April 20, 2024

Bhavana Tv

Its Your Channel

ಕುಮುಟಾದಲ್ಲಿ ಜಿಲ್ಲಾ ಉಸ್ತುವಾರಿ ಸಚೀವರಿಂದ ಪ್ರಗತಿ ಪರಿಶೀಲನಾ ಸಭೆ

ಕುಮಟಾ :ತಾಪಂ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ, ಸಕ್ಕರೆ ಹಾಗೂ ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಕರೊನಾ ಸಮಸ್ಯೆ ಇದೆಯೆಂದು ಯಾವುದೇ ಅಭಿವೃದ್ಧಿ ಕಾರ್ಯವನ್ನು ನಿಲ್ಲಿಸಲಾಗದು. ರಾಜ್ಯದಲ್ಲಿ ಒಂದು ವರ್ಷದ ಶಿಕ್ಷಣವನ್ನು ಕಳೆದುಕೊಳ್ಳಬಹುದು ಆದರೆ ಒಂದೇಒಂದು ಮಗುವನ್ನು ಕಳೆದುಕೊಳ್ಳಲು ಸರ್ಕಾರ ಸಿದ್ಧವಿಲ್ಲ. ಶಿಕ್ಷಣ ಹೊರತುಪಡಿಸಿ ಉಳಿದೆಲ್ಲ ವ್ಯವಸ್ಥೆಗಳು ಪ್ರಗತಿಯಲ್ಲಿರಲಿದೆ. ಜನ ನಮ್ಮ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಮಾಡುತ್ತಿದ್ದಾರೆ. ಮಳೆಗಾಲ ಎದುರಿಗಿದೆ. ಆದ್ಯತೆ ಮೇರೆಗೆ ಎಲ್ಲ ಕೆಲಸ ಆಗಬೇಕು ಎಂದು ಅಽಕಾರಿಗಳಿಗೆ ಸಚಿವರು ಸೂಚಿಸಿದರು.
ಕೆಲವೇ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಕರೊನಾ ಮುಕ್ತವಾಗುವ ನಿರೀಕ್ಷೆ ಇದೆ. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಬಸ್​ಗಳನ್ನು ಆರಂಭಿಸಿದರೂ ಪ್ರಯಾಣಿಕರು ಮಾತ್ರ ಬರುತ್ತಿಲ್ಲ. ಜನರಲ್ಲಿ ಸಾಕಷ್ಟು ಭಯ ಹಾಗೂ ಜಾಗೃತಿ ಇದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಸರ್ಕಾರದ ಜೊತೆ ಪೂರ್ಣಪ್ರಮಾಣದಲ್ಲಿ ಸಹಕರಿಸಬೇಕು. ಕ್ವಾರಂಟೈನ್ ಶಿಷ್ಟಾಚಾರ ಪಾಲನೆಯಾಗಬೇಕು. ಜನರು ಸದಾ ಎಚ್ಚರಿಕೆ ತೆಗೆದುಕೊಳ್ಳಬೇಕು.
ಅರಣ್ಯ ಇಲಾಖೆಯ ಅಧಿಕಾರಿಗಳು ಉಪ್ಪಿನಪಟ್ಟಣ ಭೇಟಿ ವೇಳೆ ಅನುಪಸ್ಥಿತರಿರುವದಕ್ಕೆ ಕೋಪಗೊಂಡ ಸಚಿವ ಹೆಬ್ಬಾರ, ಪ್ರಗತಿ ಪರಿಶೀಲನೆ ಸಭೆಯಲ್ಲಿ ಎಸಿಎಫ್ ಪ್ರವೀಣಕುಮಾರ ಬಸ್ರೂರು ಉತ್ತರಿಸಲಾಗದೇ ತಡಬಡಾಯಿಸಿದರು. ನಾನೇನೂ ಮೋಜಿಗಾಗಿ ಬಂದಿಲ್ಲ. ಜಿಲ್ಲಾ ಸಚಿವರ ಭೇಟಿ ಮೊದಲೇ ಗೊತ್ತಿರಲಿಲ್ವಾ? ಇದೇ ಕೊನೆಯ ಎಚ್ಚರಿಕೆ, ಇನ್ನೊಮ್ಮೆ ಹೀಗಾದರೆ ಸಹಿಸುವುದಿಲ್ಲ ಎಂದರು.
ನಮ್ಮ ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ನಾವು ಅರಣ್ಯ ಅಽಕಾರಿಗಳಿಂದ ಕಲಿಯಬೇಕಿಲ್ಲ. ಇಲ್ಲಿ ಇಲಾಖೆ ಬರುವದಕ್ಕಿಂತ ಮೊದಲೇ ಅರಣ್ಯ ಬೆಳೆಸಿ ಉಳಿಸಿದ್ದೇವೆ. ಜಿಲ್ಲೆಯ ಜನತೆ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನಮಗೂ ಬದುಕುವ ಹಕ್ಕಿದೆ. ಜಿಲ್ಲೆಯ ಪರಿಸರ ಉಳಿಯಬೇಕು ಅದರ ಪರವಾಗಿಯೇ ಇದ್ದೇವೆ. ತೆರಕು ಹೆಕ್ಕುವದಕ್ಕೂ ಕಾಯಿದೆ ಹೇಳುತ್ತೀರಿ. ಅಭಿವೃದ್ಧಿ ಕೆಲಸಗಳಿಗೂ ಅಡ್ಡಿಯಾಗುತ್ತಿದ್ದೀರಿ. ನಿಮ್ಮದೇ ಇಲಾಖೆ ಕಟ್ಟಡಗಳನ್ನು ಅರಣ್ಯ ಪ್ರದೇಶದಲ್ಲಿ ಯಾವದೇ ಅನುಮತಿಯಿಲ್ಲದೇ ಕಟ್ಟುತ್ತಿದ್ದೀರಿ. ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಮುಂತಾದ ಅಭಿವೃದ್ಧಿ ವಿಚಾರದಲ್ಲಿ ಅರಣ್ಯ ಅಽಕಾರಿಗಳು ಸಹಕಾರ ಮರೆತು ತೊಂದರೆ ನೀಡಿದರೆ ಸಹಿಸುವುದಿಲ್ಲ, ನಿಮಗೂ ತೊಂದರೆ ತಪ್ಪಿದ್ದಲ್ಲ ಎಂದು ಗುಡುಗಿದರು. ಪುರಸಭೆಯ ಮುಖ್ಯಾಧಿಕಾರಿ ಎಂ.ಕೆ.ಸುರೇಶ ಕೂಡಾ ಸಭೆಯ ಆರಂಭದಲ್ಲಿ ಗೈರು ಹಾಜರಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ತಂಡ್ರಕುಳಿಯ ನಿವಾಸಿಗಳಿಗೆ ಅಂದಿನ ಉಪವಿಭಾಗಾಽಕಾರಿ ನೀಡಿದ ಭರವಸೆಯಂತೆ ಕೊಡಬೇಕಾದ ಬಾಡಿಗೆ ಹಣ ಕೊಡಬೇಕು ಎಂದರು. ಈ ಕುರಿತು ರಾ.ಹೆ ಪ್ರಾಧಿಕಾರ ಹಾಗೂ ಐಆರ್​ಬಿ ಮೇಲಽಕಾರಿಗಳೊಂದಿಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು.
ಸಿಹಿ ಈರುಳ್ಳಿ ಬೆಳೆಗೆ ವಿಪರೀತ ಹಾನಿಯಾಗಿದೆ. ಪರಿಹಾರ ಕೊಡಿಸಬೇಕು, ತದಡಿಯಲ್ಲಿ ಬಾರ್ಜ ಸೇವೆ ಪುನರಾರಂಬಿಸಬೇಕು ಎಂದು ಶಾಸಕ ಶೆಟ್ಟಿ ಕೋರಿದಾಗ ಈ ಬಗ್ಗೆ ಇಲಾಖಾ ಪ್ರಸ್ತಾವನೆಯಂತೆ ಶೀಘ್ರ ಪರಿಹಾರ ವಿತರಣೆಯಾಗಲಿದೆ. ಬಾರ್ಜ ಸೇವೆ ಶೀಘ್ರ ಆರಂಭವಾಗಲಿದೆ ಎಂದು ಸಚಿವರು ಉತ್ತರಿಸಿದರು.
ಶಿಕ್ಷಣ ಇಲಾಖೆಯ ಸರದಿಯಲ್ಲಿ ಬಿಇಓ ರಾಜೇಂದ್ರ ಭಟ್ಟ ಎಸ್​ಎಸ್​ಎಲ್​ಸಿ ಪರೀಕ್ಷೆ ಕುರಿತು ಮಾಹಿತಿ ನೀಡಿ ತಾಲೂಕಿನ ೪೧ ವಿದ್ಯಾರ್ಥಿಗಳಿಗೆ ಬೇರೆ ಜಿಲ್ಲೆಯಲ್ಲಿ ಹಾಗೂ ಬೇರೆ ಜಿಲ್ಲೆಯ ೧೧ ವಿದ್ಯಾರ್ಥಿಗಳಿಗೆ ನಮ್ಮ ತಾಲೂಕಿನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು.
ತಾಪಂ ಇಓ ಸಿಟಿ.ನಾಯ್ಕ, ತಾಲೂಕಿನಲ್ಲಿ ಒಟ್ಟೂ ೨೩೧ ಉದ್ಯೋಗ ಖಾತ್ರಿ ಕಾಮಗಾರಿಗಳಿ ಪ್ರಗತಿಯಲ್ಲಿದೆ ಎಂದರು. ವಸತಿ ಯೋಜನೆಗಳಿಗೆ ಪಹಣಿ ಹಾಗೂ ಮನೆ ನೋಂದಣಿಯ ಕಾರಣದಿಂದ ಹಲವು ಫಲಾನುಭವಿಗಳು ಮನೆ ವಂಚಿತರಾಗಿದ್ದಾರೆ ಎಂದಾಗ, ಸಚಿವರು ಪ್ರತಿಕ್ರಿಯಿಸಿ, ರಾಜೀವಗಾಂಽ ವಸತಿ ಯೋಜನೆಯ ನಿಯಮದಲ್ಲಿ ಅಂಥ ದಾಖಲೆಯ ಅವಶ್ಯಕತೆ ಇಲ್ಲ. ಉದ್ಯೋಗ ಖಾತ್ರಿಯಲ್ಲಿ ಕೃಷಿ, ಕೆರೆ, ಉದ್ಯೋಗ, ಶಾಲೆಗಳಿಗೆ ಹೆಚ್ಚಿನ ಆದ್ಯತೆ ಕೊಡಿ ಎಂದರು.
ಸಚಿವರು ಮುಖ್ಯವಾಗಿ ಆರೋಗ್ಯ, ಪಿಡಬ್ಲು ಡಿ, ಹೆಸ್ಕಾಂ, ತೋಟಗಾರಿಕೆ, ಪಶುಸಂಗೋಪನೆ, ಬಂದರು ಇಲಾಖೆಯ ಪ್ರಗತಿ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಅಜಿತ್ ಎಂ.ರೈ, ಡಿವೈಎಸ್​ಪಿ ನಿಖಿಲ್, ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ತಹಸೀಲ್ದಾರ್ ಮೇಘರಾಜ ನಾಯ್ಕ, ಜಿಪಂ ಸದಸ್ಯರಾದ ಗಜಾನನ ಪೈ ರತ್ನಾಕರ್ ನಾಯ್ಕ , ಪ್ರದೀಪ ನಾಯಕ ದೇವರಬಾವಿ ಇನ್ನಿತರರು ಇದ್ದರು.

error: