April 20, 2024

Bhavana Tv

Its Your Channel

ಜಿಲ್ಲೆಯಲ್ಲಿ ಮತ್ತೆ ಮುಂದುವರೆದ ಕರೋನಾ ಪ್ರಕರಣ: ಕಾರವಾರ ಮತ್ತು ದಾಂಡೇಲಿಯಲ್ಲಿ ಕರೋನಾ ಪಾಸಟಿವ್.


ಕಾರವಾರ: ಜಿಲ್ಲೆಯನ್ನು ಬಿಟ್ಟುಬಿಡದೇ ಕಾಡುತ್ತಿರುವ ಕರೋನಾ ಪ್ರಕರಣ ಜಿಲ್ಲೆಯಲ್ಲಿ ಇಂದು ಮತ್ತೆ ವರದಿಯಾಗಿದ್ದು, ಜಿಲ್ಲಾ ಕೇಂದ್ರ ಕಾರವಾರ ಮತ್ತು ದಾಂಡೇಲಿಯಲ್ಲಿ ಶನಿವಾರ ಹೊಸ ಸೊಂಕಿತರು ಪತ್ತೆಯಾಗಿದ್ದಾರೆ. ಕಾರವಾರದ ಮಹಿಳೆ ತನ್ನ ಮಗಳೊಂದಿಗೆ ಮುಂಬೈನಿ0ದ ಕಾರವಾರಕ್ಕೆ ವಾಪಸ್ಸಾಗಿದ್ದರು. ಹೋಟೆಲ್ ಕ್ವಾರಂಟೈನ್‌ನಲ್ಲಿದ್ದ ಈಕೆಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ.
ದಾಂಡೇಲಿ ಮೂಲದ ೩೮ ವರ್ಷದ ಇಲೆಕ್ಟ್ರಿಶಿಯನ್ ನಲ್ಲಿ ಶೀತ, ಜ್ವರ ಮಾದರಿಯ ಅನಾರೋಗ್ಯದ ಪರಿಣಾಮ ಈತನಿಗೂ ಕರೋನಾ ಪಾಸಟಿವ್ ಪತ್ತೆಯಾಗಿದ್ದು ಈ ಬಗ್ಗೆ ನಾಳೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಇನ್ನು ಜಿಲ್ಲೆಯ ಕುಮುಟಾ ತಾಲೂಕಿನಲ್ಲಿ ನಾಲ್ವರಿಗೆ ಕರೋನಾ ಪಾಸಟಿವ್ ಬಂದಿದೆ ಎನ್ನಲಾಗುತ್ತಿದ್ದು ಇಂದು ಸಾಯಂಕಾಲದ ಹೆಲ್ತ ಬುಲೆಟಿನ್‌ನಲ್ಲಿ ಜಿಲ್ಲೆಯ ಹೊಸ ಸೊಂಕಿತರು ೨ ಎಂದು ನಮೊದಾಗಿರುದರಿಂದ ಈ ಬಗ್ಗೆ ಸ್ಪಷ್ಟತೆ ಇಲ್ಲ. ಒಟ್ಟು ಸೊಂಕಿತರು ೭೭ ಜನರಾಗಿದ್ದು, ಈವರೆಗೆ ೪೩ಜನ ಗುಣಮುಖರಾಗಿದ್ದು ಸಕ್ರೀಯ ಪ್ರಕರಣ ೩೪ ಆಗಿದೆ

error: