April 25, 2024

Bhavana Tv

Its Your Channel

ಕೊರೊನಾ ನಿಯಂತ್ರಣ – ದ್ವಿತೀಯ ಹಂತಕ್ಕಾಗಿ ತಂಡ ರಚನೆ

ಹೊನ್ನಾವರ ಮೇ ೨೮ : ಮೊದಲ ಹಂತದಲ್ಲಿ ವಿವಿಧ ಇಲಾಖೆಗಳು ಸೇರಿ ನಡೆಸಿದ ಕೊರೊನಾ ನಿಯಂತ್ರಣ ಅಭಿಯಾನ ಬಹುಪಾಲು ಯಶಸ್ವಿಯಾಗಿದೆ. ಜೂನ್ ೧ರಿಂದ ಎರಡನೇ ಹಂತಕ್ಕಾಗಿ ಈ ಹೊಸ ತಂಡವನ್ನು ರಚಿಸಲಾಗಿದೆ ಎಂದು ತಹಶೀಲ್ದಾರ ವಿವೇಕ ಶೇಣ್ವಿ ಹೇಳಿದ್ದಾರೆ.
ಕೊರೊನಾ ಆರಂಭವಾದoದಿನಿoದ ಜಿಲ್ಲೆಯ ಹೊರಗಿನಿಂದ ಬಂದ ೧೪೬ ಜನರನ್ನು ವಿವಿಧ ಹೊಟೆಲ್ ಹಾಗೂ ಹೊಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಇವರಲ್ಲಿ ಕೇವಲ ೯ಜನಕ್ಕೆ ಸೋಂಕು ತಗಲಿದ್ದು ಕಂಡುಬoದು ಅವರು ಕಾರವಾರ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದಾರೆ. ೩೩ಜನ ಇನ್ನೂ ಕ್ವಾರಂಟೈನ್‌ನಲ್ಲಿ ಉಳಿದುಕೊಂಡಿದ್ದು ೧೧೩ ಜನ ಬಿಡುಗಡೆಗೊಂಡಿದ್ದಾರೆ. ೩೩ ಜನ ಕ್ವಾರಂಟೈನ್‌ನಲ್ಲಿ ಉಳಿದಿದ್ದು ಅವರಲ್ಲಿ ಈವರೆಗೆ ಯಾವ ಲಕ್ಷಣ ಕಂಡುಬoದಿಲ್ಲ. ತಾಲೂಕಿನ ಇನ್ನಾವುದೇ ನಾಗರಿಕರಿಗೂ ಸೋಂಕು ಕಂಡುಬoದಿಲ್ಲ. ವಿವಿಧ ಇಲಾಖೆಗಳ ಸಹಕಾರದಿಂದ ಇದು ಬಹುಪಾಲು ಯಶಸ್ವಿಯಾಯಿತು. ಇನ್ನು ಮುಂದೆ ಲಾಕ್‌ಡೌನ ಇನ್ನೂ ಸಡಿಲಗೊಳ್ಳಲಿದೆ. ಪೋಲಿಸರು ಎಲ್ಲಾ ತನಿಖಾ ಠಾಣೆಗಳನ್ನು ಮುಚ್ಚಿದ್ದಾರೆ. ಇನ್ನೂ ತಾಲೂಕಿಗೆ ಬರಲು ಸಾಕಷ್ಟು ಜನ ಕಾದು ಕುಳಿತಿದ್ದಾರೆ. ಇವರನ್ನು ಗುರುತಿಸಿ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವಂತೆ ಮಾಡಲು, ಆಗಾಗ ತಪಾಸಣೆ ಮಾಡಲು ಕಾರ್ಯಪಡೆಯನ್ನು ರಚಿಸಿದ್ದೇನೆ.
ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು ವಿವಿಧ ಪಂಚಾಯತ್‌ಗಳ ಸದಸ್ಯರ ಸಹಕಾರ ಪಡೆಯಬೇಕು. ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ತಮ್ಮ ಪಂಚಾಯತ ಸದಸ್ಯರ ಸಹಕಾರ ಪಡೆಯಬೇಕು, ತಾಲೂಕಾ ಆರೋಗ್ಯಾಧಿಕಾರಿಗಳು ಆಶಾ ಕಾರ್ಯಕರ್ತೆಯರ ಸಹಕಾರ ಪಡೆಯಬೇಕು. ಪೋಲೀಸ್ ಅಧಿಕಾರಿಗಳು ಬೀಟ್ ಪೋಲೀಸರ ನೆರವು ಪಡೆಯಬೇಕು. ಇವರ ತಂಡ ತಾಲೂಕನ್ನು ತಮ್ಮ ಆಡಳಿತದಲ್ಲಿ ಅನುಕೂಲವಾಗುವಂತೆ ವಿಭಜಿಸಿಕೊಂಡು ಆ ಊರಿನಲ್ಲಿ ಹೊಸದಾಗಿ ಯಾರಾದರೂ ಬಂದರೆ ತಕ್ಷಣ ತಾಲೂಕಾ ಆಡಳಿತಕ್ಕೆ ವರದಿ ಮಾಡಿ ಅವರ ಆರೋಗ್ಯ ತಪಾಸಣೆ, ಅಗತ್ಯವಿದ್ದರೆ ಕ್ವಾರಂಟೈನ್, ಅಥವಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಬೇಕು. ಇದರಲ್ಲಿ ಯಾವುದೇ ಬೇಧ ಇಲ್ಲ. ಸಾರ್ವಜನಿಕರು ಮೇಲಿನ ಅಧಿಕಾರಿಗಳಿಗೆ ಸಹಾಯ ನೀಡಿದರೆ ಕೊರೊನಾವನ್ನು ತಾಲೂಕಿನಿಂದ ಹೊರಗೆ ಇಡಲು ಸಾಧ್ಯವಿದೆ ಎಂದು ಅವರು ಹೇಳಿದ್ದು ಹೊಸದಾಗಿ ಬಂದವರನ್ನು ಗುರುತಿಸುವ ಕೆಲಸ ಯಶಸ್ವಿಯಾದರೆ ಕೊರೊನಾ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು. ತಾಲೂಕಿಗೆ ಸಂಬoಧಿಸಿದ ಶಾಸಕರು, ಜನಪ್ರತಿನಿಧಿಗಳು ನಮ್ಮೊಂದಿಗೆ ಇರುತ್ತಾರೆ ಎಂಬ ವಿಶ್ವಾಸವಿದೆ. ಈ ಹಿಂದಿನAತೆ ಮುಂದೆಯೂ ಸಹಕರಿಸಬೇಕು, ಇನ್ನೂ ಎರಡು ಮೂರು ತಿಂಗಳು ಕೊರೊನಾ ಬಗ್ಗೆ ಕಾಳಜಿಯಿಂದಿರೋಣ. ನಮಗಾಗಿ ಮಾತ್ರವಲ್ಲ ಇಡೀ ತಾಲೂಕಿನ ೧.೩೦ ಲಕ್ಷ ಜನತೆಯ ಹಿತಕ್ಕಾಗಿ ನಾವೆಲ್ಲ ಬದ್ಧರಾಗಿರಬೇಕು ಎಂದು ಅವರು ಹೇಳಿದ್ದಾರೆ.
ವರದಿ : ಜಿ.ಯು.ಭಟ್, ಹೊನ್ನಾವರ

error: