March 25, 2024

Bhavana Tv

Its Your Channel

ಜಿಲ್ಲೆಯಲಿ ಸುಸಜ್ಜಿತ ಸಿಂಥೆಟಿಕ್ ಕ್ರೀಡಾಂಗಣ ಅತೀ ಅವಶ್ಯ ಕಾಶಿನಾಥ ನಾಯ್ಕ, ಬೆಂಗಳೆ

ಶಿರಸಿ: ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು ಕ್ರೀಡಾ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ಹೊರಹೊಮ್ಮಲು, ಸುಸಜ್ಜಿತ ಸಿಂಥೆಟಿಕ್ ಕ್ರೀಡಾಂಗಣ ಅತೀ ಅವಶ್ಯ. ಕ್ರೀಡಾಭಿವೃದ್ಧಿಯ ದಿಶೆಯಲ್ಲಿ ಸರಕಾರ ಗಂಭಿರವಾಗಿ ಚಿಂತನೆ ಮಾಡಬೇಕೆಂದು ಮಾಜಿ ಅಂತರಾಷ್ಟಿಯ ಕ್ರಿಡಾಪಟು, ಕ್ರೀಡಾತಜ್ಞ ಹಾಗೂ ಸೈನಿಕ ಕ್ರೀಡಾಪಟುಗಳ ತರಬೇತುದಾರ ಕಾಶಿನಾಥ ನಾಯ್ಕ, ಬೆಂಗಳೆ ಅಭಿಪ್ರಾಯ ವ್ಯಕ್ತಪಡಿಸದ್ದಾರೆ.

 ಮೂಲತಃ ಶಿರಸಿ ತಾಲೂಕಿನ ಬೆಂಬಳೆ ಗ್ರಾಮದ ನಿವಾಸಿಯಾಗಿದ್ದ ಕಾಶಿನಾಥ ನಾಯ್ಕ ಕಾಮನ್ ವೆಲ್ತ ಕ್ರೀಡಾಕೂಟದಲ್ಲಿ ದೇಶಕ್ಕೆ ಕಂಚಿನ ಪದÀಕ ದೊರಕಿಸುವುದೊಂದಿಗೆ, ಪೂಣೆಯ ಸೈನಿಕ ಕ್ರೀಡಾ ತರಭೇತಿ ಸಂಸ್ಥೆಯಲ್ಲಿ ತರಭೇತುದಾರರಾಗಿ ಕಾರ್ಯನಿರ್ವಹಿಸುವ ಅವರು ಇಂದು ಸ್ಥಳೀಯ ಮಾರಿಕಾಂಬ ಜಿಲ್ಲಾ ಕ್ರೀಡಾಂಗಣದಲ್ಲಿ ಹೆಚ್ಚುವರಿ ಕಾಮಗಾರಿ ವಿಕ್ಷೀಸಿದ ನಂತರ ಮಾತನಾಡುತ್ತ ಹೇಳಿದ್ದರು.

 ಗುಣಮಟ್ಟದ ತರಬೇತಿ, ವೈಜ್ಞಾನಿಕ ಕ್ರೀಡಾಂಗಣದ ಕೊರತೆಯಿಂದ ದೈಹಿಕ ಮತ್ತು ಸಾಮರ್ಥ್ಯದ ಕ್ರೀಡಾಪಟುಗಳು ಇದ್ದಾಗಲೂ, ಮೂಲಭೂತ ಉನ್ನತ ಮಟ್ಟದ ಕ್ರೀಡಾಂಗಣ ಮತ್ತು ತರಭೇತಿಯ ಕೊರತೆಯಿಂದ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿರುವುದು ವಿಷಾಧಕರ. ಸ್ಥಳಿಯ  ಕ್ರೀಡಾಂಗಣದಲ್ಲಿ ಕಾಮಗಾರಿ ಜರುಗಿಸುತ್ತಿರುವ ಮಣ್ಣಿನ ಓಟದ ಪಥದ ಬದಲಾಗಿ, ಸಿಂಡ್ರೆಲ್ ಅಥವಾ ಸಿಂಥೆಟಿಕ್ ಕ್ರೀಡಾಂಗಣ ಮಾಡಿದ್ದಲ್ಲಿ ರಾಜ್ಯ ಮತ್ತು ದಕ್ಷಿಣ ಭಾರತ ಮತ್ತು ರಾಷ್ಟçಮಟ್ಟದ ಕ್ರೀಡಾಕೂಟ ಜರುಗುವುದೊಂದಿಗೆ ಸ್ಥಳೀಯ ಕ್ರೀಡಾ ವಾತಾವರಣ ಉತ್ಕçಷ್ಟಿಗೆ ಕಾರಣವಾಗುತ್ತಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಕ್ರೀಡಾ ಪೂರಕ ತಂತ್ರಜ್ಞಾನ, ತರಭೇತಿ ಕ್ರೀಡಾಪಟುಗಳ ನೈತಿಕತೆ ಯೋಜಿಸುವ ದಿಶೆಯಲ್ಲಿ ಸರಕಾರ ಸಕರಾತ್ಮಕ ನಿಲುವು ತಳಿದಾಗಲೇ ಅಂತರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳು ಜಿಲ್ಲೆಯಿಂದ ಗುರುತಿಸಲು ಸಾದ್ಯವೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಪಂಧನಾ ಸ್ಪೋðಟ್ಸ ಅಕಾಡೆಮಿಯ ಅಧ್ಯಕ್ಷ ರವೀಂದ್ರ ನಾಯ್ಕ ಉಪಸ್ಥಿತರಿದ್ದರು.

ಕ್ರೀಡಾ ಅಕಾಡೆಮಿ:

 ಸೈನಿಕ ಸೇವೆಯಿಂದ ನಿವೃತ್ತಿಯನ್ನು ಪಡೆದು ಮುಂದಿನ ದಿನಗಳಲ್ಲಿ ಜಿಲ್ಲಾ ಕ್ರೀಡಾಪಟುಗಳಿಗೆ ಸಹಾಯವಾಗುವಂತೆ ಕ್ರೀಡಾ ಅಕಡೆಮಿ ಸ್ಥಾಪಿಸಿ ಉನ್ನತ ಮಟ್ಟದ ತರಭೇತಿ, ತಂತ್ರಜ್ಷಾನ ಹಾಗೂ ರಾಜ್ಯ, ರಾಷ್ಟç ಮಟ್ಟದಲ್ಲಿ ಸ್ಪರ್ಧೆಗೆ ಅವಕಾಶವಾಗುವಂತೆ ಕಾರ್ಯನಿರ್ವಹಿಸುವುದಾಗಿ ಕಾಶಿನಾಥ ನಾಯ್ಕ ಅವರು ತಮ್ಮ ಕ್ರೀಡಾಭಿಪ್ರಾಯ ವ್ಯಕ್ತಪಡಿಸಿದರು.
error: