April 24, 2024

Bhavana Tv

Its Your Channel

ಭಟ್ಕಳದಲ್ಲಿ ಲಾಕ್ ಡೌನ್ ಎಫೆಕ್ಟ; ರಸ್ತೆಯಲ್ಲಿ ಸಂಚರಿಸುವವರ ಮೇಲೆ ಮತ್ತೆ ಲಾಠಿಯ ಭಯ ತೋರಿಸಿದ ಪೋಲಿಸರು

ಭಟ್ಕಳ: ನಾಲ್ಕನೇ ಹಂತದ ಲಾಕ್ ಡೌನ್ ಕೊಂಚಮಟ್ಟಿಗೆ ಸಡಿಲವಾದ ಕಾರಣ ಜನರು ಹಲವು ದಿನಗಳಿಂದ ಸ್ಥಗಿತವಾಗಿದ್ದ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಪೇಟೆ ಕಡೆ ಮುಖಮಾಡಿದ್ದರು ಆದರೆ ಇಂದು ಏಕಾಏಕಿ ಕಾರ್ಯಾಚರಣೆಗಿಳಿದ ಪೋಲಿಸರು ಮತ್ತೆ ತಮ್ಮ ಲಾಠಿಗೆ ಕೆಲಸ ಕೊಡಲು ಶುರುಮಾಡಿದ್ದಾರೆ.
ಸಂಶುದ್ಧಿನ್ ಸರ್ಕಲ್, ತಾಲೂಕ ಪಂಚಾಯತ್ ಎದುರುಗಡೆ ಸೇರಿದಂತೆ ಭಟ್ಕಳ ನಗರದ ಪ್ರಮುಖ ರಸ್ತೆಗಳಲ್ಲಿ ಪೋಲಿಸರ ತಂಡ ಕಾರ್ಯಾಚರಿಸುತ್ತಿದ್ದು ಮುಖ್ಯವಾಗಿ ದ್ವಿಚಕ್ರ ವಾಹನಗಳನ್ನು ತಡೆದು ವಿಚಾರಣೆ ಮಾಡಲಾಗುತ್ತಿದೆ. ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಕೆಲವರ ಮೇಲೆ ಲಾಟಿ ಏಟಿನ ಪ್ರಯೋಗವು ಕೂಡ ನಡೆದಿದೆ.
ಭಟ್ಕಳದಲ್ಲಿ ಲಾಕ್ ಡೌನ್ ೪.೦ ಕೂಡ ಅತ್ಯಂತ ಕಠಿಣವಾಗಿ ಜಾರಿಗೆ ತರಲಾಗಿದೆ. ಆದರೆ ಜಿಲ್ಲೆಯ ಇತರೆ ತಾಲೂಕಿನ ಪರಿಸ್ಥಿತಿ ಕೊಂಚಮಟ್ಟಿಗೆ ಸಹಜವಾಗಿದ್ದು ಭಟ್ಕಳದಲ್ಲಿ ಮಾತ್ರ ಇಷ್ಟೊಂದು ಕಠಿಣ ನಿಲುವು ತಳೆಯುತ್ತಿರುವುದೇಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಒಂದು ಕಡೆ ಕೋವಿಡ್ ೧೯ ಸೋಂಕು ಭಟ್ಕಳದಲ್ಲಿ ಸಮುದಾಯ ಹಂತಕ್ಕೆ ತಲುಪಿಲ್ಲ ಎನ್ನುತ್ತಿರುವ ಜಿಲ್ಲಾಡಳಿತ ಮತ್ತೊಂದು ಕಡೆ ಇದ್ದಕ್ಕಿದ್ದಂತೆ ಲಾಕ್ ಡೌನ್ ನಿಯಮವನ್ನು ಮತ್ತಷ್ಟು ಕಠಿಣಗೊಳೊಳಿಸುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

error: