March 29, 2024

Bhavana Tv

Its Your Channel

ಭಟ್ಕಳ ಕಾರ್ಯನಿರತ ಪತ್ರಕರ್ತ ಸಂಘದಿOದ ಸೌಹಾರ್ಧ ಸಭೆ

ಭಟ್ಕಳ: ಪತ್ರಕರ್ತರು ಕಳೆದ ೧೯೯೩ರಿಂದಲೂ ಸಂಘಟಿತರಾಗಿ ಕಾರ್ಯನಿರತ ಪತ್ರಕರ್ತರ ಸಂಘವನ್ನು ಸ್ಥಾಪಿಸಿಕೊಂಡು ಸೌಹಾರ್ಧಯುತವಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಇದ್ದಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹೇಳಿದರು.
ಅವರು ಸೋಮವಾರ ನಡೆದ ಕಾರ್ಯನಿರತ ಪತ್ರಕರ್ತರ ಸಭೆಯಲ್ಲಿ ಸಂಘದ ಸದಸ್ಯರುಗಳಿಗೆ ಈದ್-ಉಲ್-ಫಿತ್ರ ಹಬ್ಬದ ಶುಭಾಶಯ ಕೋರಿ ಮಾತನಾಡುತ್ತಿದ್ದರು.
ಪತ್ರಕರ್ತರಲ್ಲಿ ಯಾವುದೇ ಜಾತಿ, ಮತ, ಪಂಥಗಳೆನ್ನುವ ಬೇಧವಿಲ್ಲ, ನಾವೆಲ್ಲರೂ ಒಂದೇ ಮನೆಯ ಸದಸ್ಯರಂತೆ ಕಳೆದ ಹಲವಾರು ವರ್ಷಗಳಿಂದ ಇದ್ದೇವೆ. ನಮ್ಮಲ್ಲಿ ಪ್ರತಿ ವರ್ಷವೂ ಕೂಡಾ ಪರಸ್ಪರರ ಹಬ್ಬಗಳಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವ ಪರಿಪಾಠ ಕಳೆದ ಹಲವಾರು ವರ್ಷಗಳಿಂದ ನಡೆದು ಬಂದಿದ್ದು ಒಂದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು ಇದೇ ರೀತಿಯಾದ ಸೌಹಾರ್ಧತೆ ಮುಂದುವರಿಯಲಿ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ದೂರಾಗಿ ನಾವೆಲ್ಲರೂ ಉತ್ತಮ ಜೀವನ ಮಾಡುವಂತಾಗಲಿ ಎಂದು ಹಾರೈಸಿದರು.
ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯ ಎಂ. ಆರ್. ಮಾನ್ವಿ ಮಾತನಾಡಿ ರಮ್ಜಾನ್ ಹಬ್ಬವನ್ನು ನಾವು ಮನೆಯಲ್ಲಿಯೇ ಆಚರಿಸಿದ್ದೇವೆ. ಎಲ್ಲರೂ ಕೂಡಾ ದೇಶದ ವಳಿತಿಗಾಗಿ ನಮ್ಮೆಲ್ಲರ ಎಳಿಗೆಗಾಗಿ ಪ್ರಾರ್ಥನೆ ಸಲ್ಲಿಸಿದ್ದು ಮುಂದಿನ ದಿನಗಳು ಉತ್ತಮ ದಿನಗಳಾಗಲಿ ಎಂದು ಹಾರೈಸಿದರು. ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಾವು ಪರಸ್ಪರರ ಹಬ್ಬಗಳಂದು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಕೂಡಾ ಒಂದು ಸೌಹಾರ್ಧತೆಗೆ ಉತ್ತಮ ಸಾಕ್ಷಿ ಎಂದರು.
ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್ ಮಾತನಾಡಿ ನಮ್ಮಲ್ಲಿ ಪರಸ್ಪರರಲ್ಲಿ ಯಾವದೇ ರೀತಿಯ ಭಿನ್ನಾಭಿಪ್ರಾಯಗಳಿದ್ದರೆ ನಮ್ಮಲ್ಲಿಯೇ ಬಗೆಹರಿಸಿಕೊಳ್ಳೋಣ. ನಾವು ಪರಸ್ಪರ ಸೌಹಾರ್ಧತೆಯಂದ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುತ್ತಿದ್ದೇವೆ. ಪತ್ರಕರ್ತನಾದವನು ಸದಾ ಸತ್ಯದ ಕಡೆಗೆ ಇದ್ದಾಗ ಯಾರಿಗೂ ಕೂಡಾ ತಲೆಬಾಗುವ ಪ್ರಶ್ನೆಯೇ ಬರದು ಎಂದರು.
ಸಭೆಯಲ್ಲಿ ತಾಲೂಕಾ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ, ಕಾರ್ಯದರ್ಶಿ ಮೋಹನ ನಾಯ್ಕ, ಉಪಾಧ್ಯಕ್ಷ ರಿಜ್ವಾನ್ ಗಂಗಾವಳಿ, ಖಜಾಂಚಿ ಅತಿಕುರ್‌ರೆಹಮಾನ್ ಶಾಬಂದ್ರಿ, ಸಹಕಾರ್ಯದರ್ಶಿ ಪ್ರಸನ್ನ ಭಟ್ಟ, ಮಾಜಿ ಅಧ್ಯಕ್ಷ ಸತೀಶಕುಮಾರ್, ಜಿಲ್ಲಾ ಸಮಿತಿ ಸದಸ್ಯ ಫಯ್ಯಾಜ್ ಮುಲ್ಲಾ, ಭವಾನಿಶಂಕರ ನಾಯ್ಕ, ಸದಸ್ಯರುಗಳಾದ ಇನಾಯತ್ ಗವಾಯಿ, ಉದಯ ನಾಯ್ಕ, ರಾಘವೇಂದ್ರ ಮಲ್ಯ, ಶೈಲೇಶ ವೈದ್ಯ, ಅತಿಕುರ್‌ರೆಹಮಾನ್ ಡಾಂಗಿ, ಮೊಹಮ್ಮದ್ ಶಾಹಿದ್ ಮುಕ್ತೇಸರ್ ಮುಂತಾದವರು ಉಪಸ್ಥಿತರಿದ್ದರು.

error: