April 26, 2024

Bhavana Tv

Its Your Channel

ಕುಮುಟಾದಲ್ಲಿ ೪ ಕರೊನಾ ಪ್ರಕರಣಗಳು ದೃಢ ೨೯ ಜನರ ವರದಿ ಬಾಕಿ; ಉಪವಿಭಾಗಾಧಿಕಾರಿ ಅಜಿತ್ ಎಂ. ರೈ

ಕುಮಟಾ :ತಾಲೂಕಿನಲ್ಲಿ ಮೇ. ೩೦ ಭಾನುವಾರ ಬಂದ ಪ್ರಯೋಗಾಲಯದ ವರದಿಯಲ್ಲಿ ಒಟ್ಟೂ ೪ ಕರೊನಾ ಪ್ರಕರಣಗಳು ದೃಢಪಟ್ಟಿದ್ದು ಎಲ್ಲವೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಪ್ರಯೋಗಾಲಯಕ್ಕೆ ಕಳುಹಿಸಿದ ಕ್ವಾರಂಟೈನ್​ನಲ್ಲಿದ್ದ ೨೯ ಜನರ ಗಂಟಲುದ್ರವದ ಪರೀಕ್ಷಾ ವರದಿ ಇನ್ನೂ ಬರಬೇಕಿದೆ ಎಂದು ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭಾನುವಾರ ದೃಢ ಪಟ್ಟ ಪ್ರಕರಣದಲ್ಲಿ ನಾಲ್ವರೂ ಮೇ. ೨೬ಕ್ಕೆ ಮಹಾರಾಷ್ಟ್ರದಿಂದ ಆಗಮಿಸಿದ್ದು ಅದೇ ದಿನ ಗಂಟಲುದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಭಾನುವಾರ ವರದಿ ಬಂದಿದೆ. ಇವರೆಲ್ಲರೂ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದವರು ಹೀಗಾಗಿ ಸೀಲ್​ಡೌನ್ ಅಥವಾ ಕಂಟೈನ್ಮೆಂಟ್ ಝೋನ್ ಮಾಡುವ ಅಗತ್ಯವಿಲ್ಲ.
ತಾಲೂಕಿನಲ್ಲಿ ಈಗಾಗಲೇ ಸೋಂಕಿತರ ಪ್ರಾಥಮಿಕ ಸಂರ‍್ಕಕ್ಕೆ ಬಂದ ೧೯ ಮಂದಿ ಹಾಗೂ ಎರಡನೇ ಹಂತದ ಸಂರ‍್ಕಕ್ಕೆ ಬಂದ ೨೫ ಮಂದಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದಾರೆ. ಸದ್ಯ ಸೋಂಕಿತರನ್ನು ಕಾರವಾರಕ್ಕೆ ಚಿಕಿತ್ಸೆಗೆ ಕಳುಹಿಸಲಾಗುತ್ತಿದೆ. ಸೋಂಕಿತರ ಸಂಖ್ಯೆ ತೀರಾ ಹೆಚ್ಚಾದರೆ ಅನುಕೂಲವಾಗಲೆಂದು ತಾಲೂಕಾಸ್ಪತ್ರೆಯಲ್ಲಿ ೩೫ ಹಾಸಿಗೆಯ ಸುಸಜ್ಜಿತ ಪ್ರತ್ಯೇಕ ಕರೊನಾ ವರ‍್ಡ ಸಿದ್ಧವಾಗಿದೆ. ಇದರಿಂದ ಆಸ್ಪತ್ರೆಗೆ ಇತರ ಚಿಕಿತ್ಸೆಗೆ ಬರುವವರು ಯಾವುದೇ ಆತಂಕವಿಲ್ಲದೇ ಬಂದು ಹೋಗಬಹುದು ಎಂದರು

error: