೀನುಗಾರಿಕೆಯೂ ಆರಂಭಗೊoಡಿದೆ. ಮೀನುಗಾರಿಕೆ ಆರಂಭಗೊoಡ ಬಳಿಕ ಒಂದೆರಡು ದಿನ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತಹ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದ ಮೀನುಗಾರರು ಬರಬರುತ್ತ ಅದರ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಕೊರೋನಾ ವೈರಸ್ ಹರಡದಂತೆ ವಹಿಸಬೇಕಾಗಿರುವ ಮುಂಜಾಗ್ರತೆ ಕ್ರಮಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಆದರೆ, ಸೋಮವಾರದಿಂದ ಮೀನುಗಾರಿಕೆ ಬಂದರಿನಲ್ಲಿ ಇದಾವ ಕ್ರಮಗಳನ್ನು ಪಾಲಿಸಿರುವುದು ಕಂಡುಬರಲಿಲ್ಲ. ಬಂದರು ಪ್ರದೇಶದಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಎಚ್ಚರಿಕೆಯ ಕ್ರಮಗಳನ್ನು ಗಾಳಿಗೆ ತೂರಲಾಗಿತ್ತು.
ಬೋಟನಿಂದ ಹಿಡಿದು ಮೀನುಗಳನ್ನು ತೂಕ ಮಾಡಿ ಬಾಕ್ಸಗಳಲ್ಲಿ ತುಂಬವರೆಗೂ ಯಾವುದೇ ಎಚ್ಚರಿಕೆಯ ಕ್ರಮಗಳನ್ನು ಪಾಲಿಸದೇ ಇರುವುದು ಕಂಡುಬoತು. ಬೋಟಗಳಿಂದ ಮೀನು ಹೊತ್ತು ತರುವ ಮಹಿಳೆಯರು ಗುಂಪುಗುoಪಾಗಿ ನಿಂತುಕೊoಡಿದ್ದರು. ಮೀನು ತೂಕ ಮಾಡುವ ಸ್ಥಳದಲ್ಲಿ ಕಾರ್ಮಿಕರು ಸೇರಿದಂತೆ ಸ್ಥಳೀಯರು ಗುಂಪು-ಗುoಪಾಗಿ ಜಮಾಯಿಸಿದ್ದರು. ಸಾಮಾಜಿಕ ಅಂತರ ಪಾಲಿಸುವುದು ಒತ್ತಟ್ಟಿಗಿರಲಿ ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ.
ಮೀನುಗಾರಿಕೆ ಆರಂಭವಾಗಿದ್ದರಿoದ ತಾಲ್ಲೂಕಿನ ವಿವಿಧೆಡೆಯಿಂದ ಕಾರ್ಮಿಕರು ಬಂದರಿಗೆ ಬಂದಿದ್ದಾರೆ. ಅವರನ್ನು ಎಲ್ಲಿಂದ ಬಂದಿದ್ದಾರೆ ಎಂದು ವಿಚಾರಿಸುವ, ಹೊರ ಊರುಗಳಿಂದ ಬರುವ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸುವ ಯಾವ ಕ್ರಮಗಳನ್ನು ಕೈಗೊಂಡಿರುವುದು ಬಂದರು ಪ್ರದೇಶದಲ್ಲಿ ಕಂಡುಬರಲಿಲ್ಲ.
ಜನ ಮರುಳೋ ಜಾತ್ರೆ ಮರುಳೋ ಎಂಬoತೆ ಮೀನು ತೂಕ ಮಾಡುವುದನ್ನು ನೂರಾರು ಮಂದಿ ನೋಡುತ್ತಿದ್ದರೆ, ಬೋಟನಿಂದ ಮೀನು ಖಾಲಿ ಮಾಡುವುದನ್ನೂ ನೀಡಲು ಅಷ್ಟೇ ಮಂದಿ ನೋಡುತ್ತಿದ್ದರು. ಎಲ್ಲರೂ ಅಕ್ಕಪಕ್ಕ ನಿಂತುಕೊoಡಿರುವುದು ಬಂದರಿನಲ್ಲಿ ಕಂಡುಬoತು. ಒಟ್ಟಿನಲ್ಲಿ ಮೀನುಗಾರಿಕೆ ಬಂದರಿನಲ್ಲಿ ವಿನಾಕಾರಣ ನೂರಾರು ಮಂದಿ ಅಲ್ಲಲ್ಲಿ ಗುಂಪುಗುoಪಾಗಿ ಸೇರಿದ್ದರಿಂದ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು.

error: