April 25, 2024

Bhavana Tv

Its Your Channel

ಹೊಟೇಲ್ ಹಾಗೂ ಹಾಸ್ಟೆಲ್‌ಗಳಿಂದ ೫೧ ಕ್ವಾರಂಟೈನಿಗರ ಬಿಡುಗಡೆ

ಹೊನ್ನಾವರ: ಬಿಸಿಎಂ ಹಾಸ್ಟೆಲ್‌ನಲ್ಲಿದ್ದ ೩೫ ಜನರಲ್ಲಿ ೫ಜನ ಸೋಂಕಿತರನ್ನು ಚಿಕಿತ್ಸೆಗಾಗಿ ಕಾರವಾರ ಕಳಿಸಿದ್ದರ ಹೊರತಾಗಿ ಉಳಿದ ೩೦ ಜನ ಇಂದು ಕ್ವಾರಂಟೈನ್‌ನಿoದ ಬಿಡುಗಡೆಯಾಗಿದ್ದು ಇನ್ನು ೯ಜನ ಕ್ವಾರಂಟೈನ್‌ನಲ್ಲಿ ಉಳಿದುಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿ ೧೪ ಜನ ಇದ್ದಾರೆ. ವಿವಿಧ ಲಾಡ್ಜ್ಗಳಿಂದ ೨೧ ಕ್ವಾರಂಟೈನಿಗರ ಬಿಡುಗಡೆಯಾಗಿ ಒಟ್ಟೂ ೫೧ಜನರ ಬಿಡುಗಡೆಯಾದಂತಾಗಿದೆ. ಬೇರೆ ಬೇರೆ ಹೊಟೇಲ್‌ಗಳಲ್ಲಿ ೫೬ ಜನರಿದ್ದಾರೆ. ಈವರೆಗೆ ವಿವಿಧ ಕ್ವಾರಂಟೈನ್‌ಗಳಿoದ ಸೋಂಕು ಶಂಕಿತರ ೪೦೬ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳಿಸಲಾಗಿತ್ತು. ಅದರಲ್ಲಿ ೨೦೮ ಜನರ ವರದಿ ಬಂದಿದ್ದು ಅದರಲ್ಲಿ ಮುಂಬೈನಿoದ ಬಂದ ೮ಜನರ ಹೊರತಾಗಿ ಇತರ ಯಾರಿಗೂ ಸೋಂಕು ತಗಲಲಿಲ್ಲ. ಇನ್ನೂ ೧೯೦ ವರದಿಗಳು ಬರಬೇಕಾಗಿದೆ.
ಇದರಿಂದ ಒಂದೇ ಹಾಸ್ಟೆಲ್ ಅಥವಾ ಹೊಟೇಲ್ ಕಟ್ಟಡದಲ್ಲಿದ್ದರೂ ಎಲ್ಲರಿಗೂ ಸೋಂಕು ತಗಲುವುದಿಲ್ಲ ಎಂಬುದು ಖಚಿತವಾಗಿದೆ. ಇದರ ಹೊರತಾಗಿ ಆಡಳಿತದ ಸಿಬ್ಬಂದಿಗಳ ವೈದ್ಯರ, ದಾದಿಯರ, ಪೋಲೀಸರ, ಸಾರ್ವಜನಿಕರ ಎಲ್ಲರ ಸಹಕಾರದಿಂದ ಸಮರ್ಪಕವಾಗಿ ಲಾಕ್‌ಡೌನ್ ಮತ್ತು ಸೀಲ್‌ಡೌನ್ ಅಗತ್ಯವಿದ್ದಾಗ ನಡೆಸಿದ ಕಾರಣ ಸೋಂಕು ಸಾರ್ವಜನಿಕರಿಗೆ ಇದುವರೆಗೂ ತಗಲಿಲ್ಲ, ಸೋಂಕು ತಗಲಿದವರು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ವದಂತಿಗಳನ್ನು ಹಬ್ಬಿಸಬಾರದು, ವದಂತಿಗಳನ್ನು ನಂಬಬಾರದು ಎಂದು ತಹಶೀಲ್ದಾರ ವಿವೇಕ ಶೇಣ್ವಿ ಹೇಳಿದ್ದಾರೆ.

error: